ಪ್ರತಿಯೊಂದು ಹೆಣ್ಣಿನಲ್ಲಿಯೂ ತಾಯಿತನ ಹುಟ್ಟಿನಿಂದಲೇ ನಿಸರ್ಗದತ್ತವಾಗಿರುತ್ತದೆ: ಕಿಟದಾಳ

ಲೋಕದರ್ಶನ ವರದಿ

ಧಾರವಾಡ 24: ಹೆಣ್ಣು ಅಕ್ಷರಸಹ ತಾಯಿಯಾದಾಗಲೇ ಅವಳು ತಾಯಿಯಲ್ಲ. ಪ್ರತಿಯೊಂದು ಹೆಣ್ಣಿನಲ್ಲಿಯೂ ಹುಟ್ಟಿನಿಂದಲೇ ತಾಯಿತನ ಎಂಬುದು ನಿಸರ್ಗದತ್ತವಾಗಿ ಬಂದಿರುತ್ತದೆ. ಎಲ್ಲ ಧನಾತ್ಮಕ ಮೌಲಿಕ ಗುಣಗಳ, ಪ್ರೀತಿ, ಪಾಲನೆ, ಪೋಷಣೆ ಎಂಬ ವಿಶೇಷ ಗುಣಗಳ ಸಹಿಷ್ಣುತೆಯ ಪರಮಾವಧಿಯ ಮೂರ್ತಸ್ವರೂಪವೇ ತಾಯಿ ಎಂದು ಸಾಮಾಜಿಕ ಹೋರಾಟಗಾತರ್ಿ, ಖ್ಯಾತ ಹಿರಿಯ ನ್ಯಾಯವಾದಿ ಸವದತ್ತಿಯ ಅನಸೂಯಾ ಎಮ್. ಕಿಟದಾಳ ತಾಯಿಯನ್ನು ವಿಶ್ಲೇಷಿಸುತ್ತಾ ಹೇಳಿದರು.

                 ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಮಲ್ಲವ್ವ ಯಲ್ಲಪ್ಪ ಸಿದ್ನಾಳ ದತ್ತಿ ಕಾರ್ಯಕ್ರಮದಲ್ಲಿ `ಆಧುನಿಕ ತಾಯಿಯ ಮುಂದಿರುವ ಸವಾಲುಗಳು' ಕುರಿತು ಅವರು ಮಾತನಾಡಿದರು.

ಅವಿಭಕ್ತ ಕುಟುಂಬದಲ್ಲಿ ತಾಯಿ, ಮಕ್ಕಳು ಇಬ್ಬರೂ ಸುರಕ್ಷಿತವಾಗಿದ್ದರು. ಇಂದು ಅವಿಭಕ್ತ ಕುಟುಂಬ ಮಾಯವಾಗಿ ಅತೀ ಚಿಕ್ಕ ಕುಟುಂಬಗಳು ಜನ್ಮ ತಾಳಿದ್ದರಿಂದ ತಾಯಿಗೆ ಭದ್ರತೆ, ರಕ್ಷಣೆ ಇಲ್ಲದಾಗಿ ತಾಯಿ ಆತಂಕದಲ್ಲಿ ಇದ್ದಾಳೆ. ಆಧುನಿಕ ವಿದ್ಯುನ್ಮಾನ ಪರಿಕರಗಳಾದ ಟಿ.ವಿ. ಮೋಬೈಲ್, ಫೇಸ್ಬುಕ್, ವ್ಯಾಟ್ಸ್ಆ್ಯಪ್, ಯುಟೂಬ್, ಇಂಟರನೆಟ್ಗಳ ಪ್ರಭಾವದಿಂದ ಮತ್ತು ಅನುಚಾನವಾಗಿ ಅವುಗಳನ್ನು ಒಳಿತು-ಕೆಡಕು ಒಂದೂ ಅರಿಯದೇ ಬಳಸುತ್ತಿರುವುದರಿಂದ ಮಕ್ಕಳು ತಾಯಂದಿರ ನಿಯಂತ್ರಣಕ್ಕೂ ಸಿಗದೇ ದಾರಿ ತಪ್ಪುತ್ತಿವೆ. ಇದನ್ನು ಹೇಗೆ ಸರಿಪಡಿಸುವುದು, ಮನೆಯಿಂದ ಆಚೆ ಹೋಗುವ ಮಕ್ಕಳು, ತಾಯಿ ಇಬ್ಬರೂ ಲೈಂಗಿಕ ದೌರ್ಜನ್ಯಕ್ಕೆ ಪದೇ ಪದೇ ಬಲಿಪಶು ಆಗುತ್ತಿರುವ ಸಂಕಷ್ಟಗಳಿಂದ ಹೇಗೆ ಪಾರಾಗುವುದು ಎಂಬ ಧಾವಂತ ಮತ್ತು ಕಠಿಣ ಸವಾಲುಗಳು ಆಧುನಿಕ ತಾಯಿಯ ಮುಂದಿವೆ. ತಾಯಿ ಹೆಣ್ಣಾದರೂ ಹೆಣ್ಣು ಮಗುವಿಗೆ ಜನ್ಮ ನೀಡುವದು ಯೋಗ್ಯವಲ್ಲ ಎಂಬ ಒತ್ತಡದಿ ಭ್ರೂಣ ಹತ್ಯೆಗಳಂತಹ ಹೇಯ ಪಾಪ ಕೃತ್ಯದಲ್ಲಿ ಒತ್ತಡದಿ ಭಾಗಿಯಾಗುವ ಅನಿವಾರ್ಯತೆಯಿಂದಾಗಿ ಹೆಣ್ಣು ಹೆರುವ ಸ್ವಾತಂತ್ರ್ಯ ತನಗೆ ಇಲ್ಲವೇ ಎಂಬುದು ಆಧುನಿಕ ತಾಯಿ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಇಂತಹ ಕಠಿಣ ಸವಾಲುಗಳಿಂದಾಗಿ ತಾಯಿ ಆರೋಗ್ಯದ ಮೇಲೆ ಬಹಳಷ್ಟು ದುಷ್ಟರಿಣಾಮ ಆಗಿರುವುದನ್ನು ನಾವು ನೋಡುತ್ತಿದ್ದೇವೆ. ತಾಯಿಯನ್ನು ಭಯದ ಭೀತಿಯಿಂದ ಹೊರತಂದು ಅವಳನ್ನು ಸಂರಕ್ಷಿಸುವ ಜವಾಬ್ದಾರಿ ಆಧುನಿಕ ನಾಗರಿಕ ಸಮಾಜದ ಮೇಲೆ ಇದೆ ಎಂದು ಕಿಟದಾಳ ಹೇಳಿದರು.

                ಖ್ಯಾತ ಹಿರಿಯ ಸಮಾಜ ಚಿಂತಕ ಪ್ರೊ. ಕೆ. ಎಸ್. ಶಮರ್ಾ ತಮ್ಮ ಅಧ್ಯಕ್ಷೀಯ ಸಮಾರೋಪ ನುಡಿಗಳನ್ನಾಡುತ್ತತಾಯಿ ನಮ್ಮ ಸಮಾಜದ ಭದ್ರ ನೆಲೆಗಟ್ಟು, ತಾಯಿ ಅತ್ಯಂತ ಮೇಲ್ಮಟ್ಟದ ಪವಿತ್ರ ಸ್ಥಾನದಲ್ಲಿದ್ದಾಳೆ. ಇಂದಿನ ಆತಂಕಕಾರಿ ಬೆಳವಣಿಗೆಗಳಿಂದಾಗಿ, ಪುರುಷ ಪ್ರಧಾನ ಸಮಾಜದ ಸಂಚು ಮತ್ತು ಕೃತ್ಯಗಳಿಂದಾಗಿ ತಾಯಿಗೆ ನೀಡಿದ ಪಾವಿತ್ರ್ಯ ಸ್ಥಾನವು ಹದಗೆಡುತ್ತಿದೆ. ತಾಯಿಯ ಪಾವಿತ್ರ್ಯದ ಸ್ಥಾನ ಹದಗೆಟ್ಟರೆ ಮೊದಲು ಕುಟುಂಬಕ್ಕೆ, ನಂತರ ಸಮಾಜಕ್ಕೆ ದುರಂತ ಕಟ್ಟಿಟ್ಟ ಬುತ್ತಿ. ಕಾರಣ ತಾಯಿಯನ್ನು ಮಾನವೀಯ ಮೌಲ್ಯಗಳಿಂದ ಸಮಾಜ ಗೌರವಿಸಬೇಕು. ಅಂದಾಗ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಉಳಿಯುವವು ಮತ್ತು ಬೆಳೆಯುವವು ಎಂದರು.

                ಕೂಡಾ ತನ್ನನ್ನು ತಾನು ಆತ್ಮವಿಮಷರ್ೆ ಮಾಡಿಕೊಂಡು ಸರಿಯಾದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇಂದಿನ ತಾಯಿಯ ಮುಂದಿರುವ ಸವಾಲುಗಳಲ್ಲಿ ಒಂದು. ತಾಯಿ ತನ್ನ ಹಾಲನ್ನು ತನ್ನ ಮಗನಿಗೆ ಉಣಿಸಿದರೆ, ತನ್ನ ಬಾಹ್ಯ ಸೌಂದರ್ಯ ಕೊಚ್ಚಿಹೋಗುವುದೆಂದು, ಭಾವಿಸಿದ ಆಧುನಿಕ ತಾಯಿ ಕೇವಲ ಬಾಹ್ಯ ಸೌಂದರ್ಯಕ್ಕೆ ಬೆಲೆ ನೀಡಿ, ಮನೆಯಾಳಿನ ಮೂಲಕ ತನ್ನದೆ ಕರುಳಾದ ಮಗುವಿಗೆ ಎಮ್ಮೆ ಹಾಲನ್ನು ಬಾಟಲಿಯಿಂದ ಕುಡಿಸಿದರೆ, ಕರುಳ ಬಳಿಯ ಸಂಬಂಧ ಕಡಿದು ಹೋಗಿ, ಮಗುವಿಗೆ ತಾಯಿಯಿಂದ ನಿಸರ್ಗದತ್ತವಾಗಿ ಹರಿದು ಬರುವ ಸಂಸ್ಕೃತಿ ಹೇಗೆ ಬಂದೀತು. ಬಾಹ್ಯ ಸೌಂದರ್ಯಕ್ಕೆ ಬೆಲೆ ನೀಡಿ ಆಂತರಿಕ ಸೌಂದರ್ಯ ಆಧುನಿಕ ತಾಯಿ ಹಾಳುಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

                ಸಂಘದ 129 ನೇ ಸಂಸ್ಥಾಪನೆಯ ದಿನಾಚರಣೆಯ ನಿಮಿತ್ತ ಪ್ರೊ. ಕೆ. ಎಸ್. ಶಮರ್ಾ ಅವರನ್ನು ಸಂಘದ ಪದಾಧಿಕಾರಿಗಳು  ಸನ್ಮಾನಿಸಿ ಗೌರವಿಸಿದರು.

                ದಿ. ಮಲ್ಲವ್ವ ಯಲ್ಲಪ್ಪ ಸಿದ್ನಾಳ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ದತ್ತಿದಾನಿ ಸುಲೋಚನಾ ಸಿದ್ನಾಳ ಮತ್ತು ಮಹದೇವ ಸಿದ್ನಾಳ ದಂಪತಿಗಳು ಉಪಸ್ಥಿತರಿದ್ದರು. ಸಂಘದ  ಕಾರ್ಯಕಾರಿ ಸಮಿತಿ ಸದಸ್ಯ ಪ್ರಫುಲ್ಲಾ ನಾಯಕ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಗಾಮನಗಟ್ಟಿ ವಂದಿಸಿದರು.

ಕವಿ ಬಿ. ಕೆ. ಹೊಂಗಲ ಹಾಗೂ ಮಧುಮತಿ ಸಣಕಲ್ಲ ಅವರು ತಾಯಿ ಕುರಿತು ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ, ಪ್ರೊ. ಬಿ. ಬಿ. ಸಾಣಿಕೊಪ್ಪ, ಡಾ. ಪ್ರಭಾ ನೀರಲಗಿ, ಶಂಕರ ಕುಂಬಿ, ಮನೋಜ ಪಾಟೀಲ, ರಾಮಚಂದ್ರ ಧೋಂಗಡೆ, ಮಹಾಂತೇಶ ನರೇಗಲ್ಲ, ಅವರಾಧಿ ಮುಂತಾದವರು ಭಾಗವಹಿಸಿದ್ದರು