ಹನುಮನಟ್ಟಿ ಹಳ್ಳಿಗೆ ಬಸ್ ಬಿಡಲು ಎಐಡಿವೈಒ ಸಂಘಟನೆಯಿಂದ ಒತ್ತಾಯ

ಲೋಕದರ್ಶನ ವರದಿ

ಕೊಪ್ಪಳ 12: ಜಿಲ್ಲೆಯ ಹನುಮನಟ್ಟಿ ಗ್ರಾಮಕ್ಕೆ ಆರೇಳು ವರ್ಷಗಳಿಂದ ಬಸ್ ಸೌಕರ್ಯವಿಲ್ಲ  ನೂರಾರು ವಿದ್ಯಾಥರ್ಿಗಳು ಕೊಪ್ಪಳ ಹಾಗೂ ಇರಕಲ್ ಗಡಾಕ್ಕೆ ವಿದ್ಯಾಭ್ಯಾಸಕ್ಕಾಗಿ ದಿನ ನಿತ್ಯಾ ಬರುತ್ತಾರೆ ಹಾಗೂ ವಿದ್ಯಾಥರ್ಿನಿಯರು   ಮೂರು ಕಿಲೋ ಮೀಟರ್ ನಡೆದುಕೊಂಡೇ ಕಾಲೇಜಿಗೆ ಬರಬೇಕಾಗಿದೆ  ಪ್ರೌಢ ಶಾಲಾ ವಿದ್ಯಾಥರ್ಿಗಳಿಗೂ  ಮಕ್ಕಳಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಊರಿನ ಜನರು ಸಮಸ್ಯೆಯಿಂದ ಹೊರತಾಗಿಲ್ಲ. ಇಷ್ಟಾಗಿಯೂ ಬಸ್ ಸೌಲಭ್ಯ ಕಲ್ಪಿಸಿಕೊಡದಿರುಹುದು ಹಳ್ಳಿಗಳ ಪರಿಸ್ಥಿತಿ   ಮತ್ತು  ಸಾರಿಗೆ ವ್ಯವಸ್ಧೆ ಹಾಗೂ ಸಕರ್ಾರದ ಕಾಳಜಿ  ಎತ್ತಿ ತೋರಿಸುವಂತಿದೆ.

ಕೂಡಲೇ ಸಮಸ್ಯೆಯನ್ನು ಅವಲೋಕಿಸಿ ಬಸ್ ಬಿಡಬೇಕೆಂದು ಹನುಮನಟ್ಟಿ ಗ್ರಾಮದ ವಿದ್ಯಾಥರ್ಿಗಳು ಕೆ ಎಸ್ ಆರ್ ಟಿ ಸಿ ವಿಭಾಗ ಅಧಿಕಾರಿಗಳಿಗೆ  ಎಐಡಿವೈಒ ಸಂಘಟನೆಯ ನೇತೃತ್ವದಲ್ಲಿ ಮನವಿಕೊಡಲಾಯಿತು.  

                ಸಮಸ್ಯೆಯೆನ್ನು ಬಗೆಹರಿಸದೆ ಹೋದರೆ ಮುಂದಿನ ದಿನದಲ್ಲಿ ವಿದ್ಯಾಥರ್ಿಗಳು ಗ್ರಾಮದ ಜನರು ಹೋರಾಟ ಮಾಡಬೇಕಾತ್ತದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದಶರ್ಿ ಶರಣು ಗಡ್ಡಿ ಹೇಳಿದರು. ಸಂಘಟನೆಯ ಸದಸ್ಯರಾದ ಶರಣಬಸವ ಪಾಟೀಲ ವಿದ್ಯಾಥರ್ಿಗಳಾದ  ಹನುಮನಗೌಡ ಶ್ರೀಕಾಂತ್ ಶಶಿಕುಮಾರ್ ಮಾರುತಿ ಮರಿಸ್ವಾಮಿ ಭಾಗವಯಿಸಿದ್ದರು.