ವಿಶ್ವ ಹೃದಯ ದಿನಾಚರಣೆ: ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳು: ಸಚಿವ ದಿನೇಶ್ ಗುಂಡೂರಾವ್ ಭಾಗಿ

ಬೆಂಗಳೂರು 01: ಸ್ಪರ್ಷ್‌ ಆಸ್ಪತ್ರೆ  ಸಮೂಹವು ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಗರದ ಹಲವು ಕಡೆಗಳಲ್ಲಿ ಹೃದಯ ಆರೋಗ್ಯ ಜಾಗೃತಿ ಮತ್ತು ಆರೈಕೆ ಅರಿವು ಮೂಡಿಸಲು ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.   

ಇನ್ಫ್ಯಾಂಟ್ರಿ ರಸ್ತೆಯ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆಯೋಜಿಸಿದ್ದ “ಆರೋಗ್ಯಕರ ಹೃದಯಕ್ಕಾಗಿ ನಡಿಗೆ” (ವಾಕಥಾನ್) ಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಶಾಸಕ ರಿಜ್ವಾನ್ ಅರ್ಷದ್ ಪಾಲ್ಗೊಂಡು ನೂರಾರು ಜನರೊಂದಿಗೆ ಹೆಜ್ಜೆ ಹಾಕಿದರು.   

ಯಶವಂತಪುರ ಸ್ಪರ್ಷ್‌ ಆಸ್ಪತ್ರೆ ಆಯೋಜಿಸಿದ್ದ ‘ಸ್ಪರ್ಷ್‌ ಕ್ರಿಕೆಟ್ ಲೀಗ್ 2’ ಗೆ ಶಾಸಕರಾದ ಎಂ.ಕೃಷ್ಣಪ್ಪ ಮತ್ತು ಪ್ರಿಯಾ ಕೃಷ್ಣ ಶುಭ ಹಾರೈಸಿದರು.  

ಎಸ್‌.ಎಸ್‌.ಸ್ಪರ್ಷ್‌ ಆಸ್ಪತ್ರೆ ಆರ್‌.ಆರ್‌.ನಗರ ಆಯೋಜಿಸಿದ್ದ ‘ಹಾರ್ಟ್‌ಫುಲ್ ಹಾರ್ಮೊನಿ 2.0’ ಕಾರ್ಯಕ್ರಮದಲ್ಲಿ ಕೈಗಾರಿಕಾ ರಂಗದ ಪ್ರಮುಖ ನಾಯಕರು, ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡರು. ಇದೇ ವೇಳೆ ಯಲಹಂಕ ಸ್ಪರ್ಶ್‌ ಆಸ್ಪತ್ರೆ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಆರಿ​‍್ವಶ್ವನಾಥ್, ಐಎಂಎ ಯಲಹಂಕ ಅಧ್ಯಕ್ಷ ಪ್ರೊ.ಪವನ್ ಕುಮಾರ್ ಎಂ,ಕಾರ್ಯದರ್ಶಿ ಡಾ.ಶೈಲಕುಮಾರ್ ಹೆಚ್‌.ಕೆ ಮತ್ತು ತಾಲೂಕು ಆರೋಗ್ಯಾಧಿಕಾರಿ ಭಾಗವಹಿಸಿದ್ದರು.  

ಸ್ಪರ್ಶ್‌ ಆಸ್ಪತ್ರೆ ಸಮೂಹದ ಅನೇಕ ಹಿರಿಯ ಅಧಿಕಾರಿಗಳು ತಜ್ಞ ವೈದ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹೃದಯದ ಆರೋಗ್ಯ ಆರೈಕೆಯ ಕಾಳಜಿಗೆ ಸಾಕ್ಷಿಯಾದರು.ಸಮೂಹ ಸಿಒಒ ಜೋಸೆಫ್ ಪಸಂಗ, ಡಾ.ಕಿಷನ್ ನಾಗ್, ಜೀನ್ ರೆಚಲ್ ರಾವ್, ಕ.ರಾಹುಲ್ ತಿವಾರಿ, ಸುಧೀಂದ್ರಭಟ್, ಅಭಿಷೇಕ್ ಥಾಮಸ್ ಪಾಲ್ಗೊಂಡ ಆಸ್ಪತ್ರೆಯ ಪ್ರಮುಖರು.  

ಹೃದಯ ಸಂಬಂಧಿ ಕಾಯಿಲೆಗಳು, ಕ್ರಮಬದ್ಧವಾದ ನಿಯಮಿತ ವ್ಯಾಯಾಮದ ಪ್ರಮುಖ ಪಾತ್ರ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆರೋಗ್ಯಕರ ಹೃದಯಕ್ಕಾಗಿ ಜೀವನ ಶೈಲಿ ಅಳವಡಿಸುವ ನಿಟ್ಟಿನಲ್ಲಿ ಪ್ರತಿಜ್ಞಾಪೂರ್ವಕವಾಗಿ ಸಾವಿರಾರು ಮಂದಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.  

ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯತೆ ಕುರಿತು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ “ ಹೃದಯದ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತವೆ. ನಿಯಮಿತ ವ್ಯಾಯಾಮಗಳೊಂದಿಗೆ ಆರೋಗ್ಯ ತಪಾಸಣೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.ಈ ನಿಟ್ಟಿನಲ್ಲಿ ಸ್ಪರ್ಶ್‌ ಪ್ರಯತ್ನ ಶ್ಲಾಘನೀಯ ಎಂದರು.  

ಹೃದಯದ ಆರೈಕೆಯಲ್ಲಿ ಸ್ಪರ್ಶ್‌ ಸಮೂಹ ಆಸ್ಪತ್ರೆಗಳ ಬದ್ಧತೆ ಬಗ್ಗೆ ತಿಳಿಸಿಕೊಟ್ಟ ಸ್ಪರ್ಶ್‌ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್ “ ಸ್ಪರ್ಶ್‌ ಹೃದಯ ಚಿಕಿತ್ಸೆ ವಿಭಾಗವು ಅತ್ಯುತ್ತಮ ಚಿಕಿತ್ಸೆ ಮತ್ತು ಆರೈಕೆಯನ್ನು ಮಾಡುತ್ತಿದ್ದು ಬಹುಮುಖ್ಯವಾಗಿ ರೋಗ ತಡೆಗಟ್ಟಲು ಮಾಡಬೇಕಾದ ಆರೈಕೆ ಕುರಿತು ಗಮನ ಕೇಂದ್ರೀಕರಿಸಿದೆ. ಇಂತಹ ಕಾರ್ಯಕ್ರಮಗಳು ಹೃದಯದ ಆರೈಕೆ ಮತ್ತು ಆರೋಗ್ಯ ವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರು ಸ್ವಯಂಪ್ರೇರಿತ ಕ್ರಮಗಳನ್ನ ಕೈಗೊಳ್ಳಲು ಜಾಗೃತಿಗೊಳಿಸುವ ನಮ್ಮ ಬದ್ಧತೆಯ ದ್ಯೋತಕವಾಗಿದೆ.ಇಷ್ಟು ಅಪಾರ ಸಂಖ್ಯೆಯಲ್ಲಿ ಜನರ ಭಾಗವಹಿಸುವಿಕೆ ನಮ್ಮ ಉತ್ಸಾಹವನ್ನ ಬದ್ಧತೆಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.ಮತ್ತು ಆರೋಗ್ಯಕರ ಹೃದಯಕ್ಕಾಗಿ ಜನರು ಇನ್ನಷ್ಟು ಹೆಚ್ಚಿನ ಆದ್ಯತೆ ಮತ್ತು ಗಮನ ನೀಡುವ ಭರವಸೆ ಮೂಡಿಸಿದೆ” ಎಂದರು.  

ಸ್ಪರ್ಷ್‌ ಸಮೂಹ ಸಿಒಒ ಜೋಸೆಫ್ ಪಸಂಗ ಶೀಘ್ರ ಪತ್ತೆ ಮತ್ತು ಜೀವನಶೈಲಿಯನ್ನು ಮಾರ​‍್ಾಟು ಮಾಡುವ ಅಗತ್ಯತೆ ಕುರಿತು ಮಾತನಾಡಿದರು. ಹೃದಯದ ಆರೋಗ್ಯಕ್ಕಾಗಿ ಮಹತ್ವದ ಸಲಹೆಗಳನ್ನು ನೀಡಿದ ಅವರು ಭಾಗವಹಿಸಿದ ಪ್ರತಿಯೊಬ್ಬರೂ ಉತ್ತಮ ಹವ್ಯಾಸಗಳೊಂದಿಗೆ ನಿಯಮಿತವಾಗಿ ಹೃದಯದ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸಬೇಕೆಂದರು.