ಲೋಕದರ್ಶನ ವರದಿ
ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಬಿಜೆಪಿ ಪ್ರತಿಭಟನೆ
ಸಿಂದಗಿ 24: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿರುವ ದಾಳಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸಿಂದಗಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿರುವ ದಾಳಿ ಮನುಕುಲವನ್ನೇ ಬೆಚ್ಚಿ ಬೀಳಿಸುವಂತದ್ದು ಶೀಘ್ರವೇ ಈ ಹೇಯ ಕೃತ್ಯದ ಹಿಂದಿರುವ ಪ್ರತಿಯೊಬ್ಬ ಉಗ್ರನನ್ನೂ ಹುಡುಕಿ ಮಟ್ಟ ಹಾಕುವಲ್ಲಿ ನಮ್ಮ ಸೇನಾ ಪಡೆಗಳು ಯಶಸ್ವಿಯಾಗಲಿ ಎಂದರು.
ಸಿಂದಗಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಪಕ್ಷದ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಅವರು ಮಾತನಾಡಿದರು.
ನಂತರ ಬೀಕರ ಹತ್ಯಗೋಳಗಾದ ಹಿಂದುಗಳ ಆತ್ಮಕ್ಕೆ ಚೀರ ಶಾಂತಿ ನೀಡಲೇಂದು, ಅವರ ಕುಟುಂಬದ ಭಂದುಗಳಿಗೆ ದು:ಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲೆಂದು ಪ್ರಾರ್ಥೀಸಿ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದರು.
ಮಂಡಲ ಅಧ್ಯಕ ಸಂತೋಷಗೌಡ ಪಾಟೀಲ,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶೀ ಎಸ್, ಆರ್, ಪಾಟೀಲ, ಚೇತನ ಗುತ್ತೇದಾರ, ಶಿವಾನಂದ ಹಳೆಮನಿ, ಮಾಜಿ ತಾ, ಪಂ, ಸದಸ್ಯ ಶ್ರೀಶೈಲ ಚಳ್ಳಗಿ, ಬಿ, ಎಚ್ ಬಿರಾದಾರ, ಯುವ ಮೋರ್ಚಾ ಅಧ್ಯಕ್ಷ ಅಶೋಕ ನಾರಾಯಣಪುರ, ಎಸ್‌ಟಿ ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಗಿ, ಪಕ್ಷದ ಹಿರಿಯರಾದ ಚಂದ್ರಶೇಖರ ಅಮಲಿಯಾಳ, ಮಡಿವಾಳಪ್ಪಗೌಡ ಬಿರಾದಾರ, ಹಾಗೂ ನಮ್ಮ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅನೇಕರು ಸೇರಿದಂತೆ ಉಪಸ್ಥಿತರಿದ್ದರು