ಮೂಡಲಗಿಯ ಸರ್ಕಾರಿ ಪದವಿ ಕಾಲೇಜಿಗೆ ಪ್ರಥಮ ರಾ್ಯಂಕ್
ಮೂಡಲಗಿ 11: ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿಯಾದ ಶಿಲ್ಪಾ ಪಾರಿಸ ಉಪ್ಪಿನ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ 13ನೇ ಘಟಿಕೋತ್ಸವದಲ್ಲಿ ಬಿ.ಎಸ್.ಡಬ್ಲ್ಯೂ ಪದವಿಯಲ್ಲಿ ಪ್ರಥಮ ರಾ್ಯಂಕ್ ಗಳಿಸಿ ಕಾಲೇಜಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ಅವರು ಘನತೆವೆತ್ತ ರಾಜ್ಯಪಾಲರಾದ ಥಾವರಚಂದ ಗೆಹ್ಲೋತ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿ, ಮಹಾವಿದ್ಯಾಲಯದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್. ಸಿ. ಸುಧಾಕರ್ ಅವರು ಉಪಸ್ಥಿತರಿದ್ದರು.
ಸಮಾಜಕಾರ್ಯ ವಿಭಾಗದ ಎರಡನೆಯ ರಾ್ಯಂಕ್ ಸಹ ಮೂಡಲಗಿಯ ಕಾಲೇಜಿನ ವಿದ್ಯಾರ್ಥಿನಿ ಶಿಲ್ಪಾ ವಡಕಿ ಅವರು ಪಡೆಯುವ ಮೂಲಕ ಪ್ರಥಮ ಮೂರು ರಾ್ಯಂಕುಗಳಲ್ಲಿ ಎರಡು ರಾ್ಯಂಕುಗಳು ಮೂಡಲಗಿ ಕಾಲೇಜಿನ ಪಾಲಾಗಿವೆ.
ಬಿ. ಎ ವಿಭಾಗದಲ್ಲಿ ವಿದ್ಯಾರ್ಥಿನಿ ಅರ್ಿತಾ ಮಳವಾಡ ಅವರು ನಾಲ್ಕನೆಯ ರಾ್ಯಂಕ್ ಪಡೆಯುವ ಮೂಲಕ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಮೂರು ರಾ್ಯಂಕುಗಳನ್ನು ಮೂಡಲಗಿಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಪಡೆದುಕೊಂಡಿರುವುದು ಶ್ಲಾಘನೀಯ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಸರ್ವ ಸದಸ್ಯರು, ಪ್ರಾಂಶುಪಾಲರಾದ ಮಹೇಶ ಕಂಬಾರ, ಸಮಾಜಕಾರ್ಯ ಮತ್ತು ಕಲಾ ವಿಭಾಗದ ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.