ಲೋಕದರ್ಶನ ವರದಿ
ಯರಗಟ್ಟಿ 09: ಸತ್ತಿಗೇರಿ ಏತ ನೀರಾವರಿ ಯೋಜನೆ ಬಹುದಿನಗಳ ಬೇಡಿಕೆ ಆಗಿದೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಬರುವ ಮಾರ್ಚ ಅದಿವೇಶನ ಬಜೇಟ್ ನಲ್ಲಿ ಅನುದಾನ ತಂದು ಕಾಮಗಾರಿ ಪ್ರಾರಂಬಿಸುತ್ತೇನೆ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಶಾಸಕ ಆನಂದ ಮಾಮನಿ ರೈತರಿಗೆ ಬರವಸೆ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಯರಗಟ್ಟಿ, ಸತ್ತಿಗೇರಿ ಮುಗಳಿಹಾಳ, ಕುರಬಗಟ್ಟಿ, ಸೊಪ್ಪಡ್ಲ, ಕೊರಕೊಪ್ಪ, ಇಟ್ನಾಳ ವಿವಿಧ ಗ್ರಾಮಗಳ ರೈತರಿಂದ ನೀರಾವರಿ ಅನುಷ್ಠಾನದ ಮನವಿ ಸ್ವೀಕರಿಸಿ ಮಾತನಾಡುತ್ತಾ ಯರಗಟ್ಟಿ ನೂತನ ತಾಲೂಕಾ ಕೇಂದ್ರಕ್ಕೆ ಆಡಳಿತ ಸುಗಮಗೊಳಿಸಲು ತಾಲೂಕಾ ಮಟ್ಟದ ಕಛೇರಿಗಳನ್ನು ಪ್ರಾರಂಭಿಸಲು ಪ್ರಯತ್ನ ಪಡುತ್ತಿದ್ದು ಮಾರ್ಚ ಅಧಿವೇಶನದಲ್ಲಿ ಚರ್ಚಿಸಿ ಮೊದಲು ದಂಡಾಧಿಕಾರಿ ಕಛೇರಿ ಪ್ರಾರಂಭಿಸಿ ನಂತರ ಸೂಕ್ತ ಸ್ಥಳವಕಾಶ ಗುರುತಿಸಿ ಎಲ್ಲಾ ಇಲಾಖೆ ಕಛೇರಿಗಳನ್ನು ಪ್ರಾರಂಬಿಸುತ್ತೇನೆ.ಯರಗಟ್ಟಿ ತಾಲೂಕಾ ಕೇಂದ್ರಕ್ಕೆ ಪಕ್ಕದ ತಾಲೂಕಾ ಕೇಂದ್ರಗಳಿಗೆ ಹೊಂದಿಕೊಂಡಿರುವ ಹಳ್ಳಿಗಳ ಗ್ರಾಮಸ್ಥರು ಸ್ವ-ಇಚ್ಚೆಯಿಂದ ಸೇರ್ಪಡೆಗೊಂಡರೆ ಒಳ್ಳೆಯದು ಇಲ್ಲದಿದ್ದರೆ ಯರಗಟ್ಟಿ ಹಾಗೂ ಯರಝರ್ವಿ ಜಿಲ್ಲಾ ಪಂಚಾಯತ ಕ್ಷೇತ್ರವನ್ನು ಒಳಗೊಂಡು ತಾಲೂಕಾ ನಕ್ಷೆ ರಚಿಸಲು ತಿಳಿಸುವುದಾಗಿ ಹೇಳಿದರು.
ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಎಪಿಎಮ್ಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ತಾ.ಪಂ.ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಮಹಾಂತೇಶ ಗೋಡಿ, ಗೌಡಪ್ಪ ಸವದತ್ತಿ, ಬಸನಗೌಡ ಪಾಟೀಲ, ಈರಣ್ಣ ಚಂದರಗಿ, ವೆಂಕಟೇಶ ದೇವರಡ್ಡಿ, ಯಲ್ಲಪ್ಪ ಪಟ್ಟಪ್ಪನವರ, ಶಾನೂರ ಮುಲ್ಲಾ, ಶ್ರೀಕಾಂತ ಡೊಂಗಿಮಾಠ, ನಾಗಪ್ಪ ಹೊಸಮನಿ, ಶ್ರೀಶೈಲ ಬಳಿಗಾರ, ಶಿವುಕುಮಾರ ಜಕಾತಿ, ಮಹಾದೇವ ಬಾಂಗಿ, ಹನಮಂತ ಕಳಸಪ್ಪನವರ, ಬಸವರಾಜ ಕೊಟ್ರಶೆಟ್ಟಿ, ಅಶೋಕ ನಂದಿ, ಭೀಮಶೆಪ್ಪ ಕರಲಿಂಗಪ್ಪನವರ ಮುಂತಾದವರಿದ್ದರು.