ಭತ್ತದ ಬಣವೆಗೆ ಬೆಂಕಿ : ರೈತನಿಗೆ ಅಪಾರ ನಷ್ಟ

ಲೋಕದರ್ಶನ ವರದಿ 

ಮುಂಡಗೋಡ 30: ಭತ್ತದ ಕಾಳಿನ ಹುಲ್ಲಿನ ಬಣವೆಗೆ ವಿದ್ಯುತ್ ತಂತಿ ಸ್ಪರ್ಶದಿಂದ ಬೆಂಕಿ ತಗುಲಿ ರೈತನಿಗೆ ಅಪಾರ ನಷ್ಟವುಂಟಾದ ಘಟನೆ ತಾಲೂಕಿನ ಇಂದೂರ ಗ್ರಾಮದಲ್ಲಿ ನಡೆದಿದೆ.

ಭತ್ತದ ಬಣವೆಯು ಪರಶುರಾಮ ಬಮ್ಮಿಗಟ್ಟಿ ಎಂಬ ರೈತನಿಗೆ ಸೇರಿದ್ದು ಎಂದು ಹೇಳಲಾಗಿದೆ  ತಾಲೂಕಿನ ಅಗಡಿ ರಸ್ತೆಯಲ್ಲಿರುವ ತಮ್ಮ ಹೊಲದಲ್ಲಿ ಸುಮಾರು 6ಎಕರೆಯಷ್ಟು ಜಮೀನಿನಲ್ಲಿ ಬೆಳೆದ ಭತ್ತದ ಕಾಳಿನ ಬಣವೆಯನ್ನು ಹಾಕಿದ್ದರು. ಆಕಸ್ಮಿವಾಗಿ ವಿದ್ಯುತ್ ತಂತಿ ಸ್ಪರ್ಶದಿಂದ ಬೆಂಕಿ ಬಣವಿಗೆ ತಗುಲಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕದಳದವರು ಪ್ರಯತ್ನಿಸಿದರಾದರೂ ಬೆಂಕಿಯ ಕೆನ್ನಾಲಿಗಿಗೆ ಭತ್ತದ ಬಣವೆ ಸುಟ್ಟು ಕರಕಲಾಗಿತ್ತು. ಈ ಘಟನೆಯಿಂದ ಅಪಾರ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.  ಅಗ್ನಿ ಶಾಮಕ ದಳದ ಸಿಬ್ಬಂದಿ ಕೆ.ಆರ್. ಮಾಳಗಿ, ಬಸವರಾಜ ಇಂಚಲ, ಲಕ್ಷ್ಮಣ ಪಟಗಾರ, ಮಹಮ್ಮದ ಅಲಿ ಹಂಚಿನಮನಿ, ಸಂತೋಷ ಪಾಟೀಲ, ದುರ್ಗಪ್ಪ ಹರಿಜನ ಕಾಯರ್ಾಚರಣೆಯಲ್ಲಿದ್ದರು.