ದೇವಗಿರಿ ಗ್ರಾಮದಲ್ಲಿ ಪುಟ್ಟರಾಜರ 112ನೇ ಜಯಂತ್ಯೋತ್ಸವ
112th birth anniversary of Puttaraja celebrated in Devagiri village
ಗದಗ 10 : ಗಾನಗಂಧರ್ವ ಕಲಾ ಟ್ರಸ್ಟ್ ಗದಗ ಹಾಗೂ ಡಾ. ಪಂ .ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಪಾಠಶಾಲೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ದೇವಗಿರಿ ಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಕಾರದೊಂದಿಗೆ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳ ಆಶ್ರಮ ದೇವಗಿರಿಯಲ್ಲಿ ಪೂಜ್ಯ ಪುಟ್ಟರಾಜರ 112ನೇ ಜಯಂತ್ಯೋತ್ಸವ ಪೂಜ್ಯರ ಭಾವಚಿತ್ರ ಮೆರವಣಿಗೆಯೊಂದಿಗೆ ಪ್ರಾರಂಭವಾಗಿ ಸಂಜೆ ಸಾಮೂಹಿಕ ವಿವಾಹ, ಸಂಗೀತ ಸಮಾರೋಹ ನಾಡಿನ ಸುಪ್ರಸಿದ್ಧ ಗಾಯಕರು-ವಾದಕರಿಂದ ಜರುಗಿದವು.
ಈ ಕಾರ್ಯಕ್ರಮದಲ್ಲಿ ವೀರಣ್ಣ ಹೊಂಬರಡಿ ಅವರ ಅಧ್ಯಕ್ಷತೆವಹಿಸಿದ್ದರು. ದೇವಗಿರಿಯ ಯಲ್ಲಪ್ಪ ಬಡ್ಡಿ ಹಾಗೂ ಶಾಲಾ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಗುರು ಪುಟ್ಟರಾಜ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯವನ್ನು ಶೇಗುಣಿಸಿಯ ವಿರಕ್ತಮಠದ ಪೂಜ್ಯಶ್ರೀ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ವಹಿಸಿದ್ದರು
ಸಾನಿಧ್ಯವನ್ನು ಕೂಡಲ ನಂಜೇಶ್ವರ ಮಠದ ಪೂಜ್ಯಶ್ರೀ ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಮ್ಮುಖವನ್ನು ಮುಂಡರಗಿಯ ಬ್ರಹನ್ಮಠದ ಬೀರೇಶ್ವರ ಶರಣರು ಬೃಹನ್ಮಠ ವಹಿಸಿದ್ದರು. ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ಶಿವರಾಜ ಸಜ್ಜನರ ಅಧ್ಯಕ್ಷತೆಯಲ್ಲಿ ನಡೆಯಿತು ಶಾಸಕ ಬಸವರಾಜ ಶಿವಣ್ಣನವರು ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಗುರು ಪುಟ್ಟರಾಜ ಪುರಸ್ಕಾರವನ್ನು ಪಂ. ಹೇಮರಾಜಶಾಸ್ತ್ರಿ ಹಿರೇಮಠ ಹೇಡಿಗ್ಗೊಂಡರಿಗೆ, ಕೀರ್ತನ ಶ್ರೀ ಪ್ರಶಸ್ತಿಯನ್ನು ಕೊಪ್ಪಳದ ಮಹೇಶ ಗದಗಿನಮಠ ಅವರಿಗೆ ಹಾಗೂ ಕುಮುಟಾದ ಪಂ. ಮಂಜುನಾಥ ಭಟ್ ಅವರಿಗೆ ವಾದ್ಯ ಶ್ರೀ ಪ್ರಶಸ್ತಿ ಪ್ರಧಾನ ಮಾಡಿ, ಗೌರವಧನ 5000 ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಇದೇ ವೇದಿಕೆಯಲ್ಲಿ ದೇವಗಿರಿ, ಹಾವೇರಿ, ಹುಬ್ಬಳ್ಳಿಯ ವಿವಿಧ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಧಾರವಾಡದ ಗಾಯತ್ರಿ ಹಿರೇಮಠ ಅವರ ಭರತನಾಟ್ಯ ಜನಮನ ಸೂರೆಗೊಂಡಿತು. ಇಂದುಮತಿ ಸಾಲಿಮಠ. ಹಾಸ್ಯ ಪ್ರವಚನ ಸೋತ್ರುಗಳನ್ನು ನಗೆಗಡಲಲ್ಲಿ ತೇಲಿಸಿತು.
ಸಿದ್ದಲಿಂಗಶಾಸ್ತ್ರಿ ಶಿವಯೋಗಿ ಶಾಸ್ತ್ರಿ ಗಡ್ಡದಮಠರು ಕಾರ್ಯಕ್ರಮ ನಿರೂಪಿಸಿದರು. ದೇವಗಿರಿ-ಯಲ್ಲಾಪುರ ಗ್ರಾಮದ ಸಕಲ ಸದ್ಭಕ್ತರು, ಸಮಸ್ತ ನಾಗರಿಕರು ಹಾಗೂ ಪುಟ್ಟರಾಜ ಗವಾಯಿಗಳವರ ಕಟಮ್ಮ ಮತ್ತು ಟಾಟಾ ಮ್ಯಾಜಿಕ್ ಮಾಲೀಕರ ಸಂಘ ಹಾಗೂ ಚಾಲಕರ ಸಂಘ ಮತ್ತು ಟ್ಯಾಕ್ಟರ್ ಮಾಲೀಕರ ಚಾಲಕರ ಸಂಘ ದೇವಗಿರಿಯವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 