6ನೇ ವೇತನ ಶಿಫಾರಸ್ಸುಗಳ ಅನುಷ್ಠಾನಕ್ಕೆ ಒತ್ತಾಯ


ಬಾಗಲಕೋಟೆ 03: ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಜಿಲ್ಲಾ ಮಹಾಮಂಡಳ ಆಶ್ರಯದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಗೆ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಚ್.ಆರ್.ಎಂ.ಎಸ್ನಲ್ಲಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಜಿಲ್ಲೆಯ ಎಲ್ಲ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯದಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಿ ತಾಲೂಕಿನಲ್ಲಿ ಬರುವ ಅನುದಾನಿತ ಶಿಕ್ಷಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ವೇತನವನ್ನು ಏಕ ಕಾಲಕ್ಕೆ ಜಿಲ್ಲಾದ್ಯಂತ ಆರಂಭಿಸಿ ಶೀಘ್ರವಾಗಿ ಮುಗಿಸಿ ನೌಕರರಿಗಾಗುವ ತೊಂದರೆಯನ್ನು ಹಾಗೂ ವಿಳಂಬವಾಗುವ ಸಮಯವನ್ನು ಕಡಿಮೆಗೊಳಿಸಲು ಈ ಮೂಲಕ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ, ದಯಾನಂದ ಸಿಕ್ಕೇರಿ, ಪ್ರಧಾನ ಕಾರ್ಯದಶರ್ಿ ಅವಿನಾಶ ಹಿರೇಮಠ, ಎಸ್.ಎ.ಬರಮಗೌಡರ, ಆರ್.ಐ.ಅರಕೇರಿ, ಎಸ್.ಬಿ.ಸಿದ್ದಗೋಣಿ, ಎಂ.ಆರ್.ಕಮ್ಮಾರ, ಎಸ್.ಕೆ.ಕರಡಿ ಸೇರಿದಂತೆ ಇತರರು ಇದ್ದರು.