ನ್ಯಾಯಬೆಲೆ ಅಂಗಡಿಗೂ ಪೊಲೀಸರಿಗೂ ಸಂಬಂಧವೇ ಇಲ್ಲ - ಟಿ.ಕೃಷ್ಣಪ್ಪ
Fair price shop has no connection with police - T. Krishnappa
ಬಳ್ಳಾರಿ 16: ಸರ್ಕಾರದ ಪಡಿತರ ಧಾನ್ಯಗಳನ್ನು ನ್ಯಾಯಯುತವಾಗಿ, ಯಾವುದೇ ಗೊಂದಲಗಳಿಲ್ಲದೇ ವಿತರಿಸುತ್ತಿರುವ ನಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಪೊಲೀಸರು ತನಿಖೆ ಮಾಡುವುದು, ಆಗಾಗ್ಗೆ ದಾಳಿ ನಡೆಸಿ ತಪಾಸಣೆ ಮಾಡುವುದು, ಕರ್ತವ್ಯ ನಿರತ ಅಂಗಡಿ ಮಾಲೀಕರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರ ಪೊಲೀಸರಿಗಿಲ್ಲ, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆದಿರುವುದು ಅತ್ಯಂತ ಖಂಡನೀಯ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಾಧ್ಯಕ್ಷ ಟಿ.ಕೃಷ್ಣಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಬಗ್ಗೆ ದೂರುಗಳು ಬಂದಾಗ ವಿಚಾರಣೆ ಮಾಡಿ, ನೋಟಿಸ್ ನೀಡಿ, ನಾವು ನಮ್ಮ ಅಂಗಡಿ ಮಾಲೀಕರ ಪರವಾಗಿದ್ದೇವೆ, ನಾವು ಅದನ್ನು ಎದುರಿಸುತ್ತೇವೆ. ಅದನ್ನು ಕೈಬಿಟ್ಟು ವಿನಾಕಾರಣ ನಮ್ಮ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪೊಲೀಸರು ತನಿಖೆ ಮಾಡುವುದು, ವಿಚಾರಣೆಗೆ ಒಳಪಡಿಸುವುದು ಇಷ್ಟರಮಟ್ಟಿಗೆ ಸರಿ, ಇದನ್ನು ನಾವು ಖಂಡಿಸುತ್ತೇವೆ. ಈ ಕುರಿತು ಆಹಾರ ಇಲಾಖೆ ಸಚಿವರಾದ ಮುನಿಯಪ್ಪ ಅವರೊಂದಿಗೆ ಹಾಗೂ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ, ನಮ್ಮ ನ್ಯಾಯಬೆಲೆ ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಅಧೈರ್ಯಕ್ಕೆ ಒಳಗಾಗಬೇಡಿ, ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ಸಂಘವಿದೆ. ಇದು ಬಡವರ ಸೇವೆ ಮಾಡುವ ಒಂದು ಸೌಭಾಗ್ಯದ ಕೆಲಸ, ನಾವೆಲ್ಲರೂ ತೃಪ್ತಿಯಾಗಿ ಕೆಲಸ ಮಾಡುತ್ತಿದ್ದೇವೆ.
ಹೀಗಿರುವಾಗ ಪೊಲೀಸರು ವಿನಾಕಾರಣ ಅಂಗಡಿ ಮಾಲೀಕರಿಗೆ ಭಯ ಹುಟ್ಟಿಸುವ ಕೆಲಸ ಮಾಡುವುದು ಸರಿಯಲ್ಲ. ಬಳ್ಳಾರಿಯ ಘಟನೆ ಇಡೀ ರಾಜ್ಯದ ಗಮನಸೆಳೆದಿದೆ ಎಂದರು. ಸರ್ವರ್ ಸಮಸ್ಯೆ ಸದ್ಯಕ್ಕೆ ಸರಿಹೋಗಿದೆ, ನಮ್ಮ ಮಾಲೀಕರು ಈ ಕುರಿತು ಗಮನಸೆಳೆದಾಗ ಸರ್ಕಾರದೊಂದಿಗೆ ಚರ್ಚಿಸಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿರುವೆ. ನಮ್ಮ ಅಂಗಡಿ ಮಾಲೀಕರಿಗೆ ಪಾವತಿಯಾಗಬೇಕಿದ್ದ ಕಮಿಷನ್ ಹಣ ಏಕಕಾಲಕ್ಕೆ ಅವರವರ ಖಾತೆಗಳಿಗೆ ಜಮಾ ಆಗಿದೆ. ಆಗಾಗ್ಗೆ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ತೊಂದರೆಯಾಗುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಸರ್ಕಾರಕ್ಕೆ ಇದೇ ತಿಂಗಳು ಮೇ.15ಕ್ಕೆ ಗಡವು ನೀಡಲಾಗಿದೆ. ಸಮಸ್ಯೆ ಇದೆ ರೀತಿ ಮುಂದುವರೆದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಈ ಹಿಂದೆ ನೀಡಿದ ಭರವಸೆಯಂತೆ ಅಂಗಡಿ ಮಾಲೀಕರ ಕಮಿಷನ್ ಹಣ 124 ರಿಂದ 150 ರೂ.ಹೆಚ್ಚಳವಾಗಿದೆ.
ಇದನ್ನು 200 ರೂ.ಮಾಡಲು ಸರ್ಕಾರದೊಂದಿಗೆ ನ್ಯಾಯಯುತವಾಗಿ ಹೋರಾಟ ಮಾಡುವೆ, ಇದು ಭರವಸೆಯಲ್ಲ, ನುಡಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 200 ರೂ.ವರೆಗೆ ಮಾಡಿಸುವೆ. 2 ರಿಂದ 3 ತಿಂಗಳು ನೆನೆಗುದಿಗೆ ಬಿದ್ದ ಕಮಿಷನ್ ಹಣ ಎಲ್ಲರಿಗೂ ಬಿಡುಗಡೆ ಮಾಡಿಸಿದೆ. ಒಗ್ಗಟ್ಟಿನಲ್ಲಿ ಬಲವಿದೆ, ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೆ ಯಾವುದೇ ಸೌಲಭ್ಯವಿರಲಿ ಸರ್ಕಾರದಿಂದ ಪಡೆಯಬಹುದು ಎಂದರು. ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮಾತನಾಡಿ, ನಮ್ಮ ಸಂಘದ ರಾಜ್ಯಾಧ್ಯಕರಾದ ಟಿ.ಕೃಷ್ಣಪ್ಪ ಅವರು, ಅಂಗಡಿ ಮಾಲೀಕರ ಪರವಾಗಿ ಹಗಲಿರುಳು ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸಬೇಕು.
ವಿತರಕರಿಗೆ ಈ ಹಿಂದೆ ನೀಡುತ್ತಿದ್ದ 18 ರೂ.ಕಮಿಷನ್ ಹಣವನ್ನು 150 ರೂ.ಗೆ ಹೆಚ್ಚಿಸಿದ್ದು, ನಮ್ಮ ಕೃಷ್ಣಪ್ಪ ಅವರ ಶ್ರಮ, ಹೋರಾಟದಿಂದ ಎನ್ನುವುದು ಮರೆಯಕೂಡದು. ಪೊಲೀಸರು ನಮ್ಮ ಅಂಗಡಿಗೆ ತೆರಳಿ ತನಿಖೆ ಮಾಡುತ್ತಿರುವುದು ಸರಿಯಲ್ಲ, ನಮಗೆ ಅವರೇನು ಸಂಬಂಧ, ಯಾರೋ ಒಬ್ಬರು ತಪ್ಪು ಮಾಡಿದರೇ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ್ ಹೆಗಡೆ, ರಾಜ್ಯ ಸಮಿತಿ ಸದಸ್ಯ ವೇಮಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಹುಂಡೇಕರ್ ಪ್ರಕಾಶ್, ಹುಸೇನಪ್ಪ, ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಕೊಡ್ಲಿ, ಜಗದೀಶ್ ಸ್ವಾಮಿ, ವೆಂಕಟೇಶ್, ಪಂಪಾಪತಿ, ಜಗನ್ನಾಥ ಗೌಡ್ರು, ಪಾಲಾಕ್ಷಿ ರೆಡ್ಡಿ, ಕೌಲ್ ಬಜಾರ್ ಮಾರುತಿ ಸೇರಿದಂತೆ ನ್ಯಾಯಬೆಲೆ ಅಂಗಡಿ ಮಾಲೀಕರು ಇತರರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 