ಜಾತ್ರೆ-ಉತ್ಸವಗಳು ಭಾರತೀಯರ ಭಾವೈಕ್ಯತೆಯ ಸಂಕೇತ: ಟಿ.ವಿ.ಸುರೇಶ.

ರಾಣೇಬೆನ್ನೂರು11: ಜಾತ್ರೆ-ಉತ್ಸವ, ಹಬ್ಬ-ಹರಿದಿನಗಳು ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ವೇದ ಇತಿಹಾಸ ಕಾಲಗಳಿಂದಲೂ ಹಾಸುಹೊಕ್ಕಾಗಿ ಸಾಗಿ ಬಂದಿದೆ. ಇಂತಹ ಜಾತ್ರೆ-ಉತ್ಸವಗಳು ಭಾರತೀಯರ ಸಮಗ್ರ ಬದುಕಿನ ಭಾವೈಕ್ಯತೆಯ ಪ್ರತೀಕವಾಗಿವೆ.  ಆದರೆ, ಇತಿಹಾಸ ತಿಳಿಯದ ಕೆಲವರಿಂದ ಅನಾವಶ್ಯಕವಾಗಿ ತೊಂದರೆ, ತಾಪತ್ರಯಗಳು ಉಂಟಾಗುತ್ತಿರುವ ಪರಿಣಾಮ ಅವಭಿಕ್ತ ಪರಂಪರೆಯ ಭಾರತ ಛಿದ್ರವಾಗುತ್ತಲಿದೆ ಎಂದು ಡಿವೈಎಸ್ಪಿ ಟಿ.ವಿ.ಸುರೇಶ ವಿಷಾಧಿಸಿದರು.

ಅವರು ಶುಕ್ರವಾರ ಸಂಜೆ ನಗರಠಾಣಾ ಸಭಾಭವನದಲ್ಲಿ ನಡೆದ ಶ್ರೀ ಗಂಗಾಜಲ-ತುಂಗಾಜಲ ಚೌಡೇಶ್ವರಿ ದೇವಿಯ ಜಾತ್ರೋತ್ಸವದ ನಿಮಿತ್ತವಾಗಿ ಆಯೋಜಿಸಿದ್ದ, ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ರಾಣೇಬೆನ್ನೂರು ನಗರ ಮತ್ತು ತಾಲೂಕು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ.  ಶಾಂತಿ ಸೌಹಾರ್ಧತೆಯನ್ನು ನಿರಂತರವಾಗಿ ಕಾಯ್ದುಕೊಂಡು ಸಾಗಿಬಂದ ವಾಣಿಜ್ಯ ನಗರವೂ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಜಾತ್ರಾ ಉತ್ಸವವಗಳು ನಡೆಯುವುದು ಸವರ್ೇಸಾಮಾನ್ಯ ಇದೇನು ಹೊಸದಲ್ಲ.  ಎಲ್ಲರೂ ಶಾಂತಿ-ಸೌಹಾರ್ಧತೆಯಿಂದ ಉತ್ಸವಗಳನ್ನು ಅತ್ಯಂತ ಭಕ್ತಿ-ಭಾವ ಮತ್ತು ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಆಚರಿಸಲು ಮುಂದಾಗಬೇಕು ಎನ್ನುವರ ಆಶಯ ನಮ್ಮದು.  ನಾಗರೀಕರು ಕಾನೂನು ಇಲಾಖೆಯೊಂದಿಗೆ ಸಹಕರಿಸಿ ಭಾವೈಕ್ಯತೆ ಮೆರೆಯಬೇಕು ಎಂದು ಕರೆನೀಡಿದರು. 

ಸಭೆಯಲ್ಲಿ ಪಾಲ್ಗೊಂಡಿದ್ದ, ತುಂಗಾಜಲ ಚೌಡೇಶ್ವರಿ ಜಾತ್ರಾ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಮಾತನಾಡಿ, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕರ, ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ, ನಿಂಗರಾಜ ಕೋಡಿಹಳ್ಳಿ, ರಾಜು ಕರಡೆಣ್ಣನವರ, ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರು, ಮಂಜುಳಾ ಹತ್ತಿ, ಜಯಶ್ರೀ ಪಿಶೆ, ಸಿದ್ದು ಚಿಕ್ಕಬಿದರಿ,ಲಕ್ಷ್ಮಣ ಚಿಂತಾ, ಕೆ.ಎಚ್.ಭಜಂತ್ರಿ, ಪ್ರಭುಸ್ವಾಮಿ ಕರ್ಜಗಿಮಠ ಮೊದಲಾದವರು ಶಾಂತಿ ಸೌಹರ್ಾಧತೆಯ ಹಬ್ಬಗಳನ್ನು ಆಚರಿಸುವ ಕುರಿತಂತೆ ಮಾತನಾಡಿದರು.  

ವೇದಿಕೆಯಲ್ಲಿ ತಹಶೀಲ್ದಾರ ಬಸವರಾಜ ಕೋಟೂರು, ನಗರಸಭೆ ಪೌರಾಯಕ್ತ ಡಾ,ಮಹಾಂತೇಶ ಎನ್, ಕೆಇಬಿ ಸಹಾಯಕ ಅಭಿಯಂತರ ವಿರುಪಾಕ್ಷಪ್ಪ, ಸಿಪಿಐ ಲಿಂಗನಗೌಡ ನೆಗಳೂರು, ಪಿಎಸ್ಐಗಳಾದ ಪ್ರಭು, ಎಸ್.ಎಸ್.ಉದಗಟ್ಟಿ, ಚೌಟಗಿ, ಮೊದಲಾದವರು ಉಪಸ್ಥಿತರಿದ್ದರು.