ರಾಯಬಾಗ 05: ರೈತರು ತಮ್ಮ ಜಮೀನದಲ್ಲಿರುವ ಮಣ್ಣನ್ನು ಪರೀಕ್ಷಿಸಲು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಭೂಮಿಗೆ ಅವಶ್ಯಕತೆಗೆ ತಕ್ಕಂತೆ ನೀರಿನ ಸೌಲಭ್ಯ ಮತ್ತು ಗೊಬ್ಬರ ನೀಡಬೇಕೆಂದು ಶಾಸಕ ಡಿ.ಎಮ್.ಐಹೊಳೆ ರೈತರಿಗೆ ಸಲಹೆ ನೀಡಿದರು.
ಬುಧವಾರದಂದು ಸಹಾಯಕ ಕೃಷಿ ನಿದರ್ೇಶಕರ ಕಚೇರಿಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಣ್ಣು ಆರೋಗ್ಯ ಬಗ್ಗೆ ರೈತರಿಗೆ ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆಯಬೇಕು. ಕೇಂದ್ರ ಸರಕಾರ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸಹಾಯಕ ಕೃಷಿ ನಿದರ್ೇಶಕ ಎಮ್.ಸಿ.ಮನ್ನಿಕೇರಿ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಭೂಮಿಗೆ ಅತೀಯಾದ ಅವೈಜ್ಞಾನಿಕ ರೀತಿಯಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿಯಲ್ಲಿರುವ ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳು ನಶಿಸಿ ಹೋಗುತ್ತಿರುವುದರಿಂದ ಭೂಮಿಯ ಫಲವತತ್ತೆ ಕಡಿಮೆ ಆಗುತ್ತಿದೆ. ಇದರಿಂದ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು. ರೈತರು ಕೃಷಿ ಇಲಾಖೆಗೆ ಸಂಪಕರ್ಿಸಿ ತಮ್ಮ ಭೂಮಿಯಲ್ಲಿನ ಮಣ್ಣು ಪರೀಕ್ಷಿಸಿ, ಭೂಮಿಗೆ ಬೇಕಾದಂತಹ ಪೋಷಕಾಂಶಗಳನ್ನು ನೀಡಬೇಕೆಂದು ಸಲಹೆ ನೀಡಿದರು.
ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ತಾ.ಕೃಷಿಕ ಸಮಾಜ ಅಧ್ಯಕ್ಷ ಅಪ್ಪಾಸಾಬ ಮಳವಾಡ, ಕೃಷಿ ಅಧಿಕಾರಿ ಲೊಕೇಶ ಬಿ.ಕೆ., ಕಲ್ಲಪ್ಪ ಹಾರೂಗೇರಿ, ಶಂಕರ ಮಾನಶೆಟ್ಟಿ, ಮಹಾದೇವ ಜೋಡಟ್ಟಿ, ಡಿ.ಎನ್.ಕೊಳಿ, ಬಿ.ಎ.ಕಿಲ್ಲೆದಾರ, ಎಮ್.ಜೆ.ಸನದಿ, ಎಮ್.ಕೆ.ಹುನಸಾಳ, ಎಸ್.ಕೆ.ಕುಂಬಾರ, ಜಿ.ಎಸ್.ಮುದ್ದಾಪರು ಸೇರಿದಂತೆ ಅನೇಕರು ಇದ್ದರು.