ಲೋಕದರ್ಶನವರದಿ
ಮುಧೋಳ:ಶಿಕ್ಷಣ ಮತ್ತು ನೈತಿಕ ಶಿಕ್ಷಣಗಳೆರಡು ಬೆಸೆದಾಗ ಮಾತ್ರ ಜೀವನ ಕ್ರಮ ಶ್ರೇಷ್ಠವಾಗಲು ಸಾಧ್ಯ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅಭಿಪ್ರಾಯ ಪಟ್ಟರು.
ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ತತ್ವದರ್ಶನ 14ನೇ ಮಾಸಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾಥರ್ಿಗಳ ಬದುಕು ಆತ್ಮಸ್ಥರ್ಯದಿಂದ ಕೂಡಿರಬೇಕು ಶಿಕ್ಷಣ ಕೇವಲ ಉಪಜೀವನಕ್ಕಾಗಿ ಅಲ್ಲ, ಶಿಕ್ಷಣ ಸಮಾಜದ ಸಂಪತ್ತು ಎಂದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಶಶಾಂಕ ಕೆಸರಗೊಪ್ಪ, ರಾಮು ಕೌಜಲಗಿ, ಭೀಮು ಕೌಜಲಿಗಿ ಅವರನು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶಾಮಲಾ ಲಕ್ಷ್ಮೇಶ್ವರ ಶಾಲು, ಮಾಲೆ, ಹಣ್ಣು, ಪಂಡಿತ ಪುಟ್ಟರಾಜ ಶ್ರೀಗಳ ಭಾವಚಿತ್ರ ನೀಡಿ ಗೌರವಹಿಸಿದರು. ತುಕಾರಾಮ ಮಹಾರಾಜ ಮಾತನಾಡಿ ಪರನಂದೆ ಪಾಪಸಂಗ್ರಹಕ್ಕೆ ಕಾರಣವಾಗುತ್ತದೆ ಎಂದರು. ಶಿರೋಳದ ವೆಂಕಣ್ಣ ಪಡತಾರೆ ನೇತೃತ್ವ ವಹಿಸಿದರು. ರಮೇಶ ಕುಂಬಾರ ಉಪಸ್ಥಿತರಿದ್ದರು. ಎಲ್.ಶ್ರೀನಿವಾಸ ಪ್ರಸಾದ ಪ್ರಾಥರ್ಿಸಿದರು, ಗುರುಪ್ರಸಾದ ವಂದಿಸಿದರು.