ಪರಿಸರದ ಸಂರಕ್ಷಣೆ ವಸ್ತು ಪ್ರದರ್ಶನ ಪರಿಸರ ಸಂರಕ್ಷಣೆ ಬಗ್ಗೆ ಆಸಕ್ತಿ ಇದ್ದಾಗ ಸಂರಕ್ಷಣೆ ಸಾಧ್ಯ 11: ಯೇಸು

ಲೋಕದರ್ಶನ ವರದಿ

ಹೊಸಪೇಟೆ 11: ಡಾನ್ ಬಾಸ್ಕೊ ಸಂಸ್ಥೆಯಲ್ಲಿ ಟಿ.ಡಿ.ಹೆಚ್ ಯೋಜನೆಯ ವತಿಯಿಂದ ಉಚಿತವಾಗಿ ನಡೆಸಲಾಗುತ್ತಿರುವ ಸಂಜೆ ತರಗತಿ ಮಕ್ಕಳಿಂದ ಪರಿಸರದ ಸಂರಕ್ಷಣೆ ಕುರಿತು "ವಸ್ತು ಪ್ರದರ್ಶನ" ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಫಾ/ಯೇಸು" ನಾವು ಪರಿಸರದ ಉಳುವಿಗಾಗಿ ಹಲವಾರು ರೀತಿಯ ಕೆಲಸಗಳನ್ನು ಇಂದು ಮಾಡಬೇಕಿದೆ. ಏಕೆಂದರೆ  ಇಂದು ನಮ್ಮ ಪರಿಸರ ನಾಶವಾಗುತ್ತಿರುವುದಕ್ಕೆ ನಾವೇ ಕಾರಣಕರ್ತರಾಗಿದ್ದೇವೆ. ಹಾಗಾಗಿ ಮಕ್ಕಳಿಂದ ಪರಿಸರ ಸಂರಕ್ಷಣೆ ಬಗ್ಗೆ ವಸ್ತು ಪ್ರದರ್ಶನವನ್ನೇರ್ಪಡಿಸಿರುವುದು ಸ್ವಾಗತಾರ್ಹ. ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜ್ಷಾನ ಮೂಡಿದರ ಮುಂದಿನ ದಿನಗಳಲ್ಲಿ ಉತ್ತಮ ಪರಿಸರದಲ್ಲಿ ನಾವೆಲ್ಲರೂ ಸಹ ಜೀವನವನ್ನು ನಡೆಸಬಹುದು. ಕಾರಣ ನಮ್ಮ ಮರಿಸರ ಸಂರಕ್ಷಣೆ ಬಗ್ಗೆ ನಾವೇ ಸ್ವತ: ಆಸಕ್ತಿ ವಹಿಸಿಕೊಂಡು  ಪರಿಸರದ ಉಳುವುಗಾಗಿ ಆಸಕ್ತಿವಹಿಸಿಕೊಂಡು ಅದಕ್ಕೆ ತಕ್ಕ ರೀತಿಯಿಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಸರದ ಸಂರಕ್ಷಣೆ ಮಾಡಲು ಸಾಧ್ಯ ಎಂದು ತಿಳಿಸಿದರು.

ನಂತರ ಡಾನ್ ಬಾಸ್ಕೊ ಸಂಸ್ಥೆಯ ವತಿಯಿಂದ ಹೊಸಪೇಟೆಯ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ನಡೆಸಲಾಗುತ್ತಿರುವ ಸಂಜೆ ತರಗತಿ ಮಕ್ಕಳಿಂದ ತಯಾರಿಸ್ಪಟ್ಟ  ಸಾವಯವ ಗೊಬ್ಬರದಿಂದಾಗುವ ಉಪಯೋಗಗಳು, ಕಾಖರ್ಾನೆಗಳಿಂದ ಪರಿಸರಕ್ಕಾಗುವ ಹಾನಿಗಳು, ಜೀವಾಮೃತ ಹಾಗು ಪಂಚಾಮೃತದ ಉಪಯೋಗಗಳು ಹಾಗು ಇನ್ನಿತರ ವಸ್ತುಗಳ ಬಗ್ಗೆ ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರಿಗೆ ಮಾಹಿತಿಯನ್ನು ನೀಡುವುದರ ಮೂಲಕ ಪರಿಸರ ಸಂರಕ್ಷಣೆ ಕುರಿತು ಜಾಗೃತಿಯನ್ನು ಮೂಡಿಸಿದರು.

ವಸ್ತು ಪ್ರದರ್ಶನದಲ್ಲಿ ರಾಜಾಪುರ, ಕಣಿವೇರಾಯನ ಗುಡಿ ಸಂಜೆ ತರಗತಿ ಮಕ್ಕಳಿಗೆ ಪ್ರಥಮ, ಕಾರಿಗ್ನೂರ್ ಸಂಜೆ ತರಗತಿ ಮಕ್ಕಳಿಗೆ ದ್ವಿತೀಯ ಹಾಗು ಉಕ್ಕಡಕೇರಿ ಸಂಜೆ ತರಗತಿ  ಮಕಳಿಗೆ ತೃತೀಯ ಬಹುಮಾನಗಳನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 16 ಸಂಜೆ ತರಗತಿಗಳಿಂದ 132 ಮಕ್ಕಳು ತಾವು ತಯಾರಿಸಿದ ವಸ್ತುಗಳನ್ನು ಪ್ರದಶರ್ಿಸಿದರು.