ಜಾನಪದ ಸಂಗೀತ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ07 : ಭಾರತೀಯರಿಗೆ ಶಿವರಾತ್ರಿ ಪಾವಿತ್ರ್ಯತೆಯಿಂದ ಕೂಡಿದ ಹಬ್ಬಗಳಲ್ಲೋಂದಾಗಿದ್ದು, ಶಿವನಾಮ ಸ್ಮರಣೆಯೊಂದಿಗೆ ಮಾಡುವ ಜಾಗರಣೆ ಭಕ್ತಿಯ ಸಂಕೇತವಾಗಿದೆ ಎಂದು ಭರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

    ತಾಲೂಕಿನ ಬಂಕಾಪುರ ಪಟ್ಟಣದ ಕೊಟ್ಟಿಗೇರಿ ಶ್ರೀ ಬಂಗಾರ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಜಾನಪದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದೇವಸ್ಥಾನಗಳಲ್ಲಿ ಮಾಡುವ ಇಂತಹ ಕಾರ್ಯಕ್ರಮಗಳು ಸರ್ವ ಜನಾಂಗದವರಲ್ಲಿ ಸಾಮರಸ್ಯ ಮೂಡಿಸಲು ಪುರಕವಾಗಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಸೌಲಬ್ಯಗಳು ಹೆಚ್ಚಾದಂತೆ ಜೀವನದ ವೇಗವೂ ಜಾಸ್ತಿಯಾಗಿ ನೆಮ್ಮದಿ ಇಲ್ಲದಂತಾಗಿದೆ. ಇಂತಹ ದಿನ ನಿತ್ಯದ ಜಂಜಾಟದ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕಾದರೆ ಭಾರತೀಯ ಸಂಸ್ಕೃತಿ ಪ್ರತಿಕವಾದ ಹಬ್ಬ, ಹರಿದಿನ, ಮಠ, ಮಂದಿರಗಳಲ್ಲಿ ನಡೆಯಲಿರುವ ಧರ್ಮ ಭೋದನೆಯ ಕಾರ್ಯಕ್ರಮಗಳಿಂದ ಮಾತ್ರ ಸಾದ್ಯವಿದೆ ಎಂದು ಹೇಳಿದರು.

     ಜಾನಪದ ಕಲಾವಿದ ಬಸವರಾಜ ಗೋಬ್ಬಿ ಮಾತನಾಡಿ ಜಾನಪದ ಗೀತೆಗಳಲ್ಲಿ ಲೋಕದ ಅಂಕು, ಡೊಂಕುಗಳನ್ನು ತಿದ್ದುವ ಶಕ್ತಿ ಅಡಗಿದೆ. ಆಧುನಿಕ ತಂತ್ರಜ್ಞಾನದ ಪಾಶ್ಚಿಮಾತ್ಯ ಸಂಗೀತದ ಅಬ್ಬರಕ್ಕೆ ಭಾರತೀಯ ಮೂಲ ಸಂಸ್ಕೃತಿ ಪ್ರತಿಕವಾದ ಜಾನಪದ ಸಂಗೀತ ಕಲೆ ನಶಿಸುತ್ತಿರುವ ಇಂತಹ ಸಂದರ್ಬದಲ್ಲಿ ದೇವಸ್ಥಾನ ಸಮಿತಿಯವರು ಜಾನಪದ ಕಲಾವಿದರನ್ನು ಗುರುತಿಸಿ, ಕಾರ್ಯಕ್ರಮವನ್ನು ಆಯೋಜಿಸಿರುವುದು ಜಾನಪದ ಕಲೆ, ಕಲಾವಿದರನ್ನು ಉಳಿಸಿ ಬೆಳೆಸುವ ಪ್ರೋತ್ಸಾಹದ ಸಂಕೇತವಾಗಿದೆ. ಮಾನವನ ಬದುಕನ್ನು ಹಸನು ಮಾಡುವ ಶಕ್ತಿ ಜಾನಪದ ಸಂಗೀತ ಕಲೆಗಿದೆ ಎಂದು ಹೇಳಿದರು.

     ಸಭಾ ಕಾರ್ಯಕ್ರಮದ ನಂತರ ಮಲ್ಲಿಕಾಜರ್ುನ ಜನಪದ ಕಾಲಾ ತಂಡ ಹಾಗು ಗುರುನಾಥ ಹುಬ್ಬಳ್ಳಿ ಕಲಾ ತಂಡದವರಿಂದ ಅಹೋ ರಾತ್ರಿ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು.

     ಜಿ.ಪಂ.ಮಾಜಿ ಸದಸ್ಯ ಎಸ್.ಬಿ.ಗಚ್ಚಿನಮಠ, ಬಸಪ್ಪ ಸೋಪ್ಪಿನ, ಮಲ್ಲೇಶಪ್ಪ ಬಡ್ಡಿ, ಗಂಗಾಧರ ಕೊಣನತಂಬಗಿ, ಬಸವಣ್ಣೇಪ್ಪ ಎಲಿಗಾರ, ನಾಗಪ್ಪ ತೊಂಡೂರ, ಲಿಂಗರಾಜ ಶಿಗ್ಗಾಂವ, ಗಂಗಾಧರ ಬಡ್ಡಿ, ಗಂಗಾಧರ ಅಂಗಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಐಶ್ವರ್ಯ ಅಂಗಡಿ ಪ್ರಾಥರ್ಿಸಿದರು. ಶಿವಾನಂದ ಎಲಿಗಾರ ಸ್ವಾಗತಿಸಿದರು. ನಾಗರಾಜ ಬಡ್ಡಿ ನಿರೂಪಿಸಿದರು.