ಲೋಕದರ್ಶನ ವರದಿ
ಮೂಡಲಗಿ 29: ಇಂದಿನ ಯುಗದಲ್ಲಿ ಪ್ರತಿಯೊಬ್ಬ ತಂದೆ-ತಾಯಿ, ಪೊಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಪ್ರತಿ ಮಗುವಿಗೆ ಶಿಕ್ಷಣಕ್ಕೆ ಕೊಡಿಸುವುದರಲ್ಲಿ ಪಾಲಕರು ಪ್ರಯತ್ನಿಸಬೇಕು. ತಂದೆ ತಾಯಿಗಳು ಮಕ್ಕಳನ್ನು ಅಕ್ಕರೆಯಿಂದ ಕಾಣಬೇಕು ಎಂದು ಚಿಕ್ಕೋಡಿ ಡಿಡಿಪಿಆಯ್ ಗಜಾನನ ಮನ್ನಿಕೇರಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದ ಮುರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ರವಿವಾರ ಜ.26 ರಂದು ನಡೆದ ಶಾಲೆಯ 2019-20 ನೇ ಸಾಲಿನ ವಾಷರ್ಿಕ ಸ್ನೇಹ ಸಮೇಳನದಲ್ಲಿ ಉದ್ಘಾಟಕರಾಗಿ ಮಾತನಾಡಿ, ಶಿಕ್ಷಣದ ಮಹತ್ವದ ಕುರಿತು ಮಕ್ಕಳಿಗೆ ತಿಳಿಹೇಳಬೇಕು ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕೆಂದು ಅವರು ಸಲಹೆ ನೀಡಿದರು.
ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮುರಾಜರ್ಿ ದೇಸಾಯಿ ಶಾಲೆಗಳು ಉತ್ತಮವಾಗಿ ಕೆಲಸ ನೀಮರ್ಿಸುತ್ತಿವೆ. ಮಕ್ಕಳನ್ನು ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಿದ ಕಲ್ಲೋಳಿ ಪಟ್ಟಣದ ಮುರಾಜರ್ಿ ವಸತಿ ಶಾಲೆ ಜಿಲ್ಲೆ ಅಲ್ಲದೇ ರಾಜ್ಯದಲ್ಲಿ ಉತ್ತಮ ಕಾರ್ಯ ಚಟುವಟಿಕೆಯ ಹೆಸರು ಪಡೆದಿದೆ ಎಂದು ಡಿಡಿಪಿಆಯ್ ಗಜಾನನ ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಮ್ಮ ಪಾತ್ರ ಮುಖ್ಯ ಎಂದರು. ಡಿಸಿಸಿ ಬ್ಯಾಂಕ ನೀದರ್ೆಶಕ ನೀಲಕಂಠ ಕಪ್ಪಲಗುದ್ದಿ ಮಾತನಾಡಿ ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಕೀತರ್ಿ ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ ಎಂದರಲ್ಲದೆ ಕಲ್ಲೋಳಿ ಮುರಾಜರ್ಿ ವಸತಿ ಶಾಲೆಯಲ್ಲಿ ಪಿಯು ಕಾಲೇಜ ಮಂಜೂರ ನೀಡುವಂತೆ ಅಧಿಕಾರಿಗಳಲ್ಲಿ ವಿನಂತಿಸಿದರು. ಸಮಾಜ ಕಲ್ಯಾಣ ಜಿಲ್ಲಾ ಅಧಿಕಾರಿ ರಾಮಗೌಡ ಕನ್ನೋಳಿ ಅಧ್ಯಕ್ಷತೆ ವಹಿಸಿದ್ದರು.
ಪ್ರಸಕ್ತ ಸಾಲಿನಲ್ಲಿ ಆಯೀಜಿಸಿದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವಿವಿಧ ಶಾಲೆಗಳಿಗೆ ವಗರ್ಾಗೊಂಡ ಶಿಕ್ಷಕರನ್ನು ಈ ವೇಳೆ ಸನ್ಮಾನಿಸಲಾಯಿತು.
ಸ್ಥಳೀಯ ಪಟ್ಟಣ ಪಂಚಾಯಿತ ಸದಸ್ಯ ಮಲ್ಲಪ್ಪ ಹೆಬ್ಬಾಳ, ಬಸಪ್ಪ ಯಾದಗುಡ, ಬಸಪ್ಪ ದಾಸನಾಳ, ಆರ್.ಬಿ.ಗಾಗರ್ಿ, ಕೆ.ಎಸ್.ಮಾರಾಪೂರ, ಎಸ್.ಎ.ಠಕ್ಕನ್ನವರ, ಜಿ.ಎಂ.ಸಕ್ರಿ, ವಾಯ್.ಬಿ.ಭಾವಿಮನಿ, ವಾಯ್.ಎಲ್.ಹೊಸಮನಿ ಸೇರಿದಂತೆ ಇತರರು ಇದ್ದರು.
ಪ್ರಾಚಾರ್ಯ ಆರ್.ವಾಯ್.ಗಂಗರಡ್ಡಿ ಸ್ವಾಗತಿಸಿದರು. ಕೆ.ಬಿ.ಸಾಯನ್ನವರ ವಾಷರ್ಿಕ ವರದಿ ಓದಿದರು. ಆರ್.ಎಸ್.ಎಮ್ಮಿ ಕಾರ್ಯಕ್ರಮ ನಿರೂಪಿಸಿದರು. ಸಿ.ಎಂ.ಶಿರಗೂರ ವಂದಿಸಿದರು.