ಜಮಖಂಡಿ 23: ತಾಲ್ಲೂಕಿನ ಸಮೀಪ ಹಿಪ್ಪರಗಿ ಬ್ಯಾರೇಜ್ ಬಳಿ ಸಾರಿಗೆ ಬಸ್ ಪಲ್ಟಿಯಾಗಿ ಬಿದ್ದು ಭಾರಿ ಅನಾಹುತ ತಪ್ಪಿದೆ.
ಜಮಖಂಡಿಯಿಂದ ಅಥಣಿ ಮಾರ್ಗವಾಗಿ ಚಲಿಸುವ ಸಾರಿಗೆ ಬಸ್ ಹಿಪ್ಪರಗಿ ಬ್ಯಾರೇಜ್ ಬಳಿ ಹೋಗುತ್ತಿದಂತೆ ಬಸ್‌ನ ಎಕ್ಸಲ್ ಪಾಟಾ ಕಟ್ಟಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು. ಜಮಖಂಡಿಯಿಂದ ಅಥಣಿಗೆ ಕಡೆಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್‌ನಲ್ಲಿ 6 ಜನ ಪ್ರಯಾಣಿಕರು ಇದ್ದು. ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ.
ಘಟನಾ ಸ್ಥಳಕ್ಕೆ ಘಟಕ ವ್ಯವಸ್ಥಾಪಕ ಬಿ,ಎನ್, ಗಸ್ತಿ, ಸಾರಿಗೆ ನಿಯಂತ್ರಿಕ ವಿಠ್ಠಲ ಕಾಂಬಳೆ, ಪಾಯಗೊಂಡ, ಮೆಕ್ಯಾನಿಕಲ್ ಮಸಿಬಿನಾಳ ಸೇರಿದಂತೆ ಸಿಬ್ಬಂದಿಗಳು ಪಲ್ಟಿಯಾಗಿರುವ ಬಸ್ ಮೇಲಕ್ಕೆ ಎತ್ತಲು ಕ್ರೈನ್‌ದ ಯಂತ್ರವನ್ನು ಬಳಸಲಾದೆ. ಬಸ್ ಯಾವಕಾರಣಕ್ಕೆ ಪಲ್ಟಿಯಾಗಿದ್ದು ನಿಖರವಾದ ಮಾಹಿತಿ ತಿಳಿದು ಬಂದಿರುವುದಿಲ್ಲ.