ಲೋಕದರ್ಶನವರದಿ
ಶಿಗ್ಗಾವಿ04: ರಾಜ್ಯದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ ಪಿಂಚಣಿ ಮತ್ತು ಇತರೇ ಸೌಲಭ್ಯಗಳನ್ನು 2017 ರಲ್ಲಿ ಸಮಿತಿ ಸಕಾರಕ್ಕೆ ಸಲ್ಲಿಸಿರುವ ವರದಿಯ ಸೂಚನೆಯಂತೆ ಜಾರಿಗೊಳಿಸಬೇಕು ಎಂದು ಕನರ್ಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತಾಲೂಕ ಅಧ್ಯಕ್ಷ ಶಿವಾನಂದ ಕಮಡೊಳ್ಳಿ ನೇತೃತ್ವದಲ್ಲಿ ಸಂಘದ ನೌಕರರು ತಹಶೀಲ್ದಾರ ಚಂದ್ರಶೇಖರ ಗಾಳಿ ಅವರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸಂಘ ಪ್ರಾರಂಭವಾಗಿ 115 ವರ್ಷ ಕಳೆದಿದ್ದರೂ ಯಾವೂದೇ ರೀತಿಯ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಸೌಲಭ್ಯಗಳನ್ನು ಈ ವರೆಗೂ ಬಂದಿರುವ ಯಾವುದೇ ಸಕರ್ಾರ ನಿಗದಿ ಪಡಿಸಿ ಜಾರಿಗೊಳಿಸಿಲ್ಲ.
ರೈತರಿಗೆ ಸಕರ್ಾರದ ಯೋಜನೆಗಳು, ಬಿತ್ತನೇ ಬೀಜ, ಗೊಬ್ಬರ, ಸಾಲಮನ್ನಾದಂತಹ ಕೆಲಸಗಳನ್ನು ಹಗಲು ರಾತ್ರಿಯನ್ನದೇ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೌಲಭ್ಯಗಳನ್ನು ನೀಡದಿರುವದರಿಂದ ಜೀವನ ನಡೆಸಲು ವಂಚಿತರಾಗಿರುತ್ತಾರೆ. ಈ ಬಗ್ಗೆ ಕಳೆದ 25 ವರ್ಷಗಳಿಂದಲೂ ಸಂಘಟನೆ ಮೂಲಕ ಹೋರಾಟ ಮಾಡುತ್ತಿದ್ದರೂ ಯಾವುದೇ ಸಕರ್ಾರ ಈ ಬಗ್ಗೆ ಕ್ರಮ ಕೈಗೊಂಡು ಬೇಡಿಕೆ ಈಡೇರಿಸಿಲ್ಲ.
ಸಹಕಾರ ಸಚಿವರು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನೌಕರರ ಬೇಡಿಕೆಗಳನ್ನು ಜಾರಿಗೆ ತರಲು ಒತ್ತಾಯದ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಸರಕಾರ ಸಚಿವರು ಸಹಕಾರ ಇಲಾಖೆಯ ಅದಿಕಾರಿಗಳ ವರದಿಯಲ್ಲಿ ಸೂಚಿಸಿರುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೌಕರರಿಗೆ ಮಾತ್ರ ಅನ್ವಯವಾಗುವಂತೆ ಸಹಕಾರ ಕಾಯ್ದೆ 1959ಕ್ಕೆ ಹೊಸ ಸೇರ್ಪಡೆಗೆ 98ಇಎ,98ಇಬಿ,98ಇಸಿ ಯನ್ನು ಬರುವ ವಿಧಾನ ಸಭೆಯಲ್ಲಿ ಮಂಡಿಸಿ ತಿದ್ದುಪಡಿ ತಂದು ಈ ನೌಕರರ ಬೇಡಿಕೆ ಜಾರಿಗೆ ಕೊಡಿಸಿ ನೌಕರರು ನೆಮ್ಮದಿಯಿಂದ ಜೀವನ ನಡೆಸಿ ಸಂಘಗಳ ಮೂಲಕ ರೈತರ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಅನೆಕಬಾರಿ ಕೋರಿದ್ದರು. ಈವರೆಗೂ ಈ ಬಗ್ಗೆ ಸರಕಾರದ ಯಾವುದೇ ಕ್ರಮ ಕಂಡುಬರುತ್ತಿಲ್ಲಾ. ತಪ್ಪಿದಲ್ಲಿ ಇದೆ 2019ನೇ ಮುಂಬರುವ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೌಕರರ ಜಾತಾ ಹಾಗೂ ರಾಜ್ಯಾದ್ಯಂತ ಸಂಘಗಳ ಕೆಲಸ ಕಾರ್ಯ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಸಂಘಟನೆ ಮೂಲಕ ನೌಕರರ ಮುಷ್ಕರ ನಡೆಸಲಾಗುವದು ಎಂದು ಮನವಿಯಲ್ಲಿ ಸಕರ್ಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ ಕೆ.ಸಿ.ಸಿ.ಬ್ಯಾಂಕ್ ನಿದರ್ೇಶಕ ಗಂಗಣ್ಣ ಸಾತಣ್ಣವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಜಿಲ್ಲಾ ಉಪಾಧ್ಯಕ್ಷ ಎನ್.ಸಿ.ಸಿದ್ದಣ್ಣನವರ, ತಾಲೂಕ ಕಾರ್ಯದಶರ್ಿ ಈರಣ್ಣ ಗಡೆಣ್ಣವರ, ಯಲ್ಲಪ್ಪ ಹಂಚಿನಮನಿ, ಈರಣ್ಣ ಸುರಪಗಟ್ಟಿ, ಪಕ್ಕಿರಪ್ಪ ಹಾನಗಲ್, ಸುಮಾ ಬೆಂಗೇರಿ, ಎಸ್.ಎಸ್.ಹಿರೇಮಠ, ರಾಜು ಶಿಗ್ಗಟ್ಟಿ, ರವಿ ಕಳ್ಳಿಮನಿ, ಜಿ.ಎಸ್.ಹಿರೇಮಠ ಹಾಗು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯ ನಿವರ್ಾಹಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.