ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ: ತಳವಾರ ಅವಿರೋಧವಾಗಿ ಆಯ್ಕೆ
ಬ್ಯಾಡಗಿ 05: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪಿಎಲ್ಡಿ ಬ್ಯಾಂಕ್ ) ಚುನಾವಣೆಯಲ್ಲಿ ಮೋಟೆಬೆನ್ನೂರ (ಎಸ್ಟಿ ಮೀಸಲು) ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶೋಕ ಮಂಜಪ್ಪ ತಳವಾರ ಅವರನ್ನು ಶಾಸಕ ಬಸವರಾಜ ಶಿವಣ್ಣನವರ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪಕ್ಷದ ಧುರೀಣರಾದ ದಾನಪ್ಪ ಚೂರಿ, ನಾಗಣ್ಣ ಆನ್ವೇರಿ, ವೀರನಗೌಡ ಪಾಟೀಲ, ಮಾರುತಿ ಅಚ್ಚಿಗೇರಿ,ಬೀರಣ್ಣ ಬಣಕಾರ, ಡಿ.ಎಚ್.ಬುಡ್ಡನಗೌಡ್ರ, ಸುರೇಶಗೌಡ್ರ ಪಾಟೀಲ, ಶಿವಪುತ್ರ್ಪ ಅಗಡಿ, ಬಸವರಾಜ ಕೋಣನವರ ಇದ್ದರು.