ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ

Farewell ceremony for SSLC students

ಕಾರವಾರ 15: “ಶಾಲೆ ಎಂದರೆ ವಿದ್ಯಾ ದೇಗುಲ, ಪವಿತ್ರ ಸ್ಥಳ, ಉತ್ತಮ ಸಂಸ್ಕಾರ ಸಂಸ್ಕೃತಿಯ ಕೇಂದ್ರವಾಗಿದೆ. ನೀವು ಇಲ್ಲಿ ವಿದ್ಯೆಯ ಜೊತಗೆ ಶಿಸ್ತು, ಸಂಯಮ, ಸ್ವಚ್ಛತೆ, ಆತ್ಮವಿಶ್ವಾಸ ಹಾಗೂ ಎಲ್ಲರೊಂದಿಗೆ ಪ್ರೀತಿ ವಿಶ್ವಾಸ, ಶ್ರದ್ದಾ ಭಕ್ತಿಯಿಂದ ಇರುವುದನ್ನು ಕಲಿತ್ತಿದ್ದೀರಿ. ಇದು ನಿಮ್ಮ ಮುಂದಿನ ಜೀವನಕ್ಕೆ ನಾಂದಿಯಾಗಲಿದೆ” ಎಂದು ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಶ್ರೀ ಜಿ.ಪಿ. ಕಾಮತ ನುಡಿದರು. ಅವರು ಬಾಲಮಂದಿರ ಪ್ರೌಢಶಾಲೆಯ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. 

ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ, “ನಾಲ್ಕು ವರ್ಷದ ಮಗುವಾಗಿದ್ದಾಗಿನಿಂದ ನಮ್ಮೊಂದಿಗಿದ್ದ ನೀವುಗಳು ಈಗ ಬೆಳೆದು ಪ್ರಬುದ್ಧರಾಗಿದ್ದೀರಿ. ಕೇವಲ ದೈಹಿಕವಾಗಿ ಮಾತ್ರವಲ್ಲ, ನಮ್ಮ ಶಿಕ್ಷಕರು ನಿಮ್ಮನ್ನು ಬೌದ್ಧಿಕವಾಗಿಯೂ ಬೆಳೆಸಿದ್ದಾರೆ” ಎಂದು ನುಡಿದರು. 

ವಿದ್ಯಾರ್ಥಿಗಳಾದ ಕು. ಧನ್ಯಶ್ರೀ ಕುರ್ಸೆ, ಕು. ಆದಿತ್ಯ ಎ. ನಾಯ್ಕ, ಕು. ಸಾತ್ವಿಕ್ ಎಚ್‌.ಎಸ್‌., ಕು. ಯೆಸುಫ್ ಶೇಖ್, ಕು. ಅರನವ ಕದಂ, ಕು. ಪವನ ಗಾಲಿ, ಕು. ಶುಹೇಲ್ ಪ್ರಜಾಪತಿ, ಕು. ಯಾನ್ ಗೊವೇಕರ ಹಾಗೂ ಷಣ್ಮಖ ಗೌಡ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡರು. 

ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಶಕ್ಷಕಿ ದೀಪಾ ಪಿ. ನಾಯ್ಕ ತಮ್ಮ ಅನುಭವ ಹಂಚಿಕೊಂಡರು. ಶಿಕ್ಷಕಿ ಸೀಮಾ ರೇವಣಕರ ಕಾರ್ಯಕ್ರಮ ನಿರೂಪಿಸಿದರು. ನಾಹಿದಾ ಹನಗಿ ಮಕ್ಕಳಿಂದ ಪ್ರಮಾಣವಚನ ಬೋಧಿಸಿದರು ಹಾಗೂ ರಾಜಶ್ರೀ ಹರಿಕಂತ್ರ ವಂದನೆ ಸಲ್ಲಿಸಿದರು. ಈ ಸಮಾರಂಭದಲ್ಲಿ ಎಲ್ಲಾ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.