ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ
ಕಾರವಾರ 19: ರಾಷ್ಟ್ರೀಯ ಹೆದ್ದಾರಿ (ಹುಬ್ಬಳ್ಳಿ -ಯಲ್ಲಾಪುರ - ಅಂಕೋಲಾ) 63 ರ ಅರಬೈಲ್ ಘಟ್ಟದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ.ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವು ಕಂಡಿದ್ದಾರೆ.ಲಾರಿಯೊಂದು ಒವರಟೇಕ್ ಮಾಡುವ ವೇಳೆ ಎದುರಿಗೆ ಬರುತ್ತಿದ್ದ ಕಾರಿಗೆ ಗುದ್ದಿದ ಪರಿಣಾಮ ಕಾರ್ ನಲ್ಲಿದ್ದ ಕುಟುಂಬದವರು ಮೃತಪಟ್ಟಿದ್ದಾರೆ.
ಕಾರ್ ನಲ್ಲಿದ್ದ ಕುಟುಂಬ ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಹೊರಟಿತ್ತು .ಅರಬೈಲ್ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರುಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ. ಮೃತರನ್ನು ಶ್ರೀಕಾಂತ ರೆಡ್ಡಿ, ಅವರ ಪತ್ನಿ ಚೈತ್ರಾ ಹಾಗೂ 4 ವರ್ಷದ ಮಗು ಶ್ರೀಹಾನ್ ಎಂದು ಗುರುತಿಸಲಾಗಿದೆ.ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.