ಸವಣೂರ25 : ಬದುಕಿಗೆ ಕಣ್ಣುಗಳು ಬಹಳ ಮುಖ್ಯವಾಗಿದ್ದು, ಅವುಗಳ ತಪಾಸಣೆ ಹಾಗೂ ಕಾಳಜಿ ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಮನೀಷಾ ಹೇಳಿದರು. ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.ಅಮ್ಮಾ ಸಂಸ್ಥೆ (ರಿ)ಹಿರೇಮುಗದೂರ, ಕನರ್ಾಟಕ ವೃತ್ತಿಪರ ಶಿಕ್ಷಣ ಪದವೀಧರರ ಸಂಘ(ರಿ)ಹಾವೇರಿ ಜಿಲ್ಲಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರದಲ್ಲಿ ಭಾಗಿಯಾಗಿ ಕಣ್ಣಿನ ಮಹತ್ವದ ಬಗ್ಗೆ ಮಾತನಾಡಿದರು. ಹಿರಿಯರು ವಯಸ್ಸು ಆದಂತೆ ಕಣ್ಣುಗಳ ಬಗ್ಗೆ ಜಾಗೃತಿವಹಿಸಿ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.ಇಂತಹ ಉಚಿತ ಶಿಬಿರಗಳ ಸದುಪಯೋಗ ಮೂಲಕ ಅಂಧತ್ವ ನಿವಾರಣೆ ಮಾಡಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಸೂಕ್ಷ್ಮ ಅಂಗವಾಗಿರುವ ಕಣ್ಣುಗಳು ಬಾಹ್ಯ ಪರಿಸರ ನೋಡಿ ಆನಂದಿಸಬೇಕಾದರೆ ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರ ಜವಬ್ದಾರಿವಾಗಿದೆ. ನಿಮ್ಮ ಅಕ್ಕಪಕ್ಕ ಜನರಿಗೂ ಕಣ್ಣು ತಪಾಸಣಾ ಶಿಬಿರದ ತಿಳಿಸಿ ಎಂದು ಆರೋಗ್ಯ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಶಿವಮೊಗ್ಗದ ಶಂಕರ ಆಸ್ಪತ್ರೆಯ ಕಾರ್ಯವೃಂದದವರಾದ ವೆಂಕಟೇಶ್,ಶಿವಕುಮಾರ,ರಂಜಿತಾ, ಮಹ್ಮದ ಯುಸೂಫ್ ಹೋಂಗಲ್ ಸಂಸ್ಥೆ(ರಿ)ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಈ ಶಿಬಿರದಲ್ಲಿ 200 ಕ್ಕೂ ಜನರು ಭಾಗಿಯಾಗಿದ್ದರು.