ಮೀರಾ ತಟಗಾರ
ಮಹಾಲಿಂಗಪುರ : ರಕ್ಕಸ ಪ್ರವಾಹ ಮತ್ತೆ ಸಮೀಪದ ಢವಳೇಶ್ವರ ಮತ್ತು ನಂದಗಾಂವ ಗ್ರಾಮದ ಸಂತ್ರಸ್ತರ ನಿದ್ದೆಗೆಡಿಸಿದೆ.
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಸಂಪರ್ಕ : ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿರುವ ಘಟಪ್ರಭಾ ನದಿಯ ಢವಳೇಶ್ವರ ಗ್ರಾಮದ ಸೇತುವೆ ಪ್ರವಾಹದಿಂದ ತಿಂಗಳಲ್ಲಿ ಎರಡನೇ ಸಲ ಸಾರಿಗೆ ಸಂಪರ್ಕ ಕಡಿತಗೊಂಡಿರುವುದು ಸಂತ್ರಸ್ಥರ ದುಗುಡವನ್ನು ದ್ವಿಗುಣ ಮಾಡಿದ್ದಲ್ಲದೆ ಜನರಲ್ಲಿ ಮತ್ತೆ ಭಯ ಉಂಟು ಮಾಡಿದೆ.ತಿಂಗಳ ಹಿಂದೆ ಬಂದ ಪ್ರವಾಹ ತಂದ ಸಮಸ್ಯೆಗಳಿಗೆ ಮುಕ್ತಿಯೂ ಇಲ್ಲದಂತಾಗಿದೆ.
ಪ್ರವಾಹದಿಂದ ತೋಟದ ಮನೆಯಲ್ಲಿ ಹಸು ಸಾವು : ಢವಳೇಶ್ವರ ಗ್ರಾಮದಲ್ಲಿ ನಿನ್ನೆ ರಾತ್ರಿ ಹತಾಟ ಬಂದ ಪ್ರವಾಹಕದಿಂದ ಕಮತಗಿ ಕುಟುಂಬದ ತೋಟದಲ್ಲಿಯ 5 ವರ್ಷದ ಜಸರ್ಿ ಹಸು ಅಸುನಿಗಿದೆ. ಮಹಾಲಿಂಗಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೋಲೀಸರು ಮತ್ತು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ 35 ಸಾವಿರ ರೂ. ಗಳ ಪರಿಹಾರಕ್ಕೆ ವೈದ್ಯಾಧಿಕಾರಿ ಡಾ. ವಿಶಾಲಗೌಡ ಪಾಟೀಲ ಸರಕಾರಕ್ಕೆ ವರದಿ ನೀಡಿದ್ದಾರೆ.
ನಂದಗಾಂವ ಗ್ರಾಮಸ್ಥರ ಗೋಳಾಟ:
ನೆರೆ ಪೀಡಿತ ರು ಪ್ರವಾಹ ಕಡಿಮೆಯಾಗಿದೆ ಎಂದು ತಮ್ಮ ಮನೆಗಳ ಕಡೆಗೆ ಸಾಗಿ ಮನೆಗಳ ದುರಸ್ತಿ ಕಾರ್ಯದಲ್ಲಿರುವಾಗ ನಿನ್ನೆ ಬಂದ ಅನಿರೀಕ್ಷಿತ ಪ್ರವಾಹದ ಪರಿಣಾಮವಾಗಿ ಮತ್ತೆ ಸುರಕ್ಷಿತ ಸ್ಥಳಕ್ಕೆ ಎತ್ತಿನ ಗಾಡಿ, ಟ್ರ್ಯಕ್ಟರ್ ಗಳಲ್ಲಿ ತಮ್ಮ ಮನೆಯ ಸಾಮಾನುಗಳನ್ನು ಮತ್ತು ಕುರಿ, ಕೋಳಿ, ನಾಯಿ, ಹಸು, ಎತ್ತು, ಎಮ್ಮೆ ಕರುಗಳನ್ನು ತುಂಬಿಕೊಂಡು ಪರಿವಾರ ಸಮೇತ ಮಹಾಲಿಂಗಪುರದ ಎಪಿಎಂಸಿಯ ಜಾನುವಾರು ಬಜಾರಿಗೆ ತೆರಳುತ್ತಿದ್ದಾರೆ.
ಕೊಳೆತು ನಾರುತ್ತಿರುವ ದುವರ್ಾಸನೆ:
ಢವಳೇಶ್ವರ ಮತ್ತು ನಂದಗಾಂವ ಗ್ರಾಮಗಳ ಮನೆಯಲ್ಲಿದ್ದ ದವಸ ಧಾನ್ಯಗಳು, ಜಮೀನಿನಲ್ಲಿದ್ದ ಕಬ್ಬು ಮತ್ತು ಇತರೆ ಬೆಳೆಗಳು,ಸತ್ತ ಪ್ರಾಣಿಗಳು ಕೊಳೆತು ನಾರುತ್ತಿವೆ. ಕಲುಷಿತ ವಾತಾವರಣ ನಿಮರ್ಾಣವಾಗಿದೆ.ಶುದ್ಧ ವಾತಾವರಣ ರಹಿತ ಪರಿಸ್ಥಿತಿ ಉಂಟಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
ತಾಲೂಕು ಆಡಳಿತ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ : ಸದ್ಯದಲ್ಲಿ ಢವಳೇಶ್ವರ ಗ್ರಾಮದ ಘಟಪ್ರಭಾ ನದಿಯ ನೀರಿನ ಮಟ್ಟ 40 ಸಾವಿರ ಕ್ಯೂಸೆಕ್ಸ್ ಇದೆ. ಮಾರ್ಕಂಡೇಯ, ಬೆಣ್ಣೆಹಳ್ಳ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಂಭವವಿದ್ದು ಈಗಾಗಲೇ ಢವಳೇಶ್ವರ ಗ್ರಾಮದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಡಂಗುರ ಹೊಡೆಸಲಾಗಿದೆ. ಅಗತ್ಯ ಬಿದ್ದರೆ ತಕ್ಷಣವೇ ಗಂಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಸಂಪೂರ್ಣ ಸನ್ನದ್ಧವಾಗಿದೆ.
- ಶ್ರೀಧರ ನಂದಿಹಾಳ,
ನೋಡಲ್ ಅಧಿಕಾರಿ, ಢವಳೇಶ್ವರ.