ಪ್ರತಿಯೊಬ್ಬರೂ ಸಂಘ ಸಂಸ್ಥೆಗಳಿಗೆ ಸಹಕಾರ ನೀಡಬೇಕು: ಹನುಮಂತರೆಡ್ಡಿ

ಸಮಾಜ ವಿಜ್ಞಾನ ವಿಚಾರ ವೇದಿಕೆ ಹಮ್ಮಿಕೊಂಡಿದ್ದ 'ಬಸವರತ್ನ' ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಸಮಾರಂಭ ಜರುಗಿತು.

ಲೋಕದರ್ಶನ ವರದಿ

ಕುರುಗೋಡು05 : ಸಮಾಜ ವಿಜ್ಞಾನ ವಿಚಾರ ವೇದಿಕೆಯು ಬಳ್ಳಾರಿ ಜಿಲ್ಲೆಯಲ್ಲಿ ಸಮಾಜದ ಹಿತದೃಷ್ಠಿಯಿಂದ ಮೂಢನಂಭಿಕೆ ವಿರುದ್ಧ, ಪರಿಸರ ಸಂರಕ್ಷಣೆ, ಪವಾಡು ಬಯಾಲು, ರೈತರ ಪರ, ಅಂತರಜಲ ಕುಸಿತ ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನುಡೆಯುತ್ತಿರುವ ಇಂತಹ ವೇದಿಕೆಗೆ ಪ್ರತಿಯೊಬ್ಬರೂ ಮತ್ತು ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಇತಿಹಾಸ ಸಂಶೋಧಕ ವೈ.ಹನುಮಂತರೆಡ್ಡಿ ಕರೆ ನೀಡಿದರು.  

   ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾಜ ವಿಜ್ಞಾನ ವಿಚಾರ ವೇದಿಕೆ ಹಮ್ಮಿಕೊಂಡಿದ್ದ 'ಬಸವರತ್ನ' ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಸಮಾರಂಭ ಹಾಗೂ ವೀರಸಂಗೊಳ್ಳಿರಾಯಣ್ಣ ನಾಟಕ ಮತ್ತು ಕವಿಕುಂಚ ಗಾಯನ ಕಾರ್ಯಕ್ರಮವು ಜರುಗಿತು. 

      ಪ್ರಸ್ತುತವಾಗಿ ಜನತೆ ಮೂಡನಂಬಿಕೆಗಳಿಗೆ ದಾಸರಾಗಿದ್ದಾರೆ. ಅವುಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ನಂಬಿ ತಮ್ಮ ಜೀವನದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ ಇಂಥಹವರಿಗೆ ಈ ವೇದಿಕೆಯು ಸಹಕಾರವಾಗಲಿದೆ ಎಂದರು.

ಪ್ರಾಂತರೈತ ಸಂಘದ ಜಿಲ್ಲಾದ್ಯಕ್ಷ ವಿಎಸ್.ಶಿವಶಂಕರ್ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಗಿಡಮರಗಳನ್ನು ಬೆಳೆಸಿ ಪರಿಸರವನ್ನು ಕಾಪಾಡಲು ಮುಂದಾಗಬೇಕು ಇಲ್ಲದಿದ್ದಾರೆ ಮುಂದಿನ ಪೀಳಿಗೆಗೆ ಕಷ್ಟವಾಗುತ್ತದೆ ಜೊತೆಗೆ ಈ ವೇದಿಕೆಯು ಪರಿಸರ ಸಂರಕ್ಷಣೆ ಮಾಡಲು ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

    ಹಾವಿಗೆ ಮಠದ ರಾಘವಾಂಕ ಮಹಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕೆಎಂ.ಉಮಾಪತಿಗೌಡ, ವೇದಿಕೆಯ ನಗರ ಅಧ್ಯಕ್ಷ ಜಾನೂರು ರಾಜಸಾಬ್ ಪ್ರಾಸ್ತವಿಕ ನುಡಿ ನುಡಿದರು, ವೇದಿಕೆಯ ಅಧ್ಯಕ್ಷ ಕೆ.ಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಸನ್ಮಾನ: ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ, ಚಾಣುಕ್ಯ ಪ್ರಶಸ್ತಿ ಹಾಗೂ ಬಸವರತ್ನ ರಾಷ್ಟ ಪ್ರಶಸ್ತಿ ವಿಜೇತರಾದ ಕೆ.ವೀರಭದ್ರಗೌಡರವರನ್ನು ಸನ್ಮಾನಿಸಲಾಯಿತು.

 ಗ್ರಾಮದ ಮುಖಂಡ ಎಸ್.ಪಿ.ಮಹಮ್ಮದ್ಖಾನ್, ಪಿ.ಅಲ್ಲಾಸಾಬ್, ಮುದಿಮಲ್ಲನಗೌಡ, ಪಂಪಾಪತಿಗೌಡ, ಎಸ್.ಟಿ.ಎಂ.ಸದಶಿವಸ್ವಾಮಿ, ಹೆಚ್.ಹುಷೇನ್ಭಾಷ, ಕೆ.ಶಾಂತಾನಾಯಕ್, ಎಸ್.ಭೀಮನಗೌಡ, ವಿ.ದುಗರ್ಾಪ್ರಸಾದ್, ಜಿಎಸ್.ಮೃತ್ಯುಂಜಯ, ಜಿ.ನಾಗರಾಜ್, ಎಂ.ಅಂಬರೇಶ್, ಕೆಎಂ.ಚಂದ್ರಶೇಖರಯ್ಯಸ್ವಾಮಿ, ವೀರೇಶ್, ಹರೀಶ್ ಚೌದರಿ, ವಿ.ಹನುಮೇಶ್, ಲಕ್ಷ್ಮಣ, ಎನ್.ಕುಮಾರ್, ಅಂಗಡಿ ವೀರಭದ್ರಗೌಡ, ಎಂಯು.ಪ್ರಭುರಾಜಗೌಡ, ಯೋಗೀಶ್ ಹೂಗಾರ್, ನಟರಾಜಗೌಡ, ಉದಯಕುಮಾರ್, ಗೋವರ್ಧನ್ ರೆಡ್ಡಿ, ಎನ್.ಯು.ವೇಂಕಟೇಶಪ್ಪ, ಪ್ರವೀಣ್ಸ್ವಾಮಿ, ಮಾರುತಿ ಸೇರಿದಂತೆ ವೀರಸಂಗೊಳ್ಳಿ ರಾಯಣ್ಣನಾಟಕದ ಕಲಾವಿದರು, ಕವಿಕುಂಚಗಾಯನದ ಸಂಗೀತ ಕಲಾವಿದರು ಹಾಗೂ ಸೇರಿದಂತೆ ಸಮಾಜ ವಿಜ್ಞಾನ ವಿಚಾರ ವೇದಿಕೆಯ ಜಿಲ್ಲಾ ಮತ್ತು ತಾಲೂಕು ಘಟಕದದ ಎಲ್ಲಾ ಪದಾದಿಕಾರಿಗಳು ಮತ್ತು ಪಟ್ಟಣದ ಮುಖಂಡರು ಭಾಗವಹಿಸಿದ್ದರು. 

    ನಂತರ ನೆರೆದ ಪ್ರೇಕ್ಷಕರಿಗೆ 'ವೀರಸಂಗೊಳ್ಳಿ ರಾಯಣ್ಣ ಎಂಬ ಸುಂದರ ಪೌರಾಣಿಕನಾಟಕವನ್ನು ಅಭಿನಯಸುವುದರ ಮೂಲಕ ಮತ್ತು ಕವಿಕುಂಚಗಾಯನ ಕಾರ್ಯಕ್ರಮ ಎಲ್ಲರನ್ನು ಮನರಂಜಿಸಿದರು.