ನೆಲಮಂಗಲ, ಜ 16: ಆಂಜನೇಯ ನಮ್ಮ ಜೊತೆಗಿದ್ದರಿಂದ ಇಂದು ನಮ್ಮನ್ನು ಕಾಪಾಡಿದ್ದಾನೆ ಎಂದು ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಭಜರಂಗಿ - 2 ಚಿತ್ರದ ಚಿತ್ರೀಕರಣದ ವೇಳೆ ಅಗ್ನಿ ಅವಘಡ ಸಂಭವಿಸಿದ ಕುರಿತು ಮಾತನಾಡಿದ ಅವರು, ಭಜರಂಗಿಯೇ ನಮ್ಮನ್ನು ಕಾಪಾಡಿದ್ದಾನೆ. ಗ್ಯಾಸ್ ಓಪನ್ ಆಗಿದ್ದರೆ ತುಂಬಾ ದೊಡ್ಡ ಅವಘಡ ಸಂಭವಿಸುತ್ತಿತ್ತು, ಆದರೆ, ಸೆಟ್ ಗೆ ಗೋಣಿಚೀಲ ಬಳಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದರು.
ಚಿತ್ರೀಕರಣದಲ್ಲಿ ತಾವು ಸೇರಿ 15 ರಿಂದ 20 ಜನ ಮುಖ್ಯ ಕಲಾವಿದರು ಹಾಗೂ ಸರಿಸುಮಾರ 200 ಜನ ಸಹಾಯಕ ಕಲಾವಿದರು ಇದ್ದರು. ಆದರೆ, ಯಾರೊಬ್ಬರಿಗೂ ಯಾವುದೇ ಹಾನಿ ಆಗಿಲ್ಲ, ಅನಾಹುತನೂ ಆಗಿಲ್ಲ. ಇಂದು ಭಜರಂಗಿಯೇ ನಮ್ಮನ್ನು ಕಾಪಾಡಿದ್ದಾನೆ ಎಂದರು.
ಚಿತ್ರಕ್ಕೆ ಭಜರಂಗಿ ಹೆಸರಿಟ್ಟಿರುವುದರಿಂದ ಯಾವುದೇ ಅನಾಹುತವಾಗಿಲ್ಲ. ಆಂಜನೇಯ ನಮ್ಮ ಜೊತೆ ಇದ್ದಾನೆ ಎಂದರು.