ಗ್ರಾಮೀಣ ಸ್ವಚ್ಛತೆ ಸುಸ್ಥಿರತೆಗೆ: ಸವರ್ೇಕ್ಷಣ ಕಾರ್ಯಕ್ರಮ


ಗದಗ 26:  ಗ್ರಾಮೀಣ ಪ್ರದೇಶದಲ್ಲಿ  ಸ್ವಚ್ಛತೆಯ ಸುಸ್ಥಿರತೆ ಕಾಪಾಡುವುದು.    ಸ್ವಚ್ಛ ಭಾರತ್ ಅಭಿಯಾನದಲ್ಲಿ  ಸರ್ವರೂ ಭಾಗವಹಿಸುವಂತೆ ಪ್ರೋತ್ಸಾಹಿಸುವುದು, ಶುಚಿತ್ವ , ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವುದು  ಸವರ್ೆಕ್ಷಣಾ ಕಾರ್ಯಕ್ರಮದ  ಉದ್ದೇಶವಾಗಿದೆ   ಎಂದು ಗದಗ  ಜಿ.ಪಂ. ಪ್ರಭಾರ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ. ಮಹೇಶ ನುಡಿದರು.

       ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು (ದಿ.25 ) ಜರುಗಿದ   ಸ್ವಚ್ಛ ಸವರ್ೆಕ್ಷಣ ಗ್ರಾಮೀಣ-2018 ರ ನೋಡಲ್ ಅಧಿಕಾರಿಗಳ ಕಾರ್ಯಾಗಾರವನ್ನುದ್ದೇಶಿಸಿ  ಅವರು ಮಾತನಾಡಿದರು.            

          ದೇಶಾದ್ಯಂತ ಸಮೀಕ್ಷೆಯಲ್ಲಿ  698 ಜಿಲ್ಲೆಗಳು, 6980 ಗ್ರಾಮಗಳು,  34900 ಸಾರ್ವಜನಿಕ ಸ್ಥಳಗಳು ಹಾಗೂ 50 ಲಕ್ಷ ನಾಗರಿಕರ  ಸಂದರ್ಶನ ಮತ್ತು ಅವರ ಅಭಿಪ್ರಾಯಗಳನ್ನು ಪಡೆಯುವುದು ಸವರ್ೆಕ್ಷಣದ  ಮುಖ್ಯ ಉದ್ದೇಶವಾಗಿದೆ.  ಗ್ರಾಮೀಣ ನೈರ್ಮಲ್ಯ  ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಈಗಾಗಲೇ ಜುಲೈ 13 ರಂದು ನವದೆಹಲಿಯಲ್ಲಿ "ಸ್ವಚ್ಛ ಸವರ್ೆಕ್ಷಣ ಗ್ರಾಮೀಣ-2018 ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.   ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸಮುದಾಯದಲ್ಲಿನ ಸ್ವಚ್ಛತೆಯ ದೃಷ್ಟಿಕೋನ, ಅವರ ಶಿಫಾರಸ್ಸುಗಳು ಮತ್ತು  ಗ್ರಾಮಗಳ ಘೋಷಣೆ ಮತ್ತು ಪರಿಶೀಲನೆ ಪಡೆದ ಪ್ರಗತಿ ವರದಿ ಹಾಗೂ ನೈರ್ಮಲ್ಯ ಸಮಗ್ರ ಶುಚಿತ್ವದ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡು  ರಾಷ್ಟ್ರ ಮಟ್ಟದಲ್ಲಿ ಜಿಲ್ಲೆ  ಮತ್ತು ರಾಜ್ಯಗಳಿಗೆ ಶ್ರೇಯಾಂಕಗಳನ್ನು ನೀಡಿ    ಗಾಂಧಿ ಜಯಂತಿ ದಿನದಂದು ಕೇಂದ್ರ ಸಕರ್ಾರವು ಪುರಸ್ಕಾರ ನೀಡಿ ಗೌರವಿಸಲಿದೆ.  ಗದಗ ಜಿಲ್ಲೆಗೆ ಈ ನಿಟ್ಟಿನಲ್ಲಿ ಈಗಾಗಲೇ ನಿಯೋಜಿಸಿದ ಅನುಷ್ಟಾನಾಧಿಕಾರಿಗಳು ಜಿಲ್ಲೆಯ ಗ್ರಾಮೀಣ  ಪ್ರದೇಶಗಳ ಸ್ವಚ್ಛತೆ ಕುರಿತು   ಕಾರ್ಯತತ್ಪರರಾಗಬೇಕು.    ಸವರ್ೇಕ್ಷಣಾ  ಕಾರ್ಯಕ್ರಮದ ಅನುಷ್ಟಾನಕ್ಕಾಗಿ    ಪ್ರಸಕ್ತ ಸಾಲಿಗೆ   ಗದಗ   ಜಿಲ್ಲೆಯಲ್ಲಿ   22    ಹೋಬಳಿ ಮಟ್ಟದ ನೋಡಲ್  ಅಧಿಕಾರಿಗಳು,   78  ಗ್ರಾ. ಪಂ. ಮಟ್ಟದ ನೋಡಲ್  ಅಧಿಕಾರಿಗಳು ಸೇರಿದಂತೆ   ಒಟ್ಟು   100 ನೋಡಲ್ ಅಧಿಕಾರಿಗಳನ್ನು ನಿಯಮಿಸಲಾಗಿದೆ.   ಸ್ವಚ್ಛ ಸವರ್ೆಕ್ಷಣ ಕಾರ್ಯಕ್ರಮದಡಿ  ಸಮಗ್ರ ಮಾಹಿತಿ ಶಿಕ್ಷಣ ಮತ್ತು ಸಂವಹನ, ರಾಜ್ಯ ಮತ್ತು ಜಿಲ್ಲೆಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯದ ಬಗ್ಗೆ  ಸ್ಪಧರ್ೆ, ಸಾರ್ವಜನಿಕ ಸ್ಥಳಗಳಲ್ಲಿ ಸಮೀಕ್ಷೆ/ ಪರಿವೀಕ್ಷಣೆ, ಗ್ರಾ. ಪಂ. ಕಚೇರಿ, ಸಕರ್ಾರಿ ಶಾಲೆಗಳು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಂತೆ, ಧಾಮರ್ಿಕ ಸ್ಥಳಗಳು, ಬಸ್ ನಿಲ್ದಾಣಗಳು, ನಾಗರಿಕರೊಂದಿಗೆ ಸಂವಾದ, ಸಭೆ, ಕಾರ್ಯಕ್ರಮ ಸುದಾರಣೆ ಬಗ್ಗೆ ಪ್ರತಿಕ್ರಿಯೆ, ಅಭಿಪ್ರಾಯ ಮತ್ತು ಶಿಫಾರಸ್ಸು ಪಡೆಯುವ ಕಾರ್ಯಗಳನ್ನೊಳಗೊಂಡಿದೆ.  ಈ ನಿಟ್ಟಿನಲ್ಲಿ   ಗದಗ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ   ತಾಲೂಕು ಮಟ್ಟದ ಹಾಗೂ ಗ್ರಾಮ ಪಂಚಾಯತ್ / ಗ್ರಾಮ ಮಟ್ಟದ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ  ಹಮ್ಮಿಕೊಳ್ಳಲಾಗಿದೆ ಎಂದು         ಎಸ್.ಸಿ. ಮಹೇಶ ನುಡಿದರು.   

      ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳಿಂದ ನೇಮಕವಾಗಿರುವ ನೋಡಲ್ ಅಧಿಕಾರಿಗಳು  ಭಾಗವಹಿಸಿದ್ದರು. ತದನಂತರ  ಸ್ವಚ್ಛ ಸವರ್ೆಕ್ಷಣ ಗ್ರಾಮೀಣ-2018 ರ ಕುರಿತು  ಗ್ರಾಮ  ಪಂಚಾಯತ್  ಮಟ್ಟದ ನೋಡಲ್ ಅಧಿಕಾರಿಗಳಿಗೆ ಕಾರ್ಯಾಗಾರ ಜರುಗಿತು.