ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಧಾರವಾಡ 30: ಡಾ. ಡಿ.ಜಿ. ಶೆಟ್ಟಿ ಎಜ್ಯುಕೇಷನಲ್ ಸೊಸೈಟಿಯ ಆರ್ ಎಸ್ ಶೆಟ್ಟಿ ಕಾಲೇಜ್ ಆಫ್ ಕಾಮರ್ಸ ಬಿ.ಕಾಂ ಹಾಗೂ ರುಕ್ಮೀಣಿ ಶೆಟ್ಟಿ ಬಿ.ಸಿ.ಎ-ಕಾಲೇಜಿನ ಶೈಕ್ಷಣಿಕ ವರ್ಷ 2023-24ನೇ ಸಾಲಿನ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಚರಿಸಲಾಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಡಾ.ಬಂಡು ಹೆಚ್‌. ಕುಲಕರ್ಣಿ ಸ್ಥಾನಿಕ ಸಂಪಾದಕರು ವಿಜಯ ಕರ್ನಾಟಕ, ಕಳೆದ 22 ವರ್ಷಗಳಿಂದ ಮಾಧ್ಯಮ ವಿಭಾಗದಲ್ಲಿ ಅನುಭವ ಹೊಂದಿರುವ ಇವರು ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ದಿ ಹಾಗೂ ಸಾಮಾನ್ಯ ತಿಳುವಳಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಇತ್ತಿಚೀನ ದಿನಗಳಲ್ಲಿ ಪ್ರಬಲವಾಗಿ ಹೊರಹೊಮ್ಮುತ್ತಿರುವ ತಾಂತ್ರಿಕತೆಯ ಬಗ್ಗೆ ತಿಳಿ ಹೇಳಿ ಮೊಬೈಲ್ ಬಳಕೆಯಿಂದ ಇಡೀ ಜಗತ್ತೇ ಒಬ್ಬ ಮನುಷ್ಯನ ಅಂಗೈಯಲ್ಲಿ ಇದ್ದಂತಾಗಿದೆ ಎಂದರು ಆದ್ದರಿಂದ ಮೊಬೈಲ್‌ನ್ನು ಉತ್ತಮ ಕೆಲಸಗಳಿಗೆ ಉಪಯೋಗಿಸಿ ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಮತ್ತು ಒಬ್ಬ ವಿದ್ಯಾರ್ಥಿಯು ಸಾಮಾನ್ಯ ತಿಳುವಳಿಕೆ ಕೌಶಲ್ಯಾಭಿವೃದ್ದಿಯ ಜೊತೆಗೆ ಜೀವನದಲ್ಲಿ ಮುನ್ನಡೆದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಕಿವಿಮಾತು ಹೇಳಿದರು. 

ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ ಜಿ. ಶೆಟ್ಟಿಯವರು ಮಾತನಾಡಿ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕಾದುದು ಅನಿವಾರ್ಯವಾಗುತ್ತಿದೆ. ಈ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಬ್ಬರೂ ಕೂಡಾ ಪ್ರಚಲಿತ ವಿದ್ಯಮಾನಗಳಿಗೆ ತಕ್ಕಂತೆ ತಮ್ಮನ್ನು ತಾವು ನವೀಕರಿಸಿಕೊಂಡು ಮುನ್ನಡೆಯಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್‌.ಎಮ್ ಸಾಲಿಮಠ, ಅನಿತಾ ಕೋರೆ, ಎಸ್‌.ಎನ್‌.ಗುಡಿ,ನಿಸರ್ಗ ನಾಯಕ, ಸೀಮಾ ಕೊಳಗಿ ಮುಂತಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ವಿದ್ಯಾರ್ಥಿಯಾದ ಕು. ಪ್ರತಿಭಾ ಪಾಟೀಲ ನಿರೂಪಿಸಿದರು ವಿದ್ಯಾರ್ಥಿಗಳಾದ ಚೈತ್ರಾ ಕಲ್ಪನಾ, ರಾಧಾ, ಏಕ್ತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಭೂಮಿಕಾ ಸ್ವಾಗತಿಸಿದರು. ವೆಂಕಟೇಶ ವಂದಿಸಿದರು.