ಹಸಿರು ಪರಿಸರವನ್ನು ನಿಮರ್ಿಸಿ ಪರಿಸರ ಜಾಗೃತಿ ಕಾರ್ಯಕ್ರಮ


ಲೋಕದರ್ಶನ ವರದಿ

ಗದಗ 01: ಇಲ್ಲಿನ ಎಸ್.ಎಂ.ಕೃಷ್ಣ ನಗರದಲ್ಲಿರುವ ಹೈಟೆಕ್ ಉದ್ಯಾನವನದಲ್ಲಿ ಅಗಸ್ಟ 15 ರೊಳಗಾಗಿ 200 ಸಸಿಗಳನ್ನು ನೆಡುವ ಮುಖಾಂತರ ವಾರ್ಡ 1ರಲ್ಲಿ ಹಸಿರು ಪರಿಸರವನ್ನು ನಿಮರ್ಿಸಿ ಪರಿಸರ ಜಾಗೃತಿಯನ್ನು ನಡೆಸಲಾಗುವದು ಎಂದು ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಪ್ರಕಾಶ ಬಾಕಳೆ ಹೇಳಿದರು. 

ಅವರು ಬುಧವಾರ ವಾರ್ಡ ನಂ 1ಕ್ಕೆ ತಕ್ಷಣ ಭೇಟಿ ನೀಡಿ ಅಲ್ಲಿನ ನಾಗರಿಕರ ಸಮಸ್ಯೆಗಳನ್ನು ಪರಿಶೀಲಿಸಿ ಮಾತನಾಡಿದರು. 

ವಾರ್ಡನಲ್ಲಿ ಬಾಕಿ ಉಳಿದ ಕಾಮಗಾರಿಗಳಿಗೆ ತಕ್ಷಣವೇ ಚಾಲನೆ ನೀಡಲಾಗುವದು. 15 ವರ್ಷಗಳಿಂದ ಪ್ರಗತಿ ಕಾಣದ ಹೈಟೆಕ್ ಉದ್ಯಾನವನಕ್ಕೆ ಒತ್ತು ನೀಡಲಾಗುವದು. ಅಗಸ್ಟ ಮಾಹೆಯಲ್ಲಿ ಇಲ್ಲಿ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಿಸೋಣ. 24/7 ನೀರಿನ ಯೋಜನೆ ಪೂರ್ಣಗೊಳಿಸಲಾಗುವದು. ವಾರ್ಡಗೆ ಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವದು ಎಂದರು. 

ವಾಡರ್ಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಪಾದಚಾರಿಗಳಿಗೆ ಸಂಚರಿಸಲು ಅನುಕೂಲವಾಗದ  ಕಚ್ಚಾ ರಸ್ತೆಗಳಲ್ಲಿ 25 ಲಕ್ಷರೂ ಮೊತ್ತದಲ್ಲಿ ಮೋರಮ್ ಹಾಕಲಾಗುವದು. ವಾರ್ಡ ಅಭಿವೃದ್ದಿಗೆ ಬೇಕಾದ ಕ್ರೀಯಾ ಯೋಜನೆಯನ್ನು ತಯಾರಿಸಲು ನಗರಸಭೆ ಸದಸ್ಯರಿಗೆ ಸೂಚಿಸಿದರು. ಮಂಗಳವಾರ 33 ವಾರ್ಡ ಭೇಟಿ ನೀಡಿದ ಸಂದರ್ಭದಲ್ಲಿ 1 ನೇ ವಾರ್ಡ ಜನತೆ ಸಂಪಕರ್ಿಸಿದ ಬೆನ್ನಲ್ಲೇ ಈ ಭೆೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ನನ್ನ ಆಡಳಿತ ಅವಧಿಯಲ್ಲಿ ನಗರದ ಸಮಗ್ರ ಅಬಿವೃದ್ಧಿಗೆ ಆದ್ಯತೆ ನೀಡಲಾಗುವದು ಎಂದು ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಪ್ರಕಾಶ ಬಾಕಳೆ ಭರವಸೆ ನೀಡಿದರು. ನಗರಸಭೆ ಸದಸ್ಯೆ ಅಮೃತಾ ಪಾಟೀಲ್, ಬಸವರಾಜ ಕಡೇಮನಿ, ರಾಜು ತಾರನಾಳ, ಮುತ್ತಣ್ಣ ಚಿಕ್ಕನಗೌಡ್ರ, ಶಿವಪ್ಪ ವಾಲಿ, ಅನೀಲ ಸಿದ್ದಮ್ಮನಹಳ್ಳಿ, ಸಂತೋಷ ಬೆಳದಡಿ ಸೇರಿದಂತೆ ನಾಗರಿಕರು ಹಾಜರಿದ್ದರು.