ಡಯಾಲಿಸಿಸ್ ಯಂತ್ರದ ಬಗ್ಗೆ ಸವಿಸ್ತಾರ ತಿಳುವಳಿಕೆ

ಬೆಳಗಾವಿ : ಡಯಾಲಿಸಿಸ್ನ ಕಾರ್ಯ ಏನು ಎಂದರೆ ನಮ್ಮ ಕಿಡ್ನಿ ಏನು ಕೆಲಸ ಮಾಡುತ್ತದೆವೂ ಅದೆ ತೇರನಾಗಿ ಈ ಡಯಾಲಿಸಿಸ್ ಯಂತ್ರ ಕಾರ್ಯನಿರ್ವಹಿಸುತ್ತದೆ. ನಮ್ಮ ದೇಹದಲ್ಲಿ ರಕ್ತ ಉತ್ಪತ್ತಿ ಮಾಡುವುದು, ಕಿಡ್ನಿಗೆ ಸಂಬಧಿಸಿದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಯಂತ್ರದ ಮೂಲಕ ಸರಿ ಮಾಡಬಹುದು, ಜೊತೆಗೆ ರಕ್ತ ಒತ್ತಡ, ರಕ್ತ ಸುದ್ದಿಕರಣ ಮಾಡಬಹುದು ಹೀಗೆ ಹತ್ತು ಹಲವು ಲಾಭದಾಯಕವಾಗಿದೆ ಎಂದು ಡಾ. ಕೃಷ್ಣ ಕುಮಾರ ಹೇಳಿದರು.

ಸೋಮವಾರ ನಗರದ ಗೊಮ್ಮಟೇಶ್ ಕ್ಯಾಂಪಸ್ನಲ್ಲಿರುವ ಜೈನ್ ಬಸದಿಯಲ್ಲಿ ಶಹಾಪೂರ ಲಾಯನ್ಸ ಕ್ಲಬ್ನವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಯಾಲಿಸಿಸ್ ಯಂತ್ರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ನಂತರ ಮಾತನಾಡಿದ ಲಾಯನ್ಸ್ ಕ್ಲಬ್ ಉಪಾಧ್ಯಕ್ಷ ರಾಜೇಶ ದೇಸುರಕರ್, ಸಧ್ಯ ನೂತನ 5 ಜಮರ್ಿನಿಯ ಪ್ರೆಸೆನ್ಸಿಯಸ್ ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 10 ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಹಾಗೂ ಬಿ.ಪಿ.ಲ್ ಕಾಡರ್್ ಹೊಂದಿರುವ ಬಡವರಿಗೆ 'ಜೀವನ ವಧರ್ಿನಿ' ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಗೊಮ್ಮಟೇಶ ಸಂಸ್ಥೆಯ ಅಧ್ಯಕ್ಷ ಸಂಜಯ ಪಾಟೀಲ್ ಮಾತನಾಡಿ, ಸಕರ್ಾರದ ಎಲ್ಲ ಸೌಲಭ್ಯ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಹಾಗೂ ಈ ಡಯಾಲಿಸಿಸ್ ಯಂತ್ರ ಬಹು ಉಪಯುಕ್ತವಾಗಿದೆ. ಲಾಯನ್ಸ್ ಕ್ಲಬ್ ಅವರಿಗೆ ಶ್ಲಾಘನಿಯ ಹೇಳಿದರು.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕಾರ್ಯದಶರ್ಿ ಸಂಜೀವ ಅಧ್ಯಾಪಯ, ವೇಣುಗ್ರಾಮ ಡಾಕ್ಟರ್ಸ್ ಮುಂತಾದವರು ಉಪಸ್ಥಿತರಿದ್ದರು.