ಮ್ಯಾಕ್ಸ್ವೆಲ್ ಕುರಿತು ಹೊರಬಿತ್ತು ಸ್ಫೋಟಕ ಮಾಹಿತಿ


ನವದೆಹಲಿ 25: ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಸದ್ಯ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅವರ ಕುರಿತು ಸ್ಫೋಟಕ ಮಾಹಿತಿವೊಂದು ಹೊರಬಿದ್ದಿದೆ. 

ಹೌದು, 2017ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂನರ್ಿ ವೇಳೆ ಗ್ಲೆನ್ ಮ್ಯಾಕ್ಸ್ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದರು. ಟೂನರ್ಿಯ ವೇಳೆ ಗುಜರಾತ್ ಲಯನ್ಸ್ ತಂಡ ರಾಜ್ಕೋಟ್ನಲ್ಲಿ ರಾತ್ರಿ ಆಯೋಜಿಸಿದ್ದ ಪಾಟರ್ಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಭಾಗವಹಿಸಿದ್ದರು. 

ಮ್ಯಾಕ್ಸ್ವೆಲ್ ಯಾವುದೇ ಭದ್ರತೆಯನ್ನ ಪಡೆದುಕೊಳ್ಳದೇ, ತಂಡದ ಮ್ಯಾನೇಜರ್ಗೂ ಮಾಹಿತಿ ನೀಡದೇ ಪಾಟರ್ಿಯಲ್ಲಿ ಭಾಗವಹಿಸಿದ್ದರು. ಪಾಟರ್ಿಯಲ್ಲಿ ಮ್ಯಾಕ್ಸ್ವೆಲ್ ಸಂಪೂರ್ಣ ಪಾನಮತ್ತರಾಗಿದ್ದಾರೆ. ಬಳಿಕ ಸೈಕಲ್ ಮೂಲಕ ಯಾರೋಬ್ಬರ ಸಹಾಯ ಪಡೆಯದೇ ಪಂಜಾಬ್ ತಂಡ ಉಳಿದುಕೊಂಡಿದ್ದ ಹೊಟೆಲ್ಗೆ ವಾಪಾಸ್ಸಾಗಿದ್ದಾರೆ. 

ಸೈಕಲ್ ಮೂಲಕ ವಾಪಾಸಾಗುವ ದಾರಿಯಲ್ಲಿ ಮ್ಯಾಕ್ಸ್ವೆಲ್ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಸಾಕಷ್ಟು ವಾಹನ ಓಡಾಡೋ ದಾರಿಯಲ್ಲೇ ಬಿದ್ದ ಮ್ಯಾಕ್ಸ್ವೆಲ್ ಹರಸಾಹಸ ಪಟ್ಟು ಹೋಟೆಲ್ ತಲುಪಿದ್ದಾರೆ. ಹೈವೇ ರೋಡ್ನಲ್ಲಿ ಈ ಘಟನೆ ನಡೆದಿತ್ತು. ಒಂದು ವೇಳೆ ರಾತ್ರಿ ಏನಾದರೂ ಅನಾಹುತ ಸಂಭವಿಸಿದ್ದರೆ ಅವತ್ತೆ ಮ್ಯಾಕ್ಸ್ವೆಲ್ ಕತೆ ಮುಗಿಯುತಿತ್ತು ಎಂದು ಕ್ರಿಕ್ಟ್ರಾಕರ್ ವೆಬ್ಸೈಟ್ ಬಿಸಿಸಿಐ  ಮೂಲಗಳ ವರದಿಯನ್ನ ಪ್ರಕಟಿಸಿದೆ. 

ಈ ಘಟನೆಯನ್ನ ಬಿಸಿಸಿಐ ಬಹಿರಂಗವಾಗದಂತೆ ನೋಡಿಕೊಂಡಿತ್ತು. ಕಾರಣ ಇದು ಐಪಿಎಲ್ ಟೂನರ್ಿ ಮೇಲೂ ಕೆಟ್ಟ ಪರಿಣಾಮ ಬೀರಲಿದೆ ಅನ್ನೋ ಕಾರಣಕ್ಕೆ ಘಟನೆ ಹೊರಗೆೇ ಬರಲೇ ಇಲ್ಲ ಎಂದು ತಿಳಿದು ಬಂದಿದೆ.