ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

Election of new President and Vice President for Handloom Weavers Production and Sales Cooperative

ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

ಹನುಮಸಾಗರ 19: ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅನಿಲ ಸಿನ್ನೂರ ಹಾಗೂ ಉಪಾಧ್ಯಕ್ಷರಾಗಿ ಅಮರೇಶ ಗುಂಡಪ್ಪ ಜವಳಿ,  ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪರಸಪ್ಪ ವಡಗೇರಿ ಎಂದು ಹೇಳಿದರು. ಹನಮಸಾಗರ ಗ್ರಾಮದಲ್ಲಿ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘದ ಪದಾಧಿಕಾರಿಗಳ ಚುನಾವಣೆಯ ಹಿನ್ನಲೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಅನಿಲ ಸಿನ್ನೂರ ಹಾಗೂ ಗಜೇಂದ್ರ ಎತ್ತಿನಮನಿ, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಮರೇಶ ಗುಂಡಪ್ಪ ಜವಳಿ, ಹಾಗೂ ಚಂದ್ರ ಶೇಖರ ಮನಗೂಳಿ ನಾಮಪತ್ರ ಸಲ್ಲಿಸಿದ್ದರು. ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ ನೂತನ ಅಧ್ಯಕ್ಷರಾಗಿ ಅನಿಲ ಮೋಹನ ಸಿನ್ನೂರ, ಉಪಾಧ್ಯಕ್ಷರಾಗಿ ಅಮರೇಶ ಗುಂಡಪ್ಪ ಜವಳಿ, ಅವಿರೋಧವಾಗಿ ಆಯ್ಕೆಯಾದರೆಂದು ರಿಟರ್ನಿಂಗ್ ಅಧಿಕಾರಿಯಾದ ಪರಸಪ್ಪ ವಣಗೇರಿ ಘೋಷಿಸಿದರು.ಈ ಸಂದರ್ಭದಲ್ಲಿ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘದ  ಹಿರಿಯ ನೇಕಾರರಾದ ಶಂಕ್ರ​‍್ಪ ಸಿನ್ನೂರ, ರಾಮಣಗೌಡ ಕಡೆಮನಿ, ಹನುಮಂತಗೌಡ ಸಿ. ಸಂಘದ ನಿರ್ದೇಶಕರಾದ ಬಾಳಪ್ಪ ಹಿರೇಮನಿ, ದಾವಲಬಿ ಮೈನುದ್ದೀನ್ ಖಾಜಿ, ಸುಮಾ ರಾಘವೇಂದ್ರ ಸಿನ್ನೂರ, ಚಂದ್ರಶೇಖರ ಮನಗೂಳಿ, ಸಂಗಮೇಶ ಸಿನ್ನೂರ, ಶ್ರೀಶೈಲ ಸಿಂಹಾಸನ, ಬಸವರಾಜ ಸಿನ್ನೂರ, ಗುರುರಾಜ ಚಲ್ಮಿ, ನಾಗರಾಜ ಚಾವುಂಡಿ, ಗ್ರಾ.ಪಂ ಅಧ್ಯಕ್ಷರಾದ ರುದ್ರಗೌಡ ಗೌಡಪ್ಪನವರ, ಸದಸ್ಯರಾದ ಮಂಜುನಾಥ ಹುಲ್ಲೂರ, ವಿಶ್ವನಾಥ ಯಾಳಗಿ, ರಿಯಾಜ ಖಾಜಿ, ವಿರೇಶ ಕಟಗಿ, ಹಿರಿಯರಾದ ಸೂಚಪ್ಪ ಭೋವಿ, ಶಂಕ್ರ​‍್ಪ ಸಿನ್ನೂರ, ಹನಮಂತಗೌಡ ಸಿನ್ನೂರ, ಲಕ್ಷ್ಮಣಸಾ ಪಾಟೀಲ, ವಿಜಯಕುಮಾರ ಬಸ್ವಾ, ಮೈನುದ್ದೀನ್ ಖಾಜಿ, ಚೋಳನಗೌಡ ಸಿನ್ನೂರ, ಶಿವನಗೌಡ ಪಾಟೀಲ್, ಸುಭಾಷಚಂದ್ರ ಎತ್ತಿನಮನಿ, ಸುರೇಶ ಶಾಸ್ತ್ರೀ, ಅಮರೇಶ ಕುರ್ನಾಳ, ಶ್ರೀನಿವಾಸ ಸಿನ್ನೂರ, ಬಸವಂತಪ್ಪ ಸಿಂಹಾಸನ, ರಾಮನಗೌಡ ಸಿನ್ನೂರ, ಸೋಮಶೇಖರ ಚಿಲ್ಮಿ, ಸುರೇಶ ಸಿನ್ನೂರ, ಚಂದಪ್ಪ ಶಾಸ್ತ್ರೀ, ಮಹೇಶ ಹುಲಮನಿ, ಕಾರ್ಯದರ್ಶಿ ವಿಶಾಲ ಸಿನ್ನೂರ ಇದ್ದರು.