ಕೇಂದ್ರ ಸರ್ಕಾರದ ವೈಪಲ್ಯತೆಗೆ ಸಾಕ್ಷಿ : ಶೇಖಪ್ಪ ಮಣಕಟ್ಟಿ

Evidence of the central government's incompetence: Shekhappa Manakatti

ಕೇಂದ್ರ ಸರ್ಕಾರದ ವೈಪಲ್ಯತೆಗೆ ಸಾಕ್ಷಿ : ಶೇಖಪ್ಪ ಮಣಕಟ್ಟಿ

ಶಿಗ್ಗಾವಿ 24 : ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಹೀನ ಕೃತ್ಯವಾಗಿದ್ದು ಕೇಂದ್ರ ಸರ್ಕಾರದ ವೈಪಲ್ಯತೆಗೆ ಸಾಕ್ಷಿಯಾಗಿದೆ ಎಂದು ಗ್ಯಾರಂಟಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ ಹೇಳಿದರು.    ಪಟ್ಟಣದ ಅಂಚೆ ಕಚೇರಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಯಿತು ನಂತರ ಚೆನ್ನಮ್ಮ ವೃತ್ತದಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ಜಮ್ಮು ಕಾಶ್ಮೀರದಲ್ಲಿ ಗುಂಡೇಟಿಗೆ ಬಲಿಯಾದ 26 ಜನರ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿದ ಅವರು ಭಾರತ ದೇಶದಲ್ಲಿ ಇತರದ ಘಟನೆ ಆಗಲಿಕ್ಕೆ ಕೇಂದ್ರ ಸರಕಾರ ಆಸ್ಪದ ಕೊಡಬಾರದು ಅಲ್ಲದೇ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಭಾರತ ಮತ್ತು ಕರ್ನಾಟಕ ಸರಕಾರಕ್ಕೆ ಒತ್ತಾಯಿಸಿದರು.  ನ್ಯಾಯವಾದಿ ಶ್ರೀಕಾಂತ ಪೂಜಾರ ಮಾತನಾಡಿ ಕೇಂದ್ರ ಸರಕಾರ ವೈಪಲ್ಯ ಖಂಡಿದೆ ಇದಕ್ಕೆ ಇದು ಎರಡನೇಯ ದಾಳಿಯಾಗಿದೆ. ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ ಅವರಿಗೆ ಕಾರ್ಮಿಕ ಸಚಿವ ಸಂತೋಷ ಲಾಡ ನೆರವಿನಿಂದ ಕರ್ನಾಟಕಕ್ಕೆ ವಾಪಸಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.  ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ ಮಾತನಾಡಿ ಹಗಲು ಹೊತ್ತಿನಲ್ಲಿ ಈ ತರಹದ ಕೃತ್ಯ ನಡೆದಿರುವುದು ಖಂಡನೀಯ ಅಲ್ಲದೇ ಉದ್ದೇಶ ಪೂರ್ವಕವಾಗಿ ನೆಡೆದ ಹೀನ ಕೃತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎಂ.ಪಠಾಣ, ಗೌಸಖಾನ ಮುನಶಿ, ಅಬ್ದುಲಕರೀಂ ಮೊಗಲಲ್ಲಿ, ಮುಕ್ತಾರ ತಿಮ್ಮಾಪೂರ, ಮಂಜುನಾಥ ಮಣ್ಣಣ್ಣವರ, ಶಂಭೂ ಆಜೂರ, ಮಹ್ಮದಹನೀಪ ಅಂಬೂರ, ಮುನ್ನಾ ಲಕ್ಷೇಶ್ವರ, ಮಲ್ಲಮ್ಮ ಸೋಮನಕಟ್ಟಿ, ಅನುಸೂಯಾ ಬಳಿಗಾರ, ಚಂದ್ರು ಕೊಡ್ಲಿವಾಡ, ಶಂಭು ನೆರ್ತಿ, ಸುಮಿತ ಸೂರ್ಯವಂಶಿ, ಪಿರೋಜ ಕಾಮನಹಳ್ಳಿ, ಅತ್ತಾವುಲ್ಲಾಖಾನ ಖಾಜೇಖಾನವರ, ಮುನ್ನಾ ಮಾಲ್ದಾರ, ಅಸೀಫ ಕಣವಿ, ಸರತಾಜ ಹಾನಗಲ್ಲ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಸುಧೀರ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.