ಕಾಗವಾಡ 12: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿಯ ಕಬ್ಬಿನ ಗದ್ದೆಗೆ ವಿದ್ಯುತ್ ಶಾಟರ್್ಸಕರ್ಿಟ್ನಿಂದ ಬೆಂಕಿ ತಗುಲಿ 40 ಎಕರ ಕ್ಷೇತ್ರದಲ್ಲಿಯ ಸುಮಾರು 40 ಲಕ್ಷ ಮೌಲ್ಯದ ಕಬ್ಬು ಅಗ್ನಿಗೆ ಆಹುತಿಯಾಗಿರುವ ಘಟಣೆ ಸಂಭವಿಸಿದೆ.
ಸೋಮವಾರ ಸಂಜೆ ಉಗಾರ ಬುದ್ರುಕ ಗ್ರಾಮದ ಪ್ರವೀಣ ಹೋಸುರೆ ರೈತನ ಕಬ್ಬಿನ ಗದ್ದೆಯಲ್ಲಿಯ ಟ್ಯಾನ್ಸಫರ್ಮರ್ ಶಾಟರ್್ಸಕರ್ಿಟ್ದಿಂದ ಅಗ್ನಿ ಸ್ಪರ್ಶವಾಯಿತು. ಅದರ ಪಕ್ಕದಲ್ಲಿರುವ ಕುಮಾರ ನಿಡಗುಂದೆ ಇವರ 7 ಎಕರ, ರಾಹುಲ ಶಹಾ, ವಿವೇಕ ಶಹಾ 22 ಎಕರ, ದೀಪಚಂದ ಶಹಾ 5 ಎಕರ, ಮನಿಷ ಶಹಾ ಹೀಗೆ 40 ಎಕರ ಕ್ಷೇತ್ರ ಅಗ್ನಿಗೆ ಆಹುತಿಯಾಗಿದೆ.
ಘಟನಾ ಸ್ಥಳಕ್ಕೆ ಹೆಸ್ಕಾಂ ಇಲಾಖೆಯ ಅಧಿಕಾರಿ ಎ.ಬಿ.ರಾಠೋಡ್, ಕಂದಾಯ ನಿದರ್ೇಶಕ ಬಿ.ಬಿ.ಬೋರಗಲ, ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿನೀಡಿ ಪಂಚನಾಮೆ ಮಾಡಿದ್ದಾರೆ.
ಸಂಪೂರ್ಣ ವರ್ಷ ಕಬ್ಬು ಬೆಳೆ ಬೆಳೆಸಲು ಶ್ರಮಿಸಿದ ರೈತರ ಕಣ್ಣು ಮುಂದೆ ಕಬ್ಬು ಅಗ್ನಿಯಲ್ಲಿ ಆಹುತಿಯಾಗಿತ್ತಿರುವದನ್ನು ಕಂಡು ಕಣ್ಣೀರಿಟ್ಟರು. ಹೆಸ್ಕಾಂ ಇಲಾಖೆ ಮುಖ್ಯ ಅಧಿಕಾರಿಗಳು ಗಮನ ಹರಿಸಿ ರೈತರಿಗೆ ಆಗಿರುವ ಹಾನಿ ಭರಿಸಬೇಕೆಂದು ರೈತರ ಅಪೇಕ್ಷೆಯಾಗಿದೆ.