ಹಿಂದೂ ಮಹಾಗಣಪತಿ ಪ್ರಚಾರ ರಥಕ್ಕೆ ಚಾಲನೆ

    ತಾಳಿಕೋಟೆ,  ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಮಹಾ ಮಂಡಳದ ವತಿಯಿಂದ ಪ್ರತಿ ವರ್ಷ ತಿಲಕ ರಸ್ತೆಯಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯ ಪ್ರಚಾರಾರ್ಥವಾಗಿ ರಥಕ್ಕೆ ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರು ಮಂಗಳವಾರರಂದು ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಅವರು ಗಣಪತಿಯ ಪೂಜೆಯಿಂದ ನಮ್ಮಲ್ಲಿ ಬರತಕ್ಕಂತಹ ಎಲ್ಲ ವಿಗ್ನಗಳು ದೂರವಾಗಲಿವೆ ಪ್ರತಿ ವರ್ಷ ಹಿಂದೂ ಮಹಾಗಣಪತಿ ಮಹಾ ಮಂಡಳದವರು 9 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾಗಿಬಂದಿದ್ದಾರೆ ಗಣೇಶೋತ್ಸವದ ನಿಜವಾದ ಅರ್ಥವನ್ನು ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವಾಗಲಿದೆ ಅಲ್ಲದೇ ಬಾಲಗಂಗಾಧರ ತಿಲಕ ಅವರು ಧರ್ಮ ಜಾಗೃತಿ ಗೋಸ್ಕರ ದೇಶ ರಕ್ಷಣೆಗಾಗಿ ಗಣೇಶೋತ್ಸವನ್ನು ಜಾರಿಗೆ ತರಲು ಹಿಂದೂ ಮಹಾ ಗಣಪತಿ ಮಹಾ ಮಂಡಳವನ್ನು ರಚಿಸಿ ಜಾಗೃತಿ ಮೂಡಿಸಿದರು ಅಂತಹ ಗಣೇಶೋತ್ಸವ ಹಬ್ಬದ ಸಂಸ್ಕೃತಿ ಮರೆ ಮಾಚಬಾರದೆಂಬ ಉದ್ದೇಶದೊಂದಿಗೆ ತಾಳಿಕೋಟೆ ಪಟ್ಟಣದಲ್ಲಿ ಯುವ ಸಮೂಹ ಹಿಂದೂ ಮಹಾ ಗಣಪತಿ ಮಹಾಮಂಡಳವನ್ನು ರಚಿಸಿದ್ದಾರೆ ಈ ಸಲ 5 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದರಿಂದ ದೇಶಭಕ್ತರಿಗೆ ನುಡಿನಮನ ಒಳಗೊಂಡಂತೆ ಧರ್ಮ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇಂತಹ ವಿಶೇಷ ಕಾರ್ಯಕ್ರಮಗಳ ಪ್ರಚಾರಾರ್ಥವಾಗಿ ಪ್ರತಿ ವರ್ಷದಂತೆ ಈ ಸಲವು ಮಹಾ ರಥವನ್ನು ನಿಮರ್ಿಸಿ ಚಾಲನೆ ಕೊಡಲಾಗಿದೆ ಎಂದರು.

ಈ ಸಮಯದಲ್ಲಿ ಹಿಂದೂ ಮಹಾಗಣಪತಿ ಮಹಾ ಮಂಡಳದ ಕಾಶಿನಾಥ ಅರಳಿಚಂಡಿ, ಅಂಬಾಜಿ ಘೋರ್ಪಡೆ, ಪ್ರಕಾಶ ಪಾಟೀಲ, ರಾಘವೇಂದ್ರ ವಿಜಾಪುರ, ವಿಶ್ವನಾಥ ಮೈಲೇಶ್ವರ, ವಿನಯ ಸ್ಥಾವರ