ಹಬ್ಬಗಳು ಮನ ಮನಸುಗಳನ್ನು ಬೆಸಿಯುವಂತಾಗಬೇಕು- ಇಮಾಮ್ ನಿಯಾಜಿ
ವಿಜಯನಗರ 03: ಜಿಲ್ಲಾ ಪಾಸ್ಟರ್ಸ್ ವೆಲ್ ಫೇರ್ ಅಸೋಸಿಯೇಶನ್ ನೇತೃತ್ವದಲ್ಲಿ ಹೊಸಪೇಟೆ ನಗರದ ಆರ್‌ಸಿ ಫಂಕ್ಷನ್ ಹಾಲ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ ಮೊಹಮ್ಮದ್ ಇಮಾಮ್ ನಿಯಾಜಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರಿಸ್ಮಸ್ ಹಬ್ಬವು ಬೆಳಕಿನ ಹಬ್ಬ ಎಂದು ಆಚರಿಸಲಾಗುತ್ತದೆ. ಮನೆ ಮನಸುಗಳಲ್ಲಿ ಇರುವ ಅಂಧಕಾರದ ಶಕ್ತಿಯನ್ನು ದೂರಸರಿಸಿ ಶಾಂತಿ ನೆಮ್ಮದಿಯಿಂದ ಬದುಕುವ ಕುರಿತು ತಿಳಿಸಲಾಗುತ್ತದೆ. ದೇವರು ಒಬ್ಬನೇ ನಾಮ ಹಲವು ಎನ್ನುವಂತೆ ಹಿಂದು ಮುಸ್ಲಿಂ ಕ್ರೈಸ್ತ ಎಲ್ಲಾ ಧರ್ಮಗಳ ಸಾರ ಒಂದೇ ಅದುವೇ ಮಾನವೀಯತೆ.
ನಮ್ಮ ಭಾರತ ದೇಶವು ವೈವಿಧ್ಯತೆಗಳಿಂದ ಕೂಡಿದ ದೇಶವಾಗಿದ್ದು ಇಲ್ಲಿ ಜಾತಿ ಮತ ಲಿಂಗ ಭೇದವಿಲ್ಲದೇ ಮನುಷ್ಯತ್ವದಿಂದ ಜೀವಿಸಬೇಕಾಗಿದೆ. ನಾವೆಲ್ಲರೂ ಸ್ನೇಹ ಪ್ರೀತಿ, ಸೌಹಾರ್ದತೆಯಿಂದ ಕೂಡಿ ಬಾಳೋಣ ಎಂದು ಹೇಳುವ ಮೂಳಕ ಕ್ರಿಸ್ ಮಸ್ ಹಬ್ಬದ ಶೂಭಾಷಯಗಳನ್ನು ಕೋರಿದರು.
ಈ ಒಂದು ಸಂಭ್ರಮದಲ್ಲಿ ವಿಜಯನಗರ ಜಿಲ್ಲಾ ಪಾಸ್ಟರ್ಸ್ ವೆಲ್ ಫೇರ್ ಅಸೋಸಿಯೇಶನ್ ಪದಾಧಿಕಾರಿಗಳಾದ ಸ್ಯಾಮ್ಸನ್ ಪೆಂಡನ್, ವೆಸ್ಲಿ ಪ್ರಭು, ಸೌಂದರ್ ರಾಜನ್, ಪಿ. ಪ್ರಾಂಷಿಸ್, ಪಾಸ್ಟರ್ ಗೋಪಿನಾಥ್ ಹಾಗು ನೂರಾರು ಕ್ರಿಸ್ಚಿಯನ್ ಸಮುದಾಯದವರು ಉಪಸ್ಥಿತರಿದ್ದರು.