ಮೂಡಲಗಿ 03: ಕಳೆದ ನಾಲ್ಕು ಚುನಾವಣೆಯಲ್ಲಿ ಜಮೀನು ಒತ್ತೆಯಿಟ್ಟು ಸ್ಪಧರ್ಿಸಿದ್ದೇನೆ. ಹಣ ಗಳಿಸುವುದಕ್ಕಾಗಿ ಚುನಾವಣೆ ಸ್ಪಧರ್ಿಸಿಲ್ಲ ಎಂದು ಅರಭಾಂವಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯಥರ್ಿ ಅರವಿಂದ ದಳವಾಯಿ ಹೇಳಿದರು.
ಅವರು ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ನ ರಮೇಶ ಉಟಗಿ, ಲಕ್ಕಣ್ಣ ಸವಸುದ್ದಿ ಮತ್ತು ಭರಮಣ್ಣ ಉಪ್ಪಾರ ಇತ್ತಿಚಿಗೆ ನನ್ನ ವಿರುದ್ಧ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥರ್ಿಯಾಗಿ ಸ್ಪಧರ್ಿಸುವ ಮೂಲಕ ಹಣ ಸಂಪಾದಿಸಿದ್ದೆನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಅನುಭವದಿಂದ ಹೇಳುವುದಾದರೆ ಚುನಾವಣೆಗೆ ಸ್ಪಧರ್ಿಸುವ ಅಭ್ಯಥರ್ಿಗಳು ಹಣ ಕಳೆದು ಕೊಳ್ಳುತ್ತಾರೆ ವಿನಃ ಹಣ ಗಳಿಸುವುದು ದೂರದ ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ರಮೇಶ ಉಟಗಿ ಹಾಗೂ ಅವರ ಚೇಲಾಗಳು ಕಳೆದ ಚುನಾವಣೆಯಲ್ಲಿ ನಾನು ಯಾವ ರೀತಿಯಲ್ಲಿ ಮತ್ತು ಎಷ್ಟು ಹಣಗಳಿಸಿದ್ದೆನೆಂದು ಜನರ ಮುಂದೆ ಪ್ರಕಟಿಸಬೇಕು ಇಲ್ಲವಾದಲ್ಲಿ ಸಾರ್ವಜನಿಕರ ಮುಂದೆ ನನ್ನಲ್ಲಿ ಕ್ಷಮೆಯಾಚಿಸಬೇಕು.
ನಾನು ಅಧಿಕಾರದ ಆಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೆನೆ ಎಂದು ಆರೋಪಿಸಿದ್ದಾರೆ. ಆದರೆ ಕೆಎಎಸ್ ಅಧಿಕಾರಿಯಾಗಿದ್ದ ನಾನು ಪ್ರತಿಷ್ಠಿತ ಹುದ್ದೆ, ಸ್ಥಾನಮಾನ, ಐಷರಾಮಿ ಸೌಲಭ್ಯಗಳನ್ನು ತ್ಯಜಿಸಿ ಸಾರ್ವಜನಿಕ ಸೇವೆಗೆ ಬಂದಿದ್ದೆನೆಂದು ರಾಜ್ಯದ ಜನತೆಗೆ ತಿಳಿದಿದೆ. ಕೆಲ ರಾಜಕೀಯ ಪಕ್ಷಗಳು ಅಹ್ವಾನ ನೀಡಿದ್ದರು ಸಾತ್ವಿಕ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೆನೆ. ಕಾಂಗ್ರೆಸ್ ಪಕ್ಷ ರಮೇಶ ಉಟಗಿ ಮತ್ತು ಅವರೊಂದಿಗಿರುವವರ ಸ್ವಂತ ಆಸ್ತಿಯಲ್ಲ. ಸಮಾಜವಾದಿ ತತ್ವಗಳಲ್ಲಿ ನಂಬಿಕೆಯಿರುವ ಯಾರಾದರೂ ಕಾಂಗ್ರೆಸ್ ಪಕ್ಷ ಸೇರಬಹುದಾಗಿದೆ. ಅರಭಾಂವಿ ಕ್ಷೇತ್ರದ ಬಹುತೇಕ ಕಾಂಗ್ರೆಸ್ ಪದಾಧಿಕಾರಿಗಳು ಬಿಜೆಪಿಯ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರಿಗೆ ತಿಳಿಸಿ ಶೀಘ್ರವೇ ಕ್ರಮ ಜರುಗಿಸುವಂತೆ ಆಗ್ರಹಿಸುತ್ತೇನೆ ಎಂದರು.
ರಮೇಶ ಉಟಗಿ ಮತ್ತು ಅವರ ಜೊತೆಗಾರರು ಮತ್ಸರ ಮತ್ತು ಹೊಟ್ಟೆ ಕಿಚ್ಚಿನಿಂದಾಗಿ ಇಂತಹ ಆರೋಪ ಮಾಡುತ್ತಿದ್ದಾರೆ. ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಗುಂಡಪ್ಪ ಕಮತೆ, ಸೈಯ್ಯದ ಫೀರಜಾದೆ, ಬಸಗೌಡ ಪಾಟೀಲ, ಗುರಪ್ಪ ಹಿಟ್ಟಣಗಿ, ದುಂಡಪ್ಪ ಬಡಿಗೇರ, ಲಕ್ಷ್ಮಣ ಕೋಳಿ, ಮಾಯಪ್ಪ ರಾಜಾಪೂರ, ತಮ್ಮಣ್ಣ ಕೋಳಿಗುಡ್ಡ, ಜಗದೀಶ ಜೋಗಣ್ಣವರ, ಸಿದ್ಧಾರೂಡ ಸನದಿ ಉಪಸ್ಥಿತರಿದ್ದರು.