ಪ್ರತಿಯೊಬ್ಬರು ಪ್ರಾಣಿ ಪಕ್ಷಿಗಳ ಸಂಕುಲದ ಉಳಿವಿಗೆ ಪಣತೊಡಿ: ಪೂಜಾರ

ಲೋಕದರ್ಶನ ವರದಿ

ಬ್ಯಾಡಗಿ: ಪರಿಸರ ನಾಶ ಹಾಗೂ ಜಾಗತೀಕರಣದ ಭರಾಟೆಗೆ ಜಾಗತಿಕ ತಾಪಮಾನ ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು ಜೀವ ಸಂಕುಲದ ನಾಶಕ್ಕೆ ಮುನ್ನುಡಿ ಬರೆಯುತ್ತಿದೆ.ತಾಪಮಾನ ಹೆಚ್ಚಳದಿಂದಾಗಿ ಪ್ರತಿ ವರ್ಷಕೋಟ್ಯಾಂತರ ಪಕ್ಷಿಗಳು ಸಾವನ್ನುಪ್ಪುತ್ತಿದ್ದು, ಪ್ರತಿಯೊಬ್ಬರು ಪ್ರಾಣಿ ಪಕ್ಷಿಗಳ ಸಂಕುಲದ ಉಳಿವಿಗೆ ಪಣತೊಡಬೇಕಿದೆ ಎಂದು ತಾಪಂ ಕಾರ್ಯ ನಿವರ್ಾಹಕಅಧಿಕಾರಿ ಪರಶುರಾಮ ಪೂಜಾರ ಮನವಿ ಮಾಡಿದರು.

ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ತಾಲೂಕಾ ಕ್ರೀಡಾಂಗಣ, ಸೇರಿದಂತೆ ಪಟ್ಟಣದ ವಿವಿಧೆಗಳಲ್ಲಿ ಪ್ರಾಣಿ ಪಕ್ಷಿಗ ಳಿಗಾಗಿ ಕಟ್ಟಲಾದ ಸುಮಾರು ನೂರಕ್ಕೂ ಹೆಚ್ಚು ತೊಟ್ಟಿಗಳಲ್ಲಿ ನೀರು ಹಾಗೂ ಆಹಾರ ಹಾಕಿ "ಪಕ್ಷಿ ಸಂರಕ್ಷಣೆ" ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯನಿಗೆಕುತ್ತು: ತಂತ್ರಜ್ಞಾನ ಎಂಬ ಮಾಯಾ ಲೋಕದ ಹಿಂದೆ ಬಿದ್ದಿರುವ ಮನುಷ್ಯನಡಿಜಿಟಲ್ ವ್ಯಾಮೋಹಕ್ಕೆ (ಮೊಬೈಲ್) ಈಗಾಲಲೇ ಪಕ್ಷಿ ಸಂಕುಲ ವಿನಾಶದತ್ತ ಹೆಜ್ಜೆಇಟ್ಟಿದೆ. ಪ್ರತಿ ದಿನ ರೆಡಿಯೇಷನಿಂದ ಕೋಟ್ಯಾಂತರ ಪಕ್ಷಿಗಳು ಮರಣ ಹೊಂದುತ್ತಿವೆ. 

  ಇಷ್ಟಾದರೂ ಕೂಡಾ ಸಂಶೋಧನೆಗಳು ಮುಂದೆವರೆಯುತ್ತಲೇ ಇದ್ದು ಸಾಗಿದ್ದು ಮುಂದಿನ ದಿನ ಗಳಲ್ಲಿ ಇದರ ಪರಿಣಾಮ ಸ್ವತಃ ಮನುಷ್ಯ ಸಂಕುಲಕ್ಕೆ ಕುತ್ತುತರಲಿದೆ ಎಂದರು.

       ಮನೆಗೊಂದು ಸಸಿ ನೆಡಿ: ನಮ್ಮಂತೆಯೆ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದ್ದು ಅವುಗಳ ರಕ್ಷಣೆಗೆ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಜವಾಬ್ದಾರಿ ಹೋರಬೇಕಿದೆ. ಶತಮಾನದಲ್ಲಿಯೇ ಅತೀ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದು, ಇದಕ್ಕೆಲ್ಲ ಅರಣ್ಯ ನಾಶವೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮನೆಗೊಂದರಂತೆ ಸಸಿಯನ್ನು ನೆಟ್ಟು ಪೋಷಿಸುವ ಕಾರ್ಯವಾಗಬೇಕಿದೆಯಲ್ಲದೇ ಎಲ್ಲರೂ ತಮ್ಮ ಮನೆಯ ಮೇಲೆ ಪ್ರಾಣಿ ಪಕ್ಷಿಗಳಿಗೆ ಆಹಾರ ಮತ್ತು ನೀರು ಇಡಿ ಎಂದು ಮನವಿ ಮಾಡಿದರು.

        ಎಚ್ಚರಿಕೆಗಂಟೆ: ಕೃಷಿಕ ಸಮಾಜ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಅಂತರ್ಜಲ ಕುಸಿತ ಮತ್ತು ಅತಿಯಾದ ಪರಿಸರ ನಾಶದಿಂದ ಜಗತ್ತಿನ ಹಲವಾರು ನಗರಗಳಲ್ಲಿ ಈಗಾಗಲೇ ನೀರಿನ ಲವಾಷೇಶಗಳು ಇಲ್ಲದಂತಾಗಿ ಜನರು ನೀರಿಲ್ಲದೇ ಪರದಾಡುವಂತಾಗಿದೆ. 

       ಆಹಾರವಿಲ್ಲದೇ ಸಾಯುತ್ತಿರುವ ಜನರ ಸಂಖ್ಯೆಗಿಂದ ನೀರಿಲ್ಲದೇ ಸಾಯುವವರ ಸಂಖ್ಯೆಯೆ ಜಾಸ್ತಿ ಯಾಗಲಿರುವ ದಿನಗಳು ದೂರವಿಲ್ಲ ಎಂದರಲ್ಲದೇ ಸೃಷ್ಠಿ ಸಂಸ್ಥೆಯ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದರು.

       ಅಭಿಯಾನಕ್ಕೆ ಕೈಜೋಡಿಸಿ:  ಸಂಸ್ಥೆಯ ಸದಸ್ಯ ಪಾಂಡುರಂಗ ಸುತಾರ ಮಾತನಾಡಿ, ಸಂಸ್ಥೆಯ ವತಿಯಿಂದ "ಪಕ್ಷಿ ಸಂರಕ್ಷಣೆ" ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದುತಾಲೂಕಾಕ್ರೀಡಾಂಗಣ ಸೇರಿದಂತೆ ಪಟ್ಟಣದ ಸುತ್ತ ಮುತ್ತ ಪಕ್ಷಿಗಳಿಗೆ ನೀರು ಮತ್ತುಆಹಾರಒದಗಿಸುವ ಸಣ್ಣ ಪ್ರಯತ್ನ ಮಾಡಲಾಗಿದೆ. 

 ವಾಯು ವಿಹಾರಕ್ಕೆ ಬರುವಜನರುತಮ್ಮೊಡನೆಆಹಾರ ಮತ್ತು ನೀರ ನ್ನುತಂದು ಇವುಗಳಲ್ಲಿ ಹಾಕುವಂತೆ ಮನವಿ ಮಾಡಿದರಲ್ಲದೇಅಭಿಯಾನಕ್ಕೆ ಸ್ವಯಂ ಪ್ರೇರಿತರಾಗಿ ಸಹಕರಿಸುವಂತೆ ಕೋ ರಿದರು.

 ಈ ಸಂದರ್ಬದಲ್ಲಿ ಪಿಡಿಓಗಳಾದ ಪ್ರದೀಪಗಣೇಶ್ಕರ, ಉಪವಲಯಅರಣ್ಯಾಧಿಕಾರಿ ವಿ.ಎ.ಪಾಟೀಲ, ಅರಣ್ಯರಕ್ಷಕಜಗ ದೀಶ ದೀವಟರ, ಸಂಸ್ಥೆಯ ಸದಸ್ಯರಾದಚಂದ್ರು.ಎಸ್, ವಾಣಿ ಬೇತೂರಮಠ, ಕಿರಣ ಲಮಾಣಿ, ಮಂಜುನಾಥ ಲಮಾಣಿ, ಮಂಜುನಾಥ ಪೂಜಾರ, ಪುರಸಭೆ ಸಿಬ್ಬಂದಿಗಳಾದ ಮಾಲತೇಶ ಹಳ್ಳಿ, ಪ್ರತಾಪ,  ಸೇರಿದಂತೆಇನ್ನಿತರರು ಉಪ ಸ್ಥಿತರಿದ್ದರು