ನೇತ್ರಾವತಿ ಸೊಸೈಟಿಯಲ್ಲಿ ಆಹಾರ ಆದಾಲತ್ ಕಾರ್ಯಕ್ರಮ

ಕಂಪ್ಲಿ:01   ಪಡಿತರ ಗುಣಮಟ್ಟ ಸರಿಯಿಲ್ಲದಿದ್ದರೆ ಗೋದಾಮಿಗೆ ಹಿಂತಿರುಗಿಸಿ. ಗುಣಮಟ್ಟವಲ್ಲದ ಮತ್ತು ತುಳಿದಾಡಿದ ಪಡಿತರವನ್ನು ವಿತರಿಸಬಾರದು. ತೂಕ ಮತ್ತು ಅಳತೆ ನಿಖರವಾಗಿರಬೇಕು. ಪಡಿತರ ವಿನಹ ಪ್ರತ್ಯೇಕವಾಗಿ ಬೇರೆ ಯಾವುದೇ ವಸ್ತು, ಪದಾರ್ಥಗಳನ್ನು ಕೊಳ್ಳುವಂತೆ ಪಡಿತರ ಚೀಟಿದಾರರನ್ನು ಒತ್ತಾಯಿಸಬಾರದುಎಂದು ಜಿಲ್ಲಾ ಆಹಾರ ಇಲಾಖೆ ಉಪ ನಿದರ್ೇಶಕ ಡಾ. ಪರಮೇಶ್ವರಪ್ಪ ಹೇಳಿದರು. 

ಇಲ್ಲಿನ ಮಡ್ಡಿಕಟ್ಟೆ ಬಳಿಯ ನೇತ್ರಾವತಿ ಗ್ರಾಹಕರ ಸಹಕಾರ ಸಂಘದಲ್ಲಿ ಜರುಗಿದ ಆಹಾರ ಅದಾಲತ್ನಲ್ಲಿ ಮಾತನಾಡಿ, ಪಡಿತರ ಚೀಟಿ ಪಡೆಯಲು ಪರದಾಡುವ ಅಗತ್ಯತೆ ಇಲ್ಲ. ಅಟಲ್ಜೀ ಜನಸ್ನೇಹಿ ಸೇರಿ ಆನ್ಲೈನ್ ಮೂಲಕ ಅಜರ್ಿ ಸಲ್ಲಿಸಹುದಾಗಿದೆ. ಪಡಿತರ ಪಡೆಯುವ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ, ಸಮಸ್ಯೆಗಳಿದ್ದಲ್ಲಿ ಆಹಾರ ನಿರೀಕ್ಷಕರು, ತಹಶೀಲ್ದಾರರನ್ನು ಸಂಪಕರ್ಿಸಬಹುದಾಗಿದೆ. 

ಕುಟುಂಬಕ್ಕೊಂದು ಪಡಿತರ ಚೀಟಿಯಿದ್ದರೆ ಸಾಕಾಗಿದ್ದು, ವಿನಾಕಾರಣ ಕುಟುಂಬಗಳಿಗೊಂದು ಪ್ರತ್ಯೇಕ ಪಡಿತರ ಚೀಟಿ ಪಡೆಯುವುದು ಕಾನೂನಿನ್ವಯ ಅಪರಾಧವಾಗಿದ್ದು, ಉಚಿತವಲ್ಲ. ನಿರಂತರವಾಗಿ ಮೂರು ತಿಂಗಳು ಪಡಿತರ ಪಡೆಯದಿದ್ದಲ್ಲಿ ಪಡಿತರ ಚೀಟಿಯನ್ನು ಅಮಾನತ್ತಿನಲ್ಲಿಡಲಾಗುವುದು. ಜಿಲ್ಲೆಯಲ್ಲಿ ಒಂದೇ ಹೆಸರಿಗೆ 40ಸಾವಿರ, ಎರಡು ಹೆಸರಿಗೆ 1.20ಲಕ್ಷ ಪಡಿತರ ಕಾಡರ್್ಗಳಿವೆ ಎಂದು ಹೇಳಿದರು ಆಹಾರ ಆಧಾಲತ್ನಲ್ಲಿ ಪಾಲ್ಗೊಂಡ ಪಡಿತರ ಚೀಟಿದಾರರಿಂದ ಪಡಿತರ ವಿತರಣೆಗೆ ಸಂಬಂಧಿಸಿದಂತೆ ನಾನಾ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಪಡಿತರ ಚೀಟಿದಾರರಿಗೆ ನಾನಾ ಸಲಹೆಸೂಚನೆ, ಮಾರ್ಗದರ್ಶನ ನೀಡಿದರು. ಪಡಿತರ ಚೀಟಿದಾರರು ಸಕ್ಕರೆ, ಗೋದಿ ವಿತರಿಸುವಂತೆಯೂ ಬೇಡಿಕೆ ಸಲ್ಲಿಸಿದರು. 

ಪಡಿತರ ವಿತರಣೆಗೆ ಸಂಬಂಧಿಸಿದಂತೆ ಪಡಿತರ ಸಂಗ್ರಹ, ದಾಸ್ತಾನು, ವಿತರಣೆ ಸೇರಿ ನಾನಾ ಅಂಕಿಅಂಶಗಳನ್ನು ಸಂಗ್ರಹಿಸಿ, ಪರಿಶೀಲಿದರು.ಅಜರ್ಿ ಹಾಕಿಕೊಂಡ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಯಿತು ನೇತ್ರಾವತಿ ಪಡಿತರ ಸಹಕಾರ ಸಂಘದ ಮಾಲೀಕ ಪ್ರಕಾಶ್ ದೇವರು, ಆಹಾರ ನಿರೀಕ್ಷಕ ರವಿ ಆರ್.ರಾಥೋಡ್, ಪಡಿತರ ಚೀಟಿದಾರರ ಪರವಾಗಿ ಆದಿಲಕ್ಷ್ಮಿ, ಪದ್ಮಾವತಿ, ಮಾಬೂಬೀ ಸೇರಿ ಪಡಿತರ ಚೀಟಿದಾರರು ಉಪಸ್ಥಿತರಿದ್ದರು