ಪೌಷ್ಠಿಕ ಆಹಾರ-ತಾಜಾ ತರಕಾರಿ ಸೇವಿಸಿ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು : ರಾಧಾ ಮಣ್ಣೂರ

ಗದಗ, 21: ಸಪ್ಟೆಂಬರ್ ತಿಂಗಳಿನಲ್ಲಿ ಪೋಷಣ ಮಾಷಾಚರಣೆಯ ಕಾರ್ಯಕ್ರಮವನ್ನು ಗರ್ಭಿಣಿ ತಾಯಂದಿರ ಹೆಸರಿನಲ್ಲಿ ಒಂದು ಸಸಿಯನ್ನು ನೆಡುವ ಮೂಲಕ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಉದ್ಘಾಟನೆ ಮಾಡಲಾಗಿದೆ. ಎಲ್ಲರೂ ತಮ್ಮ ಮನೆಯ ಅಂಗಳದಲ್ಲಿ ಪೌಷ್ಠಿಕ ಕೈ ತೋಟಗಳನ್ನು ನಿರ್ಮಾಣ ಮಾಡಿಕೊಂಡು ಅದರಿಂದ ಬರುವ ತಾಜಾ ತರಕಾರಿಗಳನ್ನು ಆಹಾರದಲ್ಲಿ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾ ಅಧಿಕಾರಿ ರಾಧಾ ಮಣ್ಣೂರ ಕರೆ ನೀಡಿದರು.  

ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಗದಗ ಅವರ ಆಶ್ರಯದಲ್ಲಿ ಏರಿ​‍್ಡಸಿದ್ದ ಪೋಷಣ ಮಾಸಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿನ ರಕ್ತಹೀನತೆ ಅಪೌಷ್ಟಿಕತೆ ಕುರಿತು ಅವರು ವಿವರಿಸಿದರು.   

ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಮುಖಂಡರಾದ ಶರದ್ ಹುಯಿಲಗೋಳ ಮಾತನಾಡಿ, ಮಹಿಳೆಯರು ಗರ್ಭಿಣಿ ಆವಸ್ಥೆಯಿಂದ ಹಿಡಿದು ಮಗುವಿಗೆ ಜನ್ಮ ನೀಡುವ ಅವಧಿಯವರೆಗೂ ಸಮಯಕ್ಕೆ ಅನುಗುಣವಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದರೊಂದಿಗೆ ಸದೃಢ ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ನಾಗಾವಿ ವೃತ್ತದ ಮೇಲ್ವಿಚಾರಕಿ ಜಾಹೀದಾಬೇಗಮ್ ಕಮತಗಿ ಮಾತನಾಡಿ, ಆರು ತಿಂಗಳು ತುಂಬಿದ ಮಗುವಿಗೆ ಪೌಷ್ಠಿಕ ಗಂಜಿ ನೀಡುವುದರೊಂದಿಗೆ ಅನ್ನಪಾಶನದಂತಹ ಕಾರ್ಯಕ್ರಮಗಳಲ್ಲ್ಲಿ ಪಾಲ್ಗೊಂಡು ಅಂಗನವಾಡಿಗಳಿಂದ ಜರುಗುವ ಮಾತೃ ವಂದನ, ಬೇಟಿ ಪಡಾವೋ ಬೇಟಿ ಬಚಾವೊ, ಗರ್ಭಿಣಿಯರ ಸೀಮಂತ ಕಾರ್ಯಕ್ರಮ, ಪೌಷ್ಠಿಕ ಆಹಾರದ ಪ್ರಾತ್ಯಕ್ಷತೆ, ಮಕ್ಕಳ ಹುಟ್ಟುಹಬ್ಬ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 

ಸಂರಕ್ಷಣಾಧಿಕಾರಿ ರಾಜೇಶ್ವರಿ ಮೇಟಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಕಮತ, ಮಾತೃ ವಂದನ ಸಂಯೋಜಕ ಶ್ರೀಧರ ಪೂಜಾರ, ತಾಲೂಕು ಮಟ್ಟದ ಪೋಷಣ ಅಭಿಯಾನದ ಸಂಯೋಜಕರಾದ ಪವನ್, ಸಂಗೀತ, ಕಾವೇರಿ ಅವರುಗಳು ತಮ್ಮ ವ್ಯಾಪ್ತಿಯ ವಿಷಯಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು. 

ಕಳಸಾಪೂರ ಗ್ರಮ ಪಂಚಾಯತಿ ಸದಸ್ಯರಾದ ನಜೀರಸಾಬ ಅಂಗಡಿ, ರಾಜಕುಮಾರ ಕಟ್ಟಿಮನಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. 

ಕಳಸಾಪುರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಕೊಟ್ರೇಶ ಓಲಿ, ಪಂಚಾಯತ ಅಧ್ಯಕ್ಷ ಅನಸೂಯಾ ಬೇಟಿಗೇರಿ ಉಪಾಧ್ಯಕ್ಷೆ ರಾಜೇಶ್ವರಿ ಘೋಡಕೆ, ಗ್ರಾಪಂ ಸದಸ್ಯರಾದ ರಾಮಣ್ಣ ಅಣ್ಣಿಗೇರಿ, ನಿಂಗಯ್ಯ ಇಟಗಿಮಠ, ಕಿರಣಕುಮಾರ ಕೋಪರ್ಡೆ, ಚಂದ್ರು ಲಮಾಣಿ, ಕೃಷ್ಣಾ ಲಮಾಣಿ, ಮಾಸಬ್ಬಿ ಪೆಂಡಾರಿ, ಶಾಂತವ್ವ ಬಜಂತ್ರಿ, ಲಕ್ಷ್ಮೀ ಚೌಹಾಣ, ರೇಣುಕಾ ಚೌಹಾಣ, ಮುಖಂಡರಾದ ಸಿ.ಬಿ. ಪಲ್ಲೇದ ಹನಮಂತಪ್ಪ ಹಾದಿಮನಿ, ಹನಮಂತ ನಾಯ್ಕರ, ಚಂದ್ರಕಲಾ ಇಟಗಿಮಠ ವೇದಿಕೆಯಲ್ಲಿದ್ದರು. 

ಸುಶೀಲಾ ಗೋಟೂರು, ಲಲಿತಾ ಲಮಾಣಿ, ಶಾರದಾ ತೋಟದ, ಶ್ರೀಮತಿ ಎಸ್‌.ಎಚ್‌. ಇನಾಮತಿ ಅವರು ಮುತ್ತೈದೆಯರಿಗೆ ಉಡಿ ತುಂಬುವ ಜನಪದ ಹಾಡುಗಳನ್ನು ಹಾಡಿ ಗಮನಸೆಳೆದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.    

ಇನ್ನರ್‌ವೀಲ್ ಕ್ಲಬ್ ಗದಗ ಮಿಡ್‌ಟೌನ್ ಅಧ್ಯಕ್ಷೆ ಪ್ರೀತಿ ಶಿವಪ್ಪನಮಠ, ಖಜಾಂಚಿ ಮಂಗಳಾ ನಾಲ್ವತ್ತವಾಡಮಠ, ಮಾಜಿ ಅಧ್ಯಕ್ಷರಾದ ಶೈಲಜಾ ಕವಲೂರ, ಡಾ. ಉಮ ಗಾಣಿಗೇರ, ಸಂಪನ್ಮೂಲ ವ್ಯಕ್ತಿಗಳಾದ ಡಾ.ದೀಪಾ ಮೂರಶಿಳ್ಳಿನ, ಸದಸ್ಯರಾದ ಶ್ರತಿ ಕಮತರ ಅವರು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ನೆರವೇರಿಸಿದರು.   

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕ-ಸಾಧಕಿಯರನ್ನು ಸನ್ಮಾನಿಸಲಾಯಿತು. ನಾಗಾವಿ ವೃತ್ತದ ಸರ್ವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. 

ದೀಪಾ ಕಾಳೆ ಪ್ರಾರ್ಥಿಸಿದರು. ಎಂ.ಎ. ಸಿದ್ಧಿಪಾಟಿಲ ಸ್ವಾಗತಿಸಿದರು. ಎಸ್‌.ಟಿ. ಕನಕರಡ್ಡಿ ವಂದಿಸಿದರು. ಸೌಮ್ಯ  ಹುಯಿಲಗೋಳ ನಿರೂಪಿಸಿದರು.