ನೇಸರಗಿ 29: ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗುವುದಕ್ಕಿಂತ ಕಲಿಸಿದ ಶಿಕ್ಷಕರಿಗೆ ಬೇರೊಂದು ಸಂತೋಷ ಇಲ್ಲ ಎಂದು ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕ ಶರೀಪ ನಧಾಪ ಹೇಳಿದರು.
ಶುಕ್ರವಾರ ಸಂಜೆ ಸಮೀಪದ ಮೇಕಲಮರಡಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅನುಸೂಯಾ ಶಂ. ಮದನಭಾವಿ ಅವರಿಗೆ ಸತ್ಕಾರ ಕಾರ್ಯಕ್ರಮ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧನೆ ಮಾಡಲು ಗಟ್ಟಿ ಮನಸ್ಸು ಮಾಡಿ ಪ್ರಯತ್ನಿಸಿದರೆ ಯಶಸ್ಸು ಗಳಿಸಲು ಸಾಧ್ಯವಿದೆ. ಅದಕ್ಕೆ ತಕ್ಕಂತ ಸತತ ಪ್ರಯತ್ನಗಳ ಮೂಲಕ ಕಾರ್ಯ ಮಾಡಿದಲ್ಲಿ ಆಗದ ಕೆಲಸವನ್ನು ಸಾಧಿಸಬಹುದೆಂದರು.
ಉಪನ್ಯಾಸಕ ಎಚ್.ಪಿ.ಭಜಂತ್ರಿ ಮಾತನಾಡಿ, ಕಲಿತ ಶಾಲೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿರುವ ಶಿಕ್ಷಕಿ ಅನುಸೂಯಾ ಮದನಭಾವಿಯವರನ್ನು ಸತ್ಕರಿಸುವದು ಸಂತಸ ಮೂಡಿಸಿದೆ. ಇಂತಹ ಅಪಾರ ಸಾಧನೆ ಹಿಂದೆ ಬಿದ್ದಿರುವ ಶಿಕ್ಷಕಿ ಅನುಸೂಯಾ ಇನ್ನಷ್ಟು ಯಶಸ್ಸು ಗಳಿಸಲಿ ಎಂದರು.
ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಮಾತನಾಡಿ, ಉನ್ನತ ಮಟ್ಟದ ಪ್ರಶಸ್ತಿಗೆ ಪಾತ್ರರಾಗುವದು ಸುಲಭದ ಮಾತಲ್ಲ. ಒಳ್ಳೆಯ ಕೌಶಲ್ಯ, ಪ್ರಾಮಾಣಿಕತೆ ಮೂಲಕ ಗ್ರಾಮೀಣ ಪ್ರದೇಶದ ಶಿಕ್ಷಕಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಮಾಜಿ ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಎಸ್‌ಡಿಎಂಸಿ ಅಧ್ಯಕ್ಷ ಅಜೀತ ತುಬಾಕದ, ಪ್ರಗತಿಪರ ರೈತ ಗೌಡಪ್ಪ ಯರಡಾಲ, ಮುಖ್ಯೋಪಾಧ್ಯಾಯ ಅರ್ಜುನ ಕಡೆಟ್ಟಿ, ಶಿಕ್ಷಕ ಸಾಹಿತಿ ವಾಯ್.ಬಿ.ಕಡಕೋಳ, ಪಿಎಸ್ ಐ ಐ.ಎಚ್.ರಿತ್ತಿ, ಮುಖ್ಯೋಪಾಧ್ಯಾಯ ಎಸ್.ಎಸ್.ಗಾಣಗಿ, ದೈಹಿಕ ಶಿಕ್ಷಕ ಎ.ಆರ್.ಸುಂಕದ, ಗ್ರಾ.ಪಂ ಅಧ್ಯಕ್ಷೆ ಭಾರತಿ ತಿಗಡಿ, ಗ್ರಾ.ಪಂ ಉಪಾದ್ಯಕ್ಷ ಕಾಶೀಮ ಜಮಾದಾರ, ಪಿಕೆಪಿಎಸ್ ಅಧ್ಯಕ್ಷ ಬಾಹುಬಲಿ ಟಗರಿ, ಪಿಕೆಪಿಎಸ್ ಉಪಾದ್ಯಕ್ಷ. ನಿಂಗಪ್ಪ ಬುದನೂರ, ಗ್ರಾಮ ಲೆಕ್ಕಾಧಿಕಾರಿ ಈರಣ್ಣ ಕೇಂದ್ರಿ, ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ, ಸಾಮಾಜಿಕ ಕಾರ್ಯಕರ್ತ ಸೋಮಲಿಂಗ ಮದನಭಾವಿ, ಮುಖ್ಯೋಪಾಧ್ಯಾಯ ಡಿ.ಎಂ.ನಾಯ್ಕರ, ಎಸ್.ಎ.ಕೇರಿ, ಎಸ್.ಜಿ.ಅರುನಾಚಲಮಠ, ಮಲ್ಲಿಕಾರ್ಜುನ ಮದನಭಾವಿ, ಶಶಿಕಲಾ ಯಡವಿನಾಯ್ಕರ, ಎ.ವಿ.ಹೊಮಕರ, ಫಕೀರ್ಪ ಉದ್ದಾನಾಯ್ಕ, ಶ್ರೀಮತಿ ಎಸ್.ಎಸ್.ಭಟ್, ಶಾಂತಾ ಬಿಲ್ಲ್, ಸಿ.ಎಫ್.ಭಜಂತ್ರಿ, ಐ.ಬಿ.ದೂಪದಾಳ, ಅರ್ಜುನ ಹಣ್ಣಿಕೇರಿ, ಭೀಮಸೇಪ್ಪ ಕಡೆಟ್ಟಿ, ಮಂಜುನಾಥ ಹುಲಮನಿ, ಬಾಳೇಶ ಪೂಜೇರಿ, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು, ಎಸ್ ಡಿ ಎಂ ಸಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಿತು. ಪ್ರಕಾಶ ನಾಲಪರೋಶಿ ಸ್ವಾಗತಿಸಿದರು. ವಾಯ್.ಆರ್.ಗುಡಿ ನಿರೂಪಿಸಿದರು.