ಲೋಕದರ್ಶನ ವರದಿ
ಧಾರವಾಡ 17: ಜಾನಪದ/ಜನಪದ ಹಾಡುಗಳು ಜನ ಮಾಧ್ಯಮಗಳಾಗಿ ಕೆಲಸ ಮಾಡುತ್ತಿದ್ದ ಕಾಲವನ್ನು ನಾವು ಇಂದು ಮರೆತಿದ್ದೇವೆ. ಇತಿಹಾಸವನ್ನು ನೆನಪಿಸಿಕೊಡುವ ಹಾಡುಗಳು ಜನಪದ ಗೀತೆಗಳಲ್ಲಿ ಇದ್ದವು ಎಂಬುದನ್ನು ತಿಳಿದುಕೊಂಡು ಜಾನಪದ ಗೀತೆಗಳನ್ನು ಪುರಸ್ಕರಿಸಬೇಕು ಎಂದು ಹಾವೇರಿ ಕೆರಿಮತ್ತಿಹಳ್ಳಿ ಕ.ವಿ.ವಿ. ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಉಪನ್ಯಾಸಕ ಡಾ. ವಿಶ್ವನಾಥ ವಾಯ್. ಚಿಂತಾಮಣಿ ಅಭಿಪ್ರಾಯಪಟ್ಟರು. ಇಲ್ಲಿಯ ಕನರ್ಾಟಕ ವಿದ್ಯಾವರ್ಧಕ ಸಂಘವು 'ಜಾನಪದ ಕೋಗಿಲೆ ಫಕ್ಕಿರವ್ವ ಗುಡಿಸಾಗರ ಸ್ಮರಣೆ ದತ್ತಿ' ಅಂಗವಾಗಿ ಆಯೋಜಿಸಿದ್ದ 'ಜನಪದ ಕಲೆಯಾಗಿ ಗೀಗೀ ಪದಗಳ ವೈಶಿಷ್ಟ್ಯ' ವಿಷಯ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಜನಪದ ಸಾಹಿತ್ಯದಲ್ಲಿ ಗೀಗೀ ಪದಗಳು ತನ್ನದೇ ವೈಶಿಷ್ಟ್ಯ ಕಾಯ್ದುಕೊಂಡಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಹುಲಕುಂದದ ಭೀಮ ಕವಿಗಳು ರಚಿಸಿದ ಗೀಗೀ ಪದ ಸಾಹಿತ್ಯವನ್ನು ವಿಸ್ತರಿಸಿದ ತೊರಗಲ್ಲಮಠದ ರಾಚೋಟೇಶ್ವರ ಸ್ವಾಮಿಗಳು ಹತ್ತಾರು ಗೀಗೀ ಪದ ತಂಡ ರಚಿಸಿ ಯುವ ಸಮುದಾಯದಲ್ಲಿ ದೇಶಭಕ್ತಿ ಕಿಚ್ಚು ಹಚ್ಚಿಸಿದ್ದರು. ಉತ್ತರ ಕನರ್ಾಟಕದಲ್ಲಿ ಗೀಗೀ ಪದ ಮೇಳ ಕಟ್ಟಿಕೊಂಡು ಕಲೆಯನ್ನು ಉಳಿಸುವಲ್ಲಿ ಮತ್ತು ಸ್ವಾತಂತ್ರ್ಯದ ಪ್ರೇಮವನ್ನು ಹುಟ್ಟಿಸುವಲ್ಲಿ ಶ್ರಮಿಸಿದವು. ಗೀಗೀ ಪದ ಹಾಡುವವರು ಹೆಚ್ಚಾಗಿ ದಲಿತ, ಹರಿಜನ ಮಹಿಳೆಯರು. ಸ್ತ್ರೀ ಪಂಗಡದಲ್ಲಿ ಒಬ್ಬರು ಮುಮ್ಮೇಳ ಹಾಡುಗಾತರ್ಿಯೂ, ಹಿಮ್ಮೇಳದಲ್ಲಿ ಈರ್ವರೂ ಪುರುಷರು ಬರುತ್ತಾರೆ. ಈ ಕಲೆ ಅವರ ಹೆಮ್ಮೆಯ ಪರಂಪರೆಯಾಗಿದೆ ಎಂದ ಅವರು ಫಕ್ಕೀರವ್ವ ಗುಡಿಸಾಗರ ಇವರು ಜನಪದದ ಮೇರು ಪರ್ವತದಂತಿದ್ದು ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರ ಹೆಸರಿನಲ್ಲಿ ವೇದಿಕೆ ರಚಿಸಿ, ಜಾನಪದ ಕಲಾವಿದರು, ಚರ್ಮ ವಾದ್ಯ ನುಡಿಸುವವರನ್ನು ಒಂದೆಡೆ ಸೇರಿಸಿ, ಕಾರ್ಯಕ್ರಮ ನಡೆಸುವಂತಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿಗಳಾದ ಸಿ.ಎಮ್. ಚನ್ನಬಸಪ್ಪ, ಫಕ್ಕೀರವ್ವ ಗುಡಿಸಾಗರ ಅವರ ಜೀವಿತಾವಧಿಯಲ್ಲಿಯ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾ, ಜಾನಪದ ಕಲೆಗಳಲ್ಲಿ ಪ್ರಮುಖ ಸ್ಥಾನ ಪಡೆದ ಗೀಗೀ ಪ್ರಕಾರಕ್ಕೆ ಹೊಸ ದಿಕ್ಕು ತೋರಿಸಿದ ಮಹಾನ್ ಕಲಾವಿದೆಯಾಗಿದ್ದಳು. ಜಾನಪದ ಅಕಾಡೆಮಿ, ಆಕಾಶವಾಣಿ ವರ್ಷದ ಶ್ರೇಷ್ಠ ಕಲಾವಿದೆಯಾಗಿ 'ಜಾನಪದ ಶ್ರೀ' ಮೊದಲಾದ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ್ದು ಸ್ಮರಣೀಯವಾಗಿದೆ. ಅವರ ನೆನಪು ಮಾತ್ರ ಉಳಿದಿದ್ದು, ಅವರ ಜಾನಪದ ನೆನಪಿನ ಕುರಿತು ಜಾನಪದ ಸ್ಮಾರಕ ಭವನಗಳನ್ನು ನಿಮರ್ಿಸಬೇಕು. ದಿ. ಎಸ್.ಎಮ್. ಹೊಳೆಯಣ್ಣವರ ಅವರು ಹಿಂದುಳಿದ ಜಾತೀಯ ಫಕ್ಕೀರವ್ವಾ ಗುಡಿಸಾಗರ ಅವರ ಹೆಸರಿನಲ್ಲಿ ದತ್ತಿ ಸಂಘದಲ್ಲಿ ಸ್ಥಾಪಿಸಿ, ಅವರ ಸ್ಮರಣೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ಸ್ಮರಣೀಯ ಎಂದರು.
ಬೆಳ್ಳಿಗಟ್ಟಿಯ ಜಾನಪದ ಕಲಾವಿದ ಮಹದೇವಪ್ಪ ಹರಿಜನ ಜನಪದ ಕಲೆಯ ಗೀಗೀ ಪದಗಳ ವೈಶಿಷ್ಟ್ಯದ ಹಾಡುಗಳನ್ನು ಹಾಡಿ ರಂಜಿಸಿದರು. ಜಾನಪದ ಕೋಗಿಲೆ ಫಕ್ಕೀರವ್ವ ಗುಡಿಸಾಗರ ಅವರ ಭಾವಚಿತ್ರಕ್ಕೆ ಪುಷ್ಪಸಮಪರ್ಿಸಿ ಗೌರವ ಸಲ್ಲಿಸಿದರು. ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ ಹಾಗೂ ಬಿ.ಕೆ. ಹೊಂಗಲ್ ಅತಿಥಿಗಳನ್ನು ಪುಷ್ಪ ನೀಡಿ ಗೌರವಿಸಿದರು. ವೇದಿಕೆ ಮೇಲೆ ದತ್ತಿ ದಾನಿಗಳ ಪರವಾಗಿ ಜಗದೀಶ ಹೊಳೆಯಣ್ಣವರ ಇದ್ದರು.
ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಮೋಹನ ನಾಗಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಕೇರಪ್ಪ ನಡುವಿನಮನಿ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಬಿ. ಗಾಮನಗಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ ಪಾಟೀಲ ಹಾಗೂ ಡಾ. ಎಮ್. ವಾಯ್. ಬ್ಯಾಲ್ಯಾಳ, ಡಾ. ಸದಾಶಿವ ನಡುವಿನಕೇರಿ, ಲೋಕಮಾನ್ಯ ಲೋಕದತ್ತ, ರಾಮಚಂದ್ರ ಧೋಂಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.