500 ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮು ಕಟ್ಟಡಗಳ ಶಂಕುಸ್ಥಾಪನೆ



ಲೋಕದರ್ಶನ ವರದಿ

ಮುಂಡಗೋಡ 3: ಪಟ್ಟಣದ ಎಪಿಎಮ್ಸಿ ಪ್ರಾಂಗಣದಲ್ಲಿ ಗುರುವಾರ ಪ್ರಸಕ್ತ ಸಾಲಿನ ಡಬ್ಲು.ಆಯ್.ಎಫ್ 2014-15ರ ಯೋಜನೆಯಡಿ 1 ಕೋಟಿ ಮೊತ್ತದ 500 ಮೆಟ್ರಿಕ್ ಟನ್ ಸಾಮಥ್ರ್ಯದ ಎರಡು     ಗೋದಾಮು ಕಟ್ಟಡಗಳ ಶಂಕುಸ್ಥಾಪನೆಯನ್ನು ಶಾಸಕ ಶಿವರಾಮ ಹೆಬ್ಬಾರ ನೆರವೇರಿಸಿದರು.

   ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಮುಂಡಗೋಡದ ಎ.ಪಿ.ಎಮ್.ಸಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದ್ದು  ಈ ಭಾಗದ ರೈತರಿಗೆ ಅನುಕೂಲವಾಗಲಿದೆ  

   ಶೀಘ್ರದಲ್ಲಿಯೆ ತಾಲೂಕಿನ ರೈತರಿಗಾಗಿ 300 ಕೋಟಿ ವೆಚ್ಚದ 20 ಸಾವಿರ ಹೆಕ್ಟೇರ್ ಜಮೀನುಗಳ ನೀರಾವರಿ ಯೋಜನೆಗೆ ಶಿಲಾನ್ಯಾಸ ಮಾಡಲಾಗುವುದು. ಎಪಿಎಮ್ಸಿ ಸಮಿತಿಗಳಲ್ಲಿ ಕಾನೂನು ಬಹಳ ಬಿಗಿಯಾಗಿದ್ದು ಸಮಿತಿಯ ಅಧ್ಯಕ್ಷರು ಕಷ್ಟಪಟ್ಟು ಕೆಲಸ ಮಾಡಿದರೆ ಎರಡು ವರ್ಷಗಳಲ್ಲಿ ಒಂದು ಕ್ರಿಯಾ ಯೋಜನೆ ತರಬಹುದಾಗಿದೆ. ಸಮಿತಿಗೆ ಏನೂ ಅಧಿಕಾರವಿಲ್ಲದ ಸಮಿತಿ ಎಂದರೆ ಅದು ಎಪಿಎಮ್ಸಿ ಮಾತ್ರವಾಗಿದ್ದು. ಅಧ್ಯಕ್ಷನಾದವನು ಮನೆಯಲ್ಲಿಯೇ ಕುಳಿತುಕೊಂಡು ಕೆಲಸ ಮಾಡುತ್ತೇನೆಂಬ ಮನೋಭಾವನೆ ಇದ್ದರೆ 5 ವರ್ಷಗಳಲ್ಲಿ ಒಂದೂ ಕ್ರಿಯಾ ಯೋಜನೆ ತರಲು ಸಾಧ್ಯವಿಲ್ಲ. ಏಕೆಂದರೆ 14 ವರ್ಷಗಳ ಎಪಿಎಮ್.ಸಿ ಅಧ್ಯಕ್ಷನಾಗಿ ನನಗೆ ಅನುಭವವಿದೆ.  ಈ ಬಗ್ಗೆ ವಿಧಾನಸಭೆಯಲ್ಲಿ ಕಾನೂನು ಸಡಿಲಗೊಳಿಸುವ ತಿದ್ದುಪಡಿ ತರುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ.   ಜಿಲ್ಲೆಯ ಎಪಿಎಮ್ಸಿ ಸಾಲುಗಳಲ್ಲಿ ಕಾರವಾರ ಮತ್ತು ಮುಂಡಗೋಡ ಬಡ ಎಪಿಎಮ್ಸಿಗಳಾಗಿವೆ. ಇಲ್ಲಿ ವರಮಾನ ಕಡಿಮೆಯಾಗಲು ನಗರದ ಮಾರುಕಟ್ಟೆಗೆ ರೈತರು ಬಂದು ವ್ಯಾಪಾರ ಮಾಡದೇ ಇರುವುದು ಹಾಗೂ ಸಂಬಂಧಪಟ್ಟ ಆಥರ್ಿಕವಾಗಿ ಭದ್ರವಾಗಿರುವ ಸಂಸ್ಥೆಗಳು ಕಾಲಿಡದೇ ಇರುವುದು ಎಂದ ಅವರು ಇವತ್ತಿನ ಕಾಲಕ್ಕೆ ಬೇಕಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು. 

   ಎಪಿಎಮ್ಸಿ ಅಧ್ಯಕ್ಷ ದೇವು ಪಾಟೀಲ ಮಾತನಾಡಿ,  ಈ ಮೊದಲು 20 ವರ್ಷದಲ್ಲಿ ಕೇವಲ 50 ಲಕ್ಷ ಅನುದಾನ ಬರುತ್ತಿತ್ತು.  ಆದರೆ  ಶಾಸಕರ ಪರಿಶ್ರಮದಿಂದ  1 ಕೊಟಿ 80 ಲಕ್ಷ ಅನುದಾನ ಬಂದಿದೆ. ಈ ಅನುದಾನದಿಂದ 50 ಲಕ್ಷದ ಎರಡು ಗೋದಾಮು ಕಟ್ಟಡಗಳಿಗೆ ಮತ್ತು ಇನ್ನುಳಿದ ಅಭಿವೃದ್ಧಿಗಾಗಿ ಬಳಸಲಾಗುವುದು ಇದೆಲ್ಲ ತಾಲೂಕಿನ ರೈತರ ಸಹಕಾರದಿಂದ ಆಗಿದೆ ಎಂದರು. ಉಪಾಧ್ಯಕ್ಷ ಬಾಬಣ್ಣಾ ಕೋಣನಕೇರಿ. ಟಿಎಪಿಸಿಎಮ್ಎಸ್ನ ಅಧ್ಯಕ್ಷ ಪಿ.ಎಸ್. ಸಂಗೂರಮಠ, ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ, ಕೃಷ್ಣಾ ಹಿರೇಹಳ್ಳಿ, ಮಾತನಾಡಿದರು.  ಈ ಸಂದರ್ಬದಲ್ಲಿ ಎಪಿಎಮ್ಸಿ ಕಾರ್ಯದಶರ್ಿ ಬಿ.ಕೆ. ಲಕ್ಷಾಣಿ, ಜಿ.ಪಂ. ಸದಸ್ಯರಾದ ರವಿಗೌಡ ಪಾಟೀಲ, ಜಯಮ್ಮ ಹಿರೇಹಳ್ಳಿ, ತಾ.ಪಂ. ಸದಸ್ಯ ಜ್ಞಾನದೇವ ಗುಡಿಯಾಳ, ಪ.ಪಂ. ಮಾಜಿ ಅಧ್ಯಕ್ಷ ರಫೀಕ್ ಇನಾಂದಾರ, ಕೆ.ಆರ್. ಬಾಳೆಕಾಯಿ, ಮಂಜುನಾಥ ವೆಣೇಕರ ಎಪಿಎಮ್ಸಿ ಸದಸ್ಯರು ಉಪಸ್ಥಿತರಿದ್ದರು ರೋಟರಿ ಶಾಲೆಯ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು. ಪ್ರಕಾಶ ಪಟಗಾರ ಸ್ವಾಗತಿಸಿದರು.