ಲೋಕದರ್ಶನ ವರದಿ
ಗಂಗಾವತಿ 30: ಇಂಗ್ಲಿಷ್ ತುಟಿಯಲ್ಲಾಡುವ ಭಾಷೆಯಾದರೆ, ಕನ್ನಡ ಹೃದಯದಿಂದ ಆಡುವ ಭಾಷೆ. ಕನ್ನಡ ಸಾಹಿತ್ಯವನ್ನ ಅರಿತವರ ಮಾತಿನ ಗತ್ತೇ ಬೇರೆ. ಸಾಹಿತ್ಯದ ಗಂಧಗಾಳೀ ಇಲ್ಲದವರ ಮಾತು ಸಹಜವಾಗಿಯೇ ಕೃತಕ ಎಣಿಸಿಕೊಳ್ಳುತ್ತವೆ. ಹಿಗೆಂದವರು ಗಂಗಾವತಿ ತಾಲೂಕಾ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷ ಗಂಗಾವತಿ ಪ್ರಾಣೇಶ್ ಅವರು.
ನಗರದ ಸಕರ್ಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಿಮರ್ಿಸಿದ ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನದ ಮೊದಲದಿನದ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ನುಡಿಯಲ್ಲಿ ಅವರು ಮಾತನಾಡಿದರು.
ಗಂಗಾವತಿ ಜನತೆ ಸಾಹಿತ್ಯಾಸಕ್ತರು. 78 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಂಗಾವತಿಯಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿಸಿದ ಕೀತರ್ಿ ಈ ತಾಲೂಕಿನ ಜನತೆಗೆ ಸೇರಿದ್ದು, ಬೇರೆ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದರೆ, ಅಲ್ಲಿ ಕೇವಲ 1000ದಿಂದ 1500 ಜನ ಸೇರಬಹುದು. ಆದರೆ ಇಲ್ಲಿ ನೋಡಿದರೆ, ನಮ್ಮ ಗಂಗಾವತಿಯಲ್ಲಿನ ಜನತೆಗೆ ಇನ್ನೂ ಸಾಹಿತ್ಯದ ಹಸಿವು ಕಡಿಮೆಯಾಗಿಲ್ಲ ಎನ್ನುವುದು ನನ್ನ ನಂಬಿಕೆ. ಕೋಶ ಓದಬೇಕು, ದೇಶ ಸುತ್ತಬೇಕು. ಜಗತ್ತಿನಲ್ಲಿಯೇ ಶ್ರೀಮಂತ ಭಾಷೆಯಾದ ಕನ್ನಡವನ್ನ, ಕನ್ನಡತನವನ್ನ ಈಗಿನ ಪೀಳಿಗೆ ಇಂಗ್ಲಿಷ್ ವ್ಯಾಮೋಹಕ್ಕೆ ಬೀಳುತ್ತಿರುವುದು ವಿಷಾಧನೀಯ. ಇಂಗ್ಲಿಷ್ ಈಗಿನ ಪೀಳಿಗೆಗೆ ನೌಕರಿ ಕೊಡಿಸಬಹುದು. ಆದರೆ ನಮ್ಮ ಕನ್ನಡ ನಮಗೆ ಬದುಕು ಕಲಿಸಿಕೊಡುತ್ತದೆ. ಬೆಂಗಳೂರಿನಂತ ರಾಜಧಾನಿಯಲ್ಲಿ ಕನ್ನಡ ಮಾಯವಾಗಿ ಇಂಗ್ಲಿಷ್ ಬೆಳೆಯುತ್ತಿದೆ. ಅದಕ್ಕೆ ಕಾರಣವನ್ನ ನಾವು ಇನ್ನೊಬ್ಬರ ಮೇಲೆ ಹೇರದೇ ನಮ್ಮ ಭಾಷೆಯ ಬಗ್ಗೆ ನಾವು ನೀವು ಹೀಗೆ ಎಲ್ಲ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಂಡರೆ ನಾವು ಬೇರೆಯವರತ್ತ ಬೆರಳು ಮಾಡುವ ಸ್ಥಿತಿ ಬರಲು ಸಾಧ್ಯವೇ ಇಲ್ಲ ಎಂದರು.
ಸಮ್ಮೇಳ ಉದ್ಘಾಟಿಸಿ ಮಾತನಾಡಿದ ವಿಶ್ವವಾಣಿ ಪತ್ರಿಕೆಯ ಹಿರಿಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಮಾತನಾಡಿ, ಭಾರತದಲ್ಲಿ ಹುಟ್ಟಿ ಬೆಳೆದು ಜಗತ್ತಿನಲ್ಲಿಯೇ ಗುರುತಿಸಿಕೊಂಡ ಸರ್. ಎಂ. ವಿಶ್ವೇಶ್ವರಯ್ಯ, ವಿಜ್ಞಾನಿ ಎನ್.ಆರ್. ರಾವ್, ಇನ್ಪೋಸಿಸ್ನ ನಾರಾಯಣಸ್ವಾಮಿ, ಈ ದೇಶದ ರಾಷ್ಟ್ರಪತಿ ಹುದ್ದೆಗೇರಿದ ಕ್ಷಿಪಣಿ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯಾರೂ ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರಲ್ಲ ಅವರೆಲ್ಲ, ತಮ್ಮ ಮಾತೃಭಾಷೆಯಲ್ಲಿಯೇ ವ್ಯಾಸಂಗ ಮಾಡಿದವರು. ಆದರೂ ಅವರು ಇಂದು ಜಗತ್ತು ಗುರುತಿಸುವ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಅದಕ್ಕೆ ಕಾರಣ ಇಂಗ್ಲಿಷ್ ಅಲ್ಲ. ಬದಲಾಗಿ ಅವರು ತಮ್ಮ ಮಾತೃಭಾಷೆಯಲ್ಲಿ ಕಲಿತ ಗಟ್ಟಿತನವೇ ಸಾಕ್ಷಿ ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಅಂಗಡಿ ಆಶಯನುಡಿಗಳನ್ನಾಡಿದರು.ಶಾಸಕ ಪರಣ್ಣ ಮನವಳ್ಳಿ ದಿಕ್ಸೂಚಿ ನುಡಿಗಳನ್ನಾಡಿದರು. ತಾಲೂಕು ಕಸಾಪದ ನಿಕಟಪೂರ್ವ ಅಧ್ಯಕ್ಷರಾದ ಲಿಂಗಾರೆಡ್ಡಿ ಆಲೂರ ಸೇರಿದಂತೆ ತಾಲೂಕಿನ ಎಲ್ಲ ರಾಜಕೀಯ ಜನಪ್ರತಿನಿಧಿಗಳು, ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು, ತಾಲೂಕಿನಾದ್ಯಂತ ಆಗಮಿಸಿದ್ದ ಸಾಹಿತಾಸಕ್ತರು, ಸಾಹಿತ್ಯ ಪ್ರೇಮಿಗಳು ಕವಿಗಳು ಮೊದಲಾದವರು ವೇದಿಕೆಯ ಮೇಲಿದ್ದರು.
ಸಮ್ಮೇಳನದ ಸವರ್ಾಧ್ಯಕ್ಷರ ಮೆರವಣಿಗೆ ಎಪಿಎಂಸಿ ಯಾಡರ್್ನಲ್ಲಿನ ಚನ್ನಬಸವಸ್ವಾಮಿ ದೇವಸ್ಥಾನದಿಂದ ಚನ್ನಬಸವಸ್ವಾಮಿ ವೃತ್ತ, ಮೇದಾರ ಕೇತಯ್ಯ ವೃತ್ತ, ಮಹಾವೀರ ವೃತ್ತ, ಗಾಂಧಿ ವೃತ್ತ, ಬಸವಣ್ಣ ವೃತ್ತ, ವಾಸವಿ ವೃತ್ತ, ಅಂಬೇಡ್ಕರ್ ವೃತ್ತ, ಬಾಬು ಜಗಜೀವನರಾಮ್ ವೃತ್ತ, ಕೃಷ್ಣ ದೇವರಾಯ ವೃತ್ತ ಮೂಲ ಮೆರವಣಿಗೆ ವೇದಿಕೆಗೆ ಆಗಮಿಸಿತು. ಮೇರವಣಿಗೆಯಲ್ಲಿ ತಾಲೂಕಿನ ಎಲ್ಲ ಜನಪದ ಕಲಾ ತಂಡಗಳು, ಶಾಲಾ ಮಕ್ಕಳು ಸೇರಿದಂತೆ 101 ಪೂರ್ಣ ಕುಂಬದ ಮೂಲಕ ಮೆರವಣಿಗೆ ಅದ್ದೂರಿಯಾಗಿ ಸಾಗಿತ್ತು.