ಲೋಕದರ್ಶನ ವರದಿ
ಬೈಲಹೊಂಗಲ 18: ಭಾರತೀಯ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಬಗ್ಗೆ ಅರಿತುಕೊಳ್ಳಬೇಕೆಂದು ಹಿರಿಯ ದೀವಾಣಿ ನ್ಯಾಯಾಧೀಶೆ ಕಾವೇರಿ ಕಲ್ಮಠ ಹೇಳಿದರು.
ಅವರು ಪಟ್ಟಣದ ಕೆಎಲ್ಇ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ತಾಂತ್ರಿಕ ಶಿಕ್ಷಣ ಮಂಡಳಿ ಬೆಂಗಳೂರು ಆಶ್ರಯದಲ್ಲಿ 9ನೇ ವಾಷರ್ಿಕ ಶಿಬಿರದಲ್ಲಿ ಏರ್ಪಡಿಸಿದ್ದ ಕಾನೂನು ತಿಳುವಳಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಕಾನೂನಿನ ಅರಿವು ಮುಖ್ಯವಾಗಿದೆ. ಎಲ್ಲ ಸಂದರ್ಭಗಳಲ್ಲಿಯೂ ಕಾನೂನಿನ ಪಾಲನೆಯೊಂದಿಗೆ ಕಾರ್ಯ ನಡೆಸುವುದು ಒಳಿತು. ಇದರಿಂದ ಯಾವುದೇ ಅಪರಾಧ ಅಥವಾ ಅವಘಡಗಳು ಸಂಭವಿಸುವುದಿಲ್ಲ ಎಂದರು.
ನ್ಯಾಯವಾದಿಗಳ ಸಂಘದ ಅಪರ ಕಾರ್ಯದರ್ಶಿ ಎಸ್.ಜೆ.ಬಾವಿ ಉಪನ್ಯಾಸ ನೀಡಿ, ಸಮಸ್ಯೆಗಳಿಗೆ ಕಾನೂನಿನ ಮೂಲಕ ಪರಿಹಾರದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಹಾಯಕ ಸರಕಾರಿ ಅಭಿಯೋಜಕಿ ರಂಜನಾ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಲ್ಮೇಟ್ ಧರಿಸುವುದರ ಮಹತ್ವ ಮತ್ತು ಮಹಿಳೆಯರ ಸಂರಕ್ಷಣೆಯ ಕಾನೂನಿನ ಬಗ್ಗೆ ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಗಂಗಾಧರಯ್ಯಾ ಸಾಲಿಮಠ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಆರ್.ಜಿ.ಪಟ್ಟಣಶೆಟ್ಟಿ ಮಾತನಾಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೇಳವಂಕಿ, ಉಪಾಧ್ಯಕ್ಷ ಕೆ.ಎಸ್.ಕುಲಕರ್ಣಿ, ಆರ.ಎಸ್. ಕೋಲಕಾರ, ಎಸ್.ವಿ.ಸಿದ್ಧಮನಿ, ಡಿ.ಎಸ್.ದೊಡ್ಡಮನಿ, ಎಂ.ಎಸ್.ಬಂಕಾಪುರ, ಎಸ್.ಡಿ. ಬಡಿಗೇರ್, ಟಿ.ಬಿ.ತಳವಾರ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರಗಳು ಉಪಸ್ಥಿತರಿದ್ದರು. ಸಂತೋಷ್ ಶರಣಪ್ಪನವರು ಸ್ವಾಗತಿಸಿದರು. ಸ್ವಾತಿ ರಾಯನಗೌಡರ ವಂದಿಸಿದರು. ಪ್ರಸಾದ್ ಅರವಳ್ಳಿ ನಿರೂಪಿಸಿದರು.