ಜಾನಪದ ಕಲೆ ಎಂಬುದು ಸರ್ವ ಕಾಲಕ್ಕೂ ಶ್ರೇಷ್ಠ: ಸರ್ವೋತ್ತಮ ಜಾರಕಿಹೊಳಿ

Folk art is the greatest of all time: the Sarvottam Jarakiholi

ಮೂಡಲಗಿ 12: ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಜಾನಪದ ಕಲೆ ಎಂಬುದು ಸರ್ವ ಕಾಲಕ್ಕೂ ಶ್ರೇಷ್ಠ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಮೂಡಲಗಿ-ಗೋಕಾಕ ತಾಲೂಕಾ ಘಟಕದ  ಗೌರವ ಅಧ್ಯಕ್ಷ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅಭಿಪ್ರಾಯ ಪಟ್ಟರು.

ಅವರು ತಾಲೂಕಿನ ಜೋಕಾನಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ ಜೋಕಾನಟ್ಟಿ ಶಿವಾನಂದ ಭಾರತಿಸ್ವಾಮಿ ಜಾನಪದ ಕಲಾ ಯುವ ಸಂಘದ ಆಶ್ರಯದಲ್ಲಿ 2024 - 25 ರ ಜಾನಪದ ಕಲಾ ಉತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಇನ್ನು ಜೀವಂತವಾಗಿದೆ ಕನ್ನಡ ಸಾಹಿತ್ಯಕ್ಕೆ ಜನಪದರ ಕೊಡುಗೆ ಅಪಾರವಾಗಿದೆ ಎಂದರು.       

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹಳ್ಳೂರದ  ಸಿದ್ದಣ್ಣ ದುರದುಂಡಿ ಮಾತನಾಡಿ. ಟಿವಿ ಮತ್ತು ಮೊಬೈಲ್ ಹಾವಳಿಯಲ್ಲಿ ನಸಿಸಿ ಹೋಗುತ್ತಿರುವ ನಮ್ಮ ಮೂಲ ಜಾನಪದ ಕಲೆಯನ್ನು  ಉಳಿಸಿ ಬೆಳಸಲು ಪ್ರತಿಯೊಬ್ಬರು ಸಂಘಟಿತರಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಭಾವಿ   ಶಾಸಕರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರ ಸಹಕಾರದಿಂದ ನಾಡಿನ ಹೆಸರಾಂತ ಜಾನಪದ ಕಲಾ ತಂಡಗಳನ್ನು ಕರೆಸಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದರು.  

ಜೋಕಾನಟ್ಟಿಯ ಪೂಜ್ಯಶ್ರೀ ಬಿಳಿಯಾನಸಿದ್ದ ಸ್ವಾಮೀಜಿ ಮಾತನಾಡಿ, ನಮ್ಮ ಕಲಾವಿದರಿಗೆ ಸರ್ಕಾರದ ವೇದಿಕೆಗಳು ಅವರ ಕಲೆಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು ಎಂದು ಹೇಳುತ್ತಾ ಮೂರು ದಿನಗಳ ಕಾಲ ನಿರಂತರ ಕಾರ್ಯಕ್ರಮ ಸುಗ್ಗಿ ಕುಣಿತ, ಜಾನಪದ ನೃತ್ಯ, ಸಮೂಹ ನೃತ್ಯ, ಡೋಳಿನ ಪದ, ಸೋಬಾನೆ ಪದ, ಭರತ ನಾಟ್ಯ, ಭಜನಾ ಪದಗಳು, ಜಗ್ಗಲಗಿ ಮೇಳ, ಜನಪದ ಸಂಗೀತ, ಏಕಪಾತ್ರಭಿನಯ, ಕೋಲಾಟ ನಾಟಕಗಳು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.        

ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಯಲ್ಲಪ್ಪ ನಾಯ್ಕರ, ಯಮನವ್ವಾ ಮಾದರ, ರುದ್ರ​‍್ಪ ಮಾದರ, ಹಿರಿಯರಾದ ಶಿದ್ದಲಿಂಗಪ್ಪ ಕಂಬಳಿ, ಕುಬೆಂದ್ರ ತೆಗ್ಗಿ, ಗುಂಡುರಾವ ಗುಜನಟ್ಟಿ, ಸಂತೋಷ ಅವಜ್ಜಪಗೋಳ, ಡಾ. ರಮೇಶ ಹರಿಜನ, ಶ್ರೀಶೈಲ ಕಂಬಳಿ, ವಿಠ್ಠಲ್ ಮೋಕಾಸಿ, ಶಿವಾನಂದ ಮಾದರ, ಶೆಟೆಪ್ಪಾ ಮಾದರ ಹಾಗೂ ಸಂಘಟಕರು ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಶಸ್ತಿ ವಪುರಸ್ಕೃತೆ  ಅಕ್ಕಮಹಾದೇವಿ ಮಾದರ ಸ್ವಾಗತಿಸಿದರು. ಶಿವಗೊಂಡ ಪಾಟೀಲ ನಿರೂಪಿಸಿದರು. ಲಕ್ಷ್ಮಿ ಜೋಕಾನಟ್ಟಿ ವಂದಿಸಿದರು.