ಕನಕಗಿರಿಯಲ್ಲಿ ಗೋಶಾಲೆ ತೆರೆಯುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ: ದಡೇಸೂಗೂರು

    ಕೊಪ್ಪಳ 12: ಜಾನುವಾರುಗಳಿಗೆ ಅಗತ್ಯ ಮೇವು ಕಲ್ಪಿಸಲು ಜಿಲ್ಲಾಡಳಿತದಿಂದ ಕನಕಗಿರಿಯಲ್ಲಿ ಗೋಶಾಲೆಯನ್ನು ತೆರೆಯುವಂತೆ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು ಅವರು ಒತ್ತಾಯಿಸಿದರು. 

ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ಕುಂದು ಕೊರತೆಗಳ ದೂರು ಸ್ವೀಕರಿಸಲು ಜಿಲ್ಲೆಯ ಕನಕಗಿರಿ ತಾಲೂಕಿನ ಕನಕಾಚಲಪತಿ ದೇವಸ್ಥಾನದ ಹತ್ತಿರ ಮಂಗಳವಾರದಂದು ಏರ್ಪಡಿಸಲಾದ ಜನಸಂಪರ್ಕ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ಬರ ಪೀಡಿತ ಪ್ರದೇಶಗಳ ಪೈಕಿ ಕೊಪ್ಪಳ ಜಿಲ್ಲೆಯು ಒಂದಾಗಿದೆ.  ಕನಕಗಿರಿಯಲ್ಲಿಯೂ ಸಹ ರೈತರು ಬೆಳೆದ ಫಸಲು ಸಂಪೂರ್ಣ ನಾಶವಾಗಿದೆ.  ಮಳೆಯ ಅಭಾವದಿಂದಾಗಿ ಜಾನುವಾರುಗಳಿಗೆ ತಿನ್ನಲು  ಮೇವು, ಕುಡಿಯಲು ನೀರಿಲ್ಲದಂತಾಗಿದೆ.  ಅಲ್ಲದೇ  ತಾಲೂಕಿನ ವಿವಿಧ ಸಮಸ್ಯೆಗಳ ಕುರಿತು ಕಂದಾಯ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು.  ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳು ಕೂಡಲೇ ಜನ ಸಂಪರ್ಕ ಸಭೆಯನ್ನು ಆಯೋಜಿಸಿದ್ದಾರೆ.  ಅದರಲ್ಲೂ ಜನ ಸಂಪರ್ಕ ಸಭೆಯನ್ನು ಪ್ರಥಮವಾಗಿ ಕನಕಗಿರಿಯಲ್ಲಿ ಆಯೋಜಿಸಿರುವುದು ಅಭಿನಂದನಾರ್ಹವಾಗಿದೆ.  ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದಲ್ಲಿ ಈ ಸಭೆಯಲ್ಲಿ ಅಜರ್ಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಿ.  ಕ್ಷೇತ್ರದ  ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಜಿಲ್ಲಾಡಳಿತದಿಂದ ಅಗತ್ಯ ಕ್ರಮಕ್ಕೆ ಹಾಗೂ ಗೋಶಾಲೆ ತೆರೆಯುವಂತೆ ಒತ್ತಾಯಿಸುತ್ತೇನೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಅವರು ಹೇಳಿದರು.  

ಜಿಲ್ಲಾ ಪಂಚಾಯತ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತ ರಮೇಶ ನಾಯಕ ಅವರು ಮಾತನಾಡಿ, ಕನಕಗಿರಿಯ ಏಳು ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ.  ಆದ್ದರಿಂದ ಜನ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ.  ಅಲ್ಲದೇ ಬೋರ್ ವೆಲ್ ಗಳು ಸಹ ನೀರಿಲ್ಲದೆ ವಿಫಲಗೊಳ್ಳುತ್ತಿದ್ದು, ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕೋರಿದರು.   

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಮಾತನಾಡಿ, ಮುಖ್ಯ ಮಂತ್ರಿಗಳು ಹಾಗೂ ಸಕರ್ಾರದ ಮುಖ್ಯ ಕಾರ್ಯದಶರ್ಿಗಳ ನಿದರ್ೆಶನದ ಮೇರೆಗೆ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.  ಸಾರ್ವಜನಿಕ ಕುಂದು ಕೊರತೆಗಳ ನಿವಾರಣೆಗಾಗಿ ಸಭೆಯನ್ನು ಏರ್ಪಡಿಸಿದ್ದು, ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಅಥವಾ ಜನಹಿತ ತಂತ್ರಾಂಶದಲ್ಲಿ ಅಜರ್ಿ ಸಲ್ಲಿಸಬಹುದು.  ದೂರು ಸಲ್ಲಿಸುವ ಎಲ್ಲಾ ಅಜರ್ಿಗಳು ಜಿಲ್ಲಾಧಿಕಾರಿಗಳ ವೆಬ್ಸೈಟ್ನಲ್ಲಿ ನೋಂದಣಿಯಾಗುತ್ತವೆ ಹಾಗೂ ವೆಬ್ಸೈಟ್ನಲ್ಲಿ ಅಜರ್ಿ ಸ್ಥಿತಿಯನ್ನು ಸಾರ್ವಜನಿಕರು ನೋಡಬಹುದಾಗಿದೆ.  ಸದ್ಯ ಜಿಲ್ಲೆಯಲ್ಲಿ ಬರ ಸ್ಥಿತಿ ಇದ್ದು, ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಲು ಜಿಲ್ಲೆಯ ಎಲ್ಲಾ ಶಾಸಕರು ಕಂದಾಯ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ.   ಸದ್ಯ ಜನ ಸಂಪರ್ಕ ಸಭೆಯನ್ನು  ಕೈಗೊಳ್ಳುವಂತೆ ಸಕರ್ಾರವು ಸೂಚನೆ ನೀಡಿದೆ.  ಈ ಹಿಂದೆ ಸಲ್ಲಿಸಿದ ದೂರುಗಳ ಅಜರ್ಿಗಳಿಗೆ ಸ್ಪಂದನೆ ದೊರೆಯದೇ ಇದ್ದಲ್ಲಿ, ಸ್ವೀಕೃತಿ ಪತ್ರದೊಂದಿಗೆ ನಮ್ಮ ಕಾಯರ್ಾಲಯಕ್ಕೆ ಅಥವಾ ಮೊಬೈಲ್ ಸಂಖ್ಯೆ 8277863454, ಮೂಲಕ ಸ್ಕ್ಯಾನಿಂಗ್ ಕಾಪಿಯನ್ನು ಸಲ್ಲಿಸಿ, ಅಂತಹ ದೂರಗಳನ್ನು ಶ್ರೀಘ್ರದಲ್ಲೆ ಪರಿಹರಿಸಲಾಗುವುದು ಎಂದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಉಪಕಾರ್ಯದಶರ್ಿ ಎನ್.ಕೆ ತೊರವಿ, ಯೋಜನಾ ನಿದರ್ೇಶಕ ರವಿ ಬಸರಿಹಳ್ಳಿ, ಕನಕಗಿರಿ ಪ.ಪಂ. ಅಧ್ಯಕ್ಷ ರವಿ ಬಜಂತ್ರಿ, ಉಪಾಧ್ಯಕ್ಷ ಹುಲಗಪ್ಪ ವಾಲಿಕಾರ, ಗಂಗಾವತಿ ತಾ.ಪಂ. ಸದಸ್ಯ ಬಸಪ್ಪ ಪಾಟೀಲ, ಎಪಿಎಂಸಿ ಸದಸ್ಯ ದೇವಪ್ಪ ತೋಳದ, ಕನಕಗಿರಿ ತಹಶೀಲ್ದಾರ ರವಿ ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಅಂಗವಿಕಲ ಯುವತಿಯು ಸಭೆಯಲ್ಲಿ ಆಗಮಿಸಿ, ನಾನು ಎಂ.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿದ್ದು, ನಿರುದ್ಯೋಗಿಯಾಗಿದ್ದೇನೆ.  ಯಾವುದೇ ಕಚೇರಿಗಳಲ್ಲಿ ನನಗೆ ಕೆಲಸ ನೀಡಿ ಹಾಗೂ ನಾನು ಅಂಗವಿಕಲತೆಗೆ ಒಳಗಾಗಿದ್ದು, ಯಂತ್ರ ಚಾಲಿತ ತ್ರಿಚಕ್ರ ವಾಹನವನ್ನು ನೀಡುವಂತೆ ಮನವಿ ಸಲ್ಲಿಸಿದರು.  ಇದಕ್ಕೆ ತಕ್ಷಣ ಪ್ರತಿಕ್ರೀಯಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ರವರು ಯಂತ್ರ ಚಾಲಿತ ತ್ರಿಚಕ್ರ ವಾಹನವನ್ನು ನೀಡುವುದಾಗಿದೆ ಮತ್ತು ಸದ್ಯ ಸಕರ್ಾರಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು.  

ಕನಕಗಿರಿ ಕ್ಷೇತ್ರದಲ್ಲಿ ಮಂಗಳವಾರದಂದು ಜರುಗಿದ ಜನ ಸಂಪರ್ಕ ಸಭೆಯಲ್ಲಿ ಸುಮಾರು 145 ಕ್ಕೂ ಅಧಿಕ ಅಜರ್ಿಗಳು ಸ್ವೀಕೃತಿಯಾಗಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾಯರ್ಾಲಯ ಪ್ರಕಟಣೆಯಲ್ಲಿ ತಿಳಿಸಿದೆ.