ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿಸುವಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು

ಲೋಕದರ್ಶನ ವರದಿ

ಕಂಪ್ಲಿ 1:ನಿರಂತರ ಚಿಕಿತ್ಸೆಯೊಂದಿಗೆ ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿ ಮಾಡಲು ಪ್ರತಿಯೊಬ್ಬರು ಜಾಗೃತಿವಹಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಲ್ಲೇಶಪ್ಪ ಹೇಳಿದರು.

ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಬಳ್ಳಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷಯರೋಗ ತಡೆಗಟ್ಟಲು ಮುಂದಾಗಬೇಕು. ಕ್ಷಯರೋಗ ನಿಯಂತ್ರಿಸುವ ದೃಷ್ಠಿಯಿಂದ ಜ.2ರಿಂದ 12ರವರೆಗೆ ಹತ್ತು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ಷಯರೋಗ ಪತ್ತೆ, ಚಿಕಿತ್ಸೆ ಆಂದೋಲ ಹಮ್ಮಿಕೊಳ್ಳಲಾಗಿದೆ. ಕಂಪ್ಲಿ ತಾಲ್ಲೂಕಿನಲ್ಲಿ ಕೂಡ ಕ್ಷಯರೋಗ ಪತ್ತೆ, ಚಿಕಿತ್ಸೆ ಆಂದೋಲನ ಮಾಡಲಾಗುವುದು. ಕೆಮ್ಮು, ಜ್ವರ, ಬೆವರುವಿಕೆ, ಕಫದ ಲಕ್ಷಣಗಳು ಕಂಡು ಬಂದಲ್ಲಿ ರೋಗಿಗಳು ಕೂಡಲೇ ಚಿಕಿತ್ಸೆ ಪಡೆಯಬೇಕು. ಕ್ಷಯರೋಗ ಮುಕ್ತಕ್ಕೆ ಕೈಜೋಡಿಸಬೇಕು ಎಂದರು.

ಸಮುದಾಯ ಆರೋಗ್ಯ ಕೇಂದ್ರದಿಂದ ಆರಂಭಗೊಂಡ ಜಾಥಾ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಪುನಹ ಆರೋಗ್ಯ ಕೇಂದ್ರದಲ್ಲಿ ಸಮಾವೇಶಗೊಂಡಿತು.

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಹಿರಿಯ ಆರೋಗ್ಯ ಸಹಾಯಕಿ ಎನ್.ಉಮಾದೇವಿ, ಹಿರಿಯ ಆರೋಗ್ಯ ಸಹಾಯಕ ಚನ್ನಬಸುವ, ಕಿರಿಯ ಆರೋಗ್ಯ ಸಹಾಯಕ ಎ.ವಿರೇಶ್, ಎನ್ಸಿಡಿ ಸದಸ್ಯ ಡಿ.ಎಂ.ಮಹ್ಮದ್, ಆರ್ಕೆಎಸ್ಕೆ ಸದಸ್ಯ ಎಂ.ಕೆ.ಮಂಜುನಾಥ, ಆಶಾ ಕಾರ್ಯಕತರ್ೆಯರು ಸೇರಿ ಇತರರು ಇದ್ದರು.