ಸೈನಿಕ ತರಬೇತಿ ಕೇಂದ್ರದಲ್ಲಿ ಧ್ವಜ ದಿನಾಚರಣೆ

ಲೋಕದರ್ಶನ ವರದಿ

ಮೂಡಲಗಿ : ಸೇನಾ ಪರೀಕ್ಷೆಯಲ್ಲಿ ಕನರ್ಾಟಕದ ಯುವಕರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಸರಕಾರ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೆನೆ ಎಂದು ಶಾಸಕ  ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಧ್ವಜ ದಿನಾಚರಣೆ ಸಮಾರಂಭದಲ್ಲಿ  ಮಾತನಾಡಿ, ಸೈನ್ಯದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವದು ಹೆಮ್ಮೆಯ ವಿಷಯ ಎಂದರು. 

ಮೂಡಲಗಿ ವಲಯ ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡುತ್ತಿರುವದು ಅದರ ಜೊತೆ ಮಂಜುನಾಥ ಸೈನಿಕ ತರಬೇತಿ ಕೇಂದ್ರಕ್ಕೆ ಆಮರ್ಿ ಮತ್ತು ಪೋಲಿಸ ಪೂರ್ವಬಾವಿ ತರಬೇತಿ ಪಡೆಯಲು ಕನರ್ಾಟಕ ಅಷ್ಠೆ ಅಲ್ಲದೆ ಹೊರ ರಾಜ್ಯದಿಂದ ಈ ಸಂಸ್ಥೆಗೆ ಕಲಿಯಲು ಬರುತ್ತಾರೆ.  ಹದಿನೈದು ವರ್ಷಗಳಿದ ನಡೆಯುತಿರುವ ಈ ಸಂಸ್ಥೆಯಲ್ಲಿ ಪೂರ್ವಭಾವಿ ದೈಹಿಕ ಮತ್ತು ಲಿಖಿತ ಪರಿಕ್ಷೆ ತರಬೇತಿಯಲ್ಲಿ ಸಾವಿರಾರು ಶಿಬಿರಾಥರ್ಿಗಳು ಭಾಗವಹಿಸಿ ಸರಕಾರಿ ನೌಕರಿ ಆಯ್ಕೆಯಾಗಿರುವದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಸೈನ್ಯದಲ್ಲಿ ಸೇರಬೇಕಾದರೆ ವಿದ್ಯಾಥರ್ಿಗಳು ಸಾಕಷ್ಠು ಪರಿಶ್ರಮ ಪಡಬೇಕಾಗುತ್ತದೆ ಮತ್ತು ನಮ್ಮ ದೇಶ ಸೇವೆ ಮಾಡುವ ಸೈನಿಕರಿಗೆ ನಾವು ಗೌರವ ನಿಡಬೇಕಾಗುತ್ತದೆ ಎಂದರು. 

ಸಂಸ್ಥೆಯ ಸಂಸ್ಯಾಪಕ ಲಕ್ಷ್ಮಣ ವಾಯ್ ಅಡಿಹುಡಿ ಮಾತನಾಡಿ ಈ ಸಂಸ್ಥೆ ಬೆಳೆಯಲು ಮೂಡಲಗಿ ತಾಲ್ಲೂಕಿನ ಎಲ್ಲಾ ಗ್ರಾಮದ ಹಿರಿಯರು ಮತ್ತು ಶಾಸಕರ ಪ್ರೋತ್ಸಾಹ ಕಾರಣ ಎಂದರು.

ಸಮಾರಂಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ.ಮಗದುಮ್ಮ, ಪಿ.ಎಸ್.ಐ. ಎಮ್.ಎನ್. ಸಿಂಧೂರ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಮೇಲಾನಟ್ಟಿ, ಮಾಜಿ ಪುರಸಭಾ ಅಧ್ಯಕ್ಷ ರವಿ ಸಣ್ಣಕ್ಕಿ. ತಾ.ಪಂ. ಸದಸ್ಯ ಲಕ್ಷ್ಮಣ.ಮಸಗುಪ್ಪಿ, ಶಿವಬೋಧ ರಂಗ ಬ್ಯಾಂಕ್ ಅಧ್ಯಕ್ಷ ರವಿ ಸೋನವಾಲಕರ ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಅಶೋಕ ಮಲಬಣ್ಣವರ, ಸಂತೋಷ ಸೋನವಾಲಕರ, ಗಫಾರ ಡಾಂಗೆ, ಅಜ್ಜಪ್ಪ ಕಂಕಣವಾಡಿ, ಸಿ.ಬಿ.ಪೂಜೇರಿ, ಮಂಜುನಾಥ ಕುಂಬಾರ, ಸಂತೋಷ ಹುಕ್ಕೇರಿ, ಕರಿಬಸವರಾಜು.ಟಿ. ನ್ಯಾಯವಾದಿ ಆಯ್ ಎಮ್ ಹಿರೇಮಠ ಎಸ್ ವಾಯ್ ಹೊಸಟ್ಟಿ ವಿ ಕೆ ಪಾಟೀಲ ಪಿ ಎಸ್ ಮಲ್ಲಾಪೂರ ಎಸ್ ಬಿ ತುಪ್ಪದ ವಿ ವಿ ನಾಯಕ ವಾಯ್ ಎಸ್ ಖಾನಟ್ಟಿ ಹಾಗೂ ತಾಲ್ಲೂಕಿನ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು ಉಪಸ್ಥಿತರಿದ್ದರು.