ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ
ವಿಜಯಪುರ, 17; ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕರೆಯ ಮೇರೆಗೆ ಕಈಖಆಂ ಕಾಯ್ದೆ/ ಓಕಖ/ಗಕಖ ಪದ್ಧತಿಯನ್ನು ರದ್ದುಗೊಳಿಸಿ. ನಿಶ್ಚಿತ ಹಳೆಯ ಪಿಂಚಣಿ (ಓಕಖ) ಅನ್ನು ಮರುಸ್ಥಾಪಿಸುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು. ಇನ್ನು ಮುಂದೆ ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಎಸ್‌ಎಸ್‌ಜಿಇಎಫ್), ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಎಚ್.ಲೆಂಡಿ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ/ಹೊರಗುತ್ತಿಗೆ/ಅತಿಥಿ ನೌಕರರಿಗೆ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸುವುದು ಹಾಗೂ ನೇರ ನೇಮಕಾತಿಯಲ್ಲಿ ಇವರುಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ, ಜೇಚಾಜೇಷ್ಠತೆ ಆಧಾರದ ಮೇರೆಗೆ ಪದೋನ್ನತಿ ನೀಡಲುಕ್ರಮ ಕೈಗೊಳ್ಳುವುದು. ಶಿಕ್ಷಕರ ಹುದ್ದೆ ಭರ್ತಿ, ವರ್ಗಾವಣೆ, ಸೇವಾ ಜೇಷ್ಠತೆ/ ಸಿ ್ಘ ಆರ್ ಪರಿಷ್ಕರಣೆ ಸಮಸ್ಯೆಗಳನ್ನು ಬಗೆಹರಿಸಿ, ಸರ್ಕಾರಿ ಶಾಲೆಗಳನ್ನು ಉಳಿಸುವುದು. ಆಡಳಿತ ಸುಧಾರಣೆ ಆಯೋಗ-2ರ ನೌಕರ ವಿರೋಧಿ ಶಿಫಾರಸ್ಸುಗಳನ್ನು ಹಿಂಪಡೆಯುವುದು ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸುವುದು. ಲಾಕ್‌ಡೌನ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ತುಟ್ಟಿಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವುದು. ಯಾವುದೇ ವಿಚಾರಣೆ ಇಲ್ಲದೆ, ಅಧಿಕಾರಿ/ ನೌಕರರನ್ನು ಸೇವೆಯಿಂದ ವಜಾಗೊಳಿಸಲು ಅವಕಾಶ ಕಲ್ಪಿಸುವ ಸಂವಿಧಾನದ ವಿಧಿ 310, 311(2) ಚಿ ಛ್ಘಛಿ ಕಾಯಿದೆಯನ್ನು ರದ್ದುಗೊಳಿಸುವುದು. ನಿಯಮಾನುಸಾರ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚನೆ ಮಾಡುವುದು. ನೌಕರರಿಗೆ ಮತ್ತು ಪಿಂಚಣಿದಾರರಿಗೆ ಕೂಡಲೇ ಜಾರಿಗೊಳಿಸುವುದು. ನಗದು-ರಹಿತ ಆರೋಗ್ಯ ವಿಮಾ ಯೋಜನೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುವುದು. ಸಂವಿಧಾನದಲ್ಲಿರುವ ಧರ್ಮನಿರಪೇಕ್ಷತೆಯನ್ನು ಎತ್ತಿಹಿಡಿಯುವುದು; ಎಲ್ಲ ರೀತಿಯ ಮತೀಯವಾದಗಳನ್ನು ಹಿಮ್ಮೆಟ್ಟಿಸುವುದು ಎಂದರು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಸುರೇಶ ಜೀಬಿ ಮಾತನಾಡಿ, ದೈನಂದಿನ ಸರಕು ಸೇವೆಗಳ ಬೆಲೆಯೇರಿಕೆ, ಶಿಕ್ಷಣ, ಆರೋಗ್ಯ ಮತ್ತು ಇತರೆ ಸೇವೆಗಳ ಬೆಲೆಯೇರಿಕೆ ಇನ್ನಿಲ್ಲದಂತೆ ಜನತೆಯನ್ನು ಬಾಧಿಸುತ್ತಿದೆ. ನಿರುದ್ಯೋಗ ದಾಖಲೆ ಪ್ರಮಾಣದಲ್ಲಿ ತಾಂಡವ ವಾಡುತ್ತಿದ್ದು ಜನತೆಯ ಜೀವನೋಪಾಯ ಮಟ್ಟ ಕುಸಿಯುತ್ತಿದೆ. ಕೇಂದ್ರ ಸರ್ಕಾರದ ನೀತಿಗಳು ಕಾರ್ೊರೇಟ್ ಕಂಪನಿಗಳಿಗೆ ಹೆಚ್ಚಿನ ಲಾಭ ಹರಿದು ಹೋಗಲು ಸಹಕಾರಿಯಾಗಿವೆ. ದೇಶದ ಸಾರ್ವಜನಿಕರಂಗದ ಉದ್ದಿಮೆಗಳನ್ನು ಖಾಸಗೀಕರಿಸಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ನೌಕರ ಸಂಘಟನೆಗಳು ನಡೆಸುತ್ತಾ ಬಂದಿರುವ ಹೋರಾಟಗಳ ಪರಿಣಾಮವಾಗಿ ಕೇಂದ್ರ ಸರ್ಕಾರವು ಕಾರ್ೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿರುವ ಎನ್.ಪಿ.ಎಸ್ ಪಿಂಚಣಿ ಪದ್ದತಿಗೆ ಜಾರಿಗೊಳಿಸಲು ತೀರ್ಮಾನಿಸಿರುತ್ತದೆ. ಆದರೆ, ಯು.ಪಿ.ಎಸ್ ಪದ್ಧತಿಯೂ ಸಹ ಎನ್.ಪಿ.ಎಸ್ ನಂತೆಯೇ ಕರಾಳ ಅಂಶಗಳನ್ನು ಹೊಂದಿದೆ.ಈ ಯೋಜನೆಯು ದೇಶಾದ್ಯಂತ ನೌಕರರು ಮತ್ತು ಶಿಕ್ಷಕರನ್ನು ವಂಚಿಸುವ ಸಂಶಯಾಸ್ಪದ ಪ್ರಯತ್ನವಾಗಿದೆ. ಎನ್.ಪಿ.ಎಸ್ ಯೋಜನೆಯಡಿ ಕಈಖಆ0 ನಿಧಿಯ ಫಂಡ್ ಮ್ಯಾನೇಜರುಗಳಿಗೆ ಠೇವಣಿ ಮಾಡಿದ ನೌಕರರ ವಂತಿಗೆ ಮತ್ತು ಸರ್ಕಾರದ ವಂತಿಗೆಯ ಸಂಪೂರ್ಣ ಹಣವನ್ನು ಇಲ್ಲಿಯವರೆಗೆ ಕಈಖಆ0 ಯಿಂದ ರಾಜ್ಯಗಳಿಗೆ ಮರುಪಾವತಿ ಮಾಡಿಲ ಇದು ಎನ್.ಪಿ.ಎಸ್. ಯೋಜನೆಯನ್ನು ಹಿಂಪಡೆದಿದ್ದ ಇತರ ರಾಜ್ಯ ಸರ್ಕಾರಗಳಿಗೆ ಸಮಸ್ಯೆಯಾಗಿ, ಆದೇಶವನ್ನು ಸ್ಥಗಿತಗೊಳಿಸಿರುತ್ತವೆ. ಆದ್ದರಿಂದ. ಯಾವುದೇ ಬದಲಾವಣೆ, ಮಾರ್ಾಡು, ಸುಧಾರಣೆ ಯಾವುದನ್ನೂ ಕೈಗೊಳ್ಳದೆ. ಈ ಹಿಂದೆ ಇದ್ದ ನಿಶ್ಚಿತ ಹಳೆಯ ಪಿಂಚಣಿ (ಓಕಖ) ಅನ್ನು ಮರುಸ್ಥಾಪಿಸುವಂತೆ ಒತ್ತಾಯಿಸಲು ದೇಶದ ಎನ್.ಪಿ.ಎಸ್ ಅಡಿಯಲ್ಲಿ ಬರುವ ಎಲ್ಲ ನೌಕರರು ನೌಕರ ಸಂಘಟನೆಗಳು ಒಗ್ಗಟ್ಟಿನಿಂದ ಸದರಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ದಾಕ್ಷಾಯಿಣಿ ಹುಡೇದ ಮಾತನಾಡಿ, ರಾಜ್ಯದ 7 ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.20 ಲಕ್ಷ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.80 ಲಕ್ಷದಷ್ಟಿದೆ. ಸರ್ಕಾರವು ಅತಿಕಡಿಮೆ ವೇತನ ನೀಡುವಗುತ್ತಿಗೆ/ ಹೊರಗುತ್ತಿಗೆ, ಅತಿಥಿ ನೌಕರರನ್ನು ನೇಮಿಸಿಕೊಂಡು ಸರ್ಕಾರವೇ ಯುವಕರನ್ನು ಶೋಷಿಸುತ್ತಿರುವುದು ಘನಘೋರ ಅನ್ಯಾಯವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿ, ಈಗಾಗಲೇ ಗುತ್ತಿಗೆ/ ಹೊರಗುತ್ತಿಗೆ, ಅತಿಥಿ ಆಧಾರಿತ ನೌಕರರಿಗೆ ನೇರ ನೇಮಕಾತಿಯಲ್ಲಿ ನಿಯಮಾನುಸಾರ ಪ್ರಾತಿನಿದ್ಯ ನೀಡಬೇಕೆಂದು ಒಕ್ಕೂಟವು ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಬಸರಾಜ ಗೌಡರ ಮಾತನಾಡಿ, ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆ ಮತ್ತು ನಿಗಮ/ ಮಂಡಳಿಗಳನ್ನು ವೀಲೀನಗೊಳಿಸುವ ಮೂಲಕ ಹುದ್ದೆಗಳ ರದ್ದತಿಯ ಕ್ರಮಗಳನ್ನು ಹಿಂಪಡೆಯಬೇಕಿದೆ. ಲಾಕ್‌ಡೌನ್ ಸಂದರ್ಭದ ನೆಪವೊಡ್ಡಿ ನೌಕರರ 2020ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದುಗೊಳಿಸಲಾಯಿತು ಮತ್ತು 18 ತಿಂಗಳ ತುಟ್ಟಿಭತ್ಯೆ ಮುಟ್ಟುಗೋಲು ಹಾಕಿಕೊಂಡಿದ್ದು, ಇದುವರೆಗೂ ಇದನ್ನು ಬಿಡುಗಡೆ ಮಾಡಿರುವುದಿಲ್ಲ. ಯಾವುದೇ ವಿಚಾರಣೆ ಇಲ್ಲದೆ, ಅಧಿಕಾರಿ/ನೌಕರರನ್ನು ಸೇವೆಯಿಂದ ವಜಾಗೊಳಿಸಲು ಅವಕಾಶ ಕಲ್ಪಿಸುವ ಸಂವಿಧಾನದ ವಿಧಿ 310 311(2) ಚಿ. ಛ್ಘ ಛಿ ಕಾಯಿದೆಯನ್ನು ರದ್ದುಗೊಳಿಸಬೇಕೆಂದು ಒಕ್ಕೂಟವು ಒತ್ತಾಯಿಸುತ್ತದೆ. ರಾಜ್ಯ ಸರ್ಕಾರಗಳು ನಗದುರಹಿತ ಆರೋಗ್ಯ ವಿಮಾಯೋಜನೆ ಜಾರಿಗೊಳಿಸಲು ಆದೇಶ ಹೊರಡಿಸಿ 2ವರ್ಷಗಳೇ ಕಳೆದಿದ್ದು ಅದು ಕೇವಲ ಬಿಳಿ ಹಾಳೆಯ ಮೇಲೆ ಮಾತ್ರ ಉಳಿದಿದ್ದು, ಜಾರಿಯಾಗೇ ಇಲ್ಲ ಎಂದರು.
ನೌಕರಪರ ಸಂಘಟನೆಯಾದ "ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರಒಕ್ಕೂಟ"ವು "ಂಟಟ ಋಜಚಿ ಖಣಚಿಣಜ ಉಠಣ. ಇಟಠಿಟಠಜ ಈಜಜಜಡಿಚಿಣಠ" ರಾಜ್ಯ/ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಹುಲಗಿಮನಿ, ಈರಣ್ಣ ಹೊಸಟ್ಟಿ, ಎ.ವೈ.ಮಾಶ್ಯಾಳ, ಎಸ್.ಐ. ಬಿರಾಧಾರ, ಎಂ./ಸಿ. ಬಿರಾದಾರ, ಜಿ.ಬಿ. ಗುಣದಾಳ, ಶ್ರೀಧರ ಪಾರಶಟ್ಟಿ, ಜೆ.ಬಿ. ಬಿರಾಧಾರ, ಎ.ಎ.ಅಕ್ಕಿ, ಬಸವರಾಜ ದಂಡಾವತಿ, ಸಚಿ್ಯುದ ಮುಲ್ಲಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.