ಸಂಸ್ಕಾರಗಳಲ್ಲಿ ಶಿಕ್ಷಣ ಸಂಸ್ಕಾರವು ಶ್ರೇಷ್ಠವಾದದ್ದು: ಡಾ.ಗುರುದೇವಿ

ಬೆಳಗಾವಿ, 1: ನಾವು ತಾಯಿಯ ಗರ್ಭದಿಂದ ಹೊರಗೆ ಬಂದು ಭೂಮಿಯ ಗರ್ಭವನ್ನು ಸೇರುವವರಗೆ ಹೊಂದುವ ಅನೇಕ ಸಂಸ್ಕಾರಗಳಲ್ಲಿ ಶಿಕ್ಷಣ ಸಂಸ್ಕಾರವು ಶ್ರೇಷ್ಠವಾದದ್ದು ಎಂದು ಸಾಹಿತಿ ಡಾ.ಗುರುದೇವಿ ಹುಲೆಪ್ಪಮವರಮಠ ಹೇಳಿದರು.

  ನಗರದ ಶಿವಬಸವನಗರ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಮಂಗಳವಾರ 01 ರಂದು ಆಯೋಜಿಸಲಾಗಿದ್ದ,  30  ಸಾಧಕ ಶಿಕ್ಷಕರಿಗೆ ಸನ್ಮಾನ, ಶಾಲಾ ವಿದ್ಯಾಥರ್ಿಗಳಿಗೆ ಸಾಮಗ್ರಿ ವಿತರಣೆ ಹಾಗೂ ಗುರು ವಂಧನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂತಹ ಅಪೂರ್ವ ಸಂಸ್ಕಾರವನ್ನು  ನೀಡಿ ನಾಡಿನ ಸತ್ಪ್ರಜೆಗಳನ್ನು ರೂಪಿಸಿ, ಎಳೆಯ ಮಕ್ಕಳ ಮೈಮನಗಳನ್ನು ಹದಗೊಳಿಸಿ ಮಾನವೀಯತೆಯನ್ನು ದಾನವೀಯ ಮನುಕುಲ ಶಿಲ್ಪ ಶಿಕ್ಷಕರನ್ನು ಸೆಪ್ಟಂಬರ್ ತಿಂಗಳನಲ್ಲಿ ಗೌರವಿಸುವುದು ಸಮಾಜಕ್ಕೆ ಮಾದರಿ ಎಂದರು.

 ಮಕ್ಕಳನ್ನು ಸ್ವತಂತ್ರವಾಗಿ ಅಲೋಚಿಸುವ, ಅವರನ್ನು ಸೃಜನಶೀಲರನ್ನಾಗಿ ಮಾಡುವ ಹೊಣೆ ಶಿಕ್ಷಕರ ಮೇಲಿದೆ ಎಂದರು.ನಗರದ ರುಕ್ಮೀಣಿ ನಗರ, ವಂಟಮೂರಿ ಕಾಲನಿ, ರಾಮತೀರ್ಥ ನಗರ , ವೈಭವ ನಗರ , ಕಣಬರಗಿ ಶಾಲಾ ವಿದ್ಯಾಥರ್ಿಗಳಿಗೆ ಸುಮಾರು 25 ರೂ. ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶೈಲಜಾ ಭಿಂಗೆ, ಜಯಶೀಲ ಬ್ಯಾಕೋಡ್ ಸ್ವಾಗತಿಸಿದರು. ವಿಜಯ ಲಕ್ಷ್ಮೀ ಮನ್ನಿಕೇರಿ, ಇಂದಿರಾ ಮೊಟೆಬೆನ್ನೂರ, ಪ್ರಿಯಾಂಕ ಪಾಟೀಲ, ಸವಿತಾ ಪಾಟೀಲ, ನಂದಿಯಾ ಮಾಸ್ತಿಹೊಳಿಮಠ, ರಾಜೇಶ್ವರಿ ಹಿರೇಮಠ, ದಾನಮ್ಮಾ ಜಳಕಿ, ನಿಶಿಗಂಧ ಕನುರ್ಕರ್, ಮುತಾಲಿಕ ದೇಸಾಯಿ, ಹೆಮ್ಮ ಸೂನ್ನೋಳಿ ಹಾಗೂ ಉಪಸ್ಥಿತರಿದ್ದರು. ಮಧು ಪಟ್ಟಣಶೆಟ್ಟಿ ವಂದಿಸಿದರು. ಅನು ಮೆಳವಂಕಿ ನಿರೂಪಿಸಿದರು.